Advertisement

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.

09:20 PM Dec 24, 2024 | Team Udayavani |

ಮೇಷ:  ಮಕ್ಕಳಿಂದ ಸಂತೋಷದ ಸುದ್ದಿ. ವ್ಯವಹಾರ ಕೌಶಲದಿಂದ  ಕಾರ್ಯಸಿದ್ಧಿ. ದವಸ ಧಾನ್ಯ ವ್ಯಾಪಾರಿಗಳಿಗೆ  ಲಾಭ. ವಿದ್ಯಾರ್ಥಿಗಳ  ಮುಂದಿನ ವ್ಯಾಸಂಗದ ಕುರಿತು ಚಿಂತನೆ. ಗುರುಹಿರಿಯರಿಂದ ಹಿತವಚನ.

Advertisement

ವೃಷಭ: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಊರಿನ ದೇವಾಲಯಕ್ಕೆ ಭೇಟಿ. ಪ್ರಾಪ್ತವಯಸ್ಕರಿಗೆ  ವಿವಾಹ ನಿಶ್ಚಯ. ಹಿರಿಯರಿಗೆ ಸಂತೋಷದ ಅನುಭವ. ಮನೆಯಲ್ಲಿ  ಶುಭಕಾರ್ಯಕ್ಕೆ ಮುನ್ನುಡಿ

ಮಿಥುನ: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ವ್ಯವಹಾರಸ್ಥರಿಗೆ ಸಣ್ಣ ಪ್ರಯಾಣ ಸಂಭವ.

ಕರ್ಕಾಟಕ: ಸಮಷ್ಟಿ ಹಿತದ ಕಾರ್ಯಗಳಲ್ಲಿ ಭಾಗಿ. ಎಲ್ಲರ  ಆರೋಗ್ಯ ಉತ್ತಮ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ.ವ್ಯವಹಾರ ಸಂಬಂಧ  ಪೂರ್ವದಿಕ್ಕಿನಲ್ಲಿ ಪ್ರಯಾಣ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿಗೆ ಪಾಲಕರ ಪ್ರಯತ್ನ.

ಸಿಂಹ: ವ್ಯವಹಾರದಲ್ಲಿ  ನಿರೀಕ್ಷೆ ಮೀರಿ   ಪ್ರಗತಿ. ಪ್ರಾರ್ಥನೆಯಿಂದ ದೇವತಾನುಗ್ರಹ ಪ್ರಾಪ್ತಿ. ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಒತ್ತಡ. ವಿದ್ಯಾರ್ಥಿಗಳ  ಲೋಕಜ್ಞಾನ ವೃದ್ಧಿಗೆ ಅನುಕೂಲದ ವಾತಾವರಣ.

Advertisement

ಕನ್ಯಾ: ಅವಿವಾಹಿತ ಹುಡುಗರಿಗೆ ಶೀಘ್ರ ವಿವಾಹ ಯೋಗ. ಕುಶಲ ಕರ್ಮಿಗಳಿಗೆ  ಶೀಘ್ರ ಉದ್ಯೋಗ ಪ್ರಾಪ್ತಿ. ಗೃಹಿಣಿಯರ ಸ್ವೋದ್ಯೋಗ ಯೋಜನೆ ಪ್ರಗತಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಮಧ್ಯಮ ಲಾಭ.

ತುಲಾ: ಎಲ್ಲ ಜವಾಬ್ದಾರಿಗಳ  ನಿರ್ವಹಣೆ ನಿರಾತಂಕ. ಉದ್ಯಮದ ಉತ್ಪನ್ನಗಳ ಜಾಹೀರಾತಿಗೆ ಧನವ್ಯಯ. ಕ್ರೀಡೆ, ಸಂಗೀತಾದಿ  ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಿಂದ ನೆಮ್ಮದಿ.

ವೃಶ್ಚಿಕ: ಹಿತಶತ್ರುಗಳ  ಒಳಸಂಚುಗಳು ವಿಫ‌ಲ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ  ಗಮನಾರ್ಹ ಸುಧಾರಣೆ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ  ಸಂಭವ. ನೆರೆಯವರೊಡನೆ ಬಾಂಧವ್ಯ ವೃದ್ಧಿ. ನ್ಯಾಯಾಲಯ ವ್ಯವಹಾರ ವಿಳಂಬ.

ಧನು: ಅನಿರೀಕ್ಷಿತ ಸಹಾಯ ಪ್ರಾಪ್ತಿ. ಕೌಟುಂಬಿಕ ಸಮಸ್ಯೆ ಪರಿಹಾರ. ಶಿಕ್ಷಿತರಿಗೆ  ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ  ಆಸಕ್ತರಿಗೆ ಅನುಕೂಲದ ವಾತಾವರಣ.

ಮಕರ: ಆಪ್ತರಿಂದ ಅಯಾಚಿತ ಸಹಾಯ.  ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ವಾತ್ಸಲ್ಯದ ಸಂಬಂಧ ವೃದ್ಧಿ. ಸಣ್ಣ ಉದ್ಯಮಿಗಳಿಗೆ ಆದಾಯ ವೃದ್ಧಿ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಪ್ರಚಂಡ  ಯಶಸ್ಸು.

ಕುಂಭ: ಸದುದ್ದೇಶಕ್ಕೆ ಸಂಚಿತ ಧನ ವಿನಿಯೋಗ. ಕಿರಿಯ  ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಗೃಹಿಣಿಯರ ಉದ್ಯಮ ವಿಸ್ತರಣೆ. ಅಪರೂಪದ ಬಂಧುಗಳ ಭೇಟಿಯಿಂದ  ಮನೆಮಂದಿಗೆ ಹರ್ಷ. ಹಿರಿಯರಿಂದ ಸಮಯೋಚಿತ ಸಲಹೆ.

ಮೀನ: ಹೊಸ ವ್ಯವಹಾರದಲ್ಲಿ ಅಪರಿಮಿತ  ಮುನ್ನಡೆ.ಹಣಕಾಸು ವ್ಯವಹಾರ ಸುಧಾರಣೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಾಧಾನ್ಯ. ಸಮಾಜದ  ಸಂತ್ರಸ್ತರಿಗೆ ಸಹಾಯ. ಕುಲದೇವರ ದರ್ಶನದಿಂದ ಮನಸ್ಸಿಗೆ  ನೆಮ್ಮದಿ. ಹಿರಿಯರ ಆರೋಗ್ಯದ ಬಗ್ಗೆ  ಜಾಗ್ರತೆಯಿಂದಿರಿ.

Advertisement

Udayavani is now on Telegram. Click here to join our channel and stay updated with the latest news.

Next