Advertisement

Daily Horoscope: ವಧೂ ವರಾನ್ವೇಷಣೆಯಲ್ಲಿ ನಿರತರಾಗಿರುವವರಿಗೆ ಶುಭ ಸಮಾಚಾರ

07:26 AM Dec 01, 2023 | Team Udayavani |

ಮೇಷ: ಸಾವಧಾನದಿಂದ ಕಾರ್ಯಕ್ಷೇತ್ರದಲ್ಲಿ ಮುಂದುವರಿಯಿರಿ..ಉದ್ಯೋಗ ಸ್ಥಾನದಲ್ಲಿ ತೋರುವ ಕಾರ್ಯ ವೈಖರಿಗೆ ಪ್ರಶಂಸೆ. ಸ್ವಂತ ಉದ್ಯಮ ದಾಖಲೆಯ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಅವಕಾಶ ಲಭ್ಯ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.

Advertisement

ವೃಷಭ: ಮಹತ್ವಾಕಾಂಕ್ಷೆಯಲ್ಲಿ ಕಾರ್ಯಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ವಿಭಾಗ ಆರಂಭ. ಸ್ವಂತ ಉದ್ಯಮದ ಹಳೆಯ ವಿವಾದ ನಿವಾರಣೆ. ಯಂತ್ರೋಪಕರಣ ಮಾರಾಟಗಾರರಿಗೆ ಗ್ರಾಹಕರ ಸಂಖ್ಯೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ರಖಂ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಲಾಭ.

ಮಿಥುನ: ಪ್ರಿಯವಾದುದನ್ನು ಬಿಟ್ಟು ಹಿತವಾದುದನ್ನು ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯದಕ್ಷತೆಗೆ ಗೌರವ. ದೂರದಲ್ಲಿರುವ ಕುಟುಂಬದ ಹಿತೈಷಿಯ ಭೇಟಿ. ಸ್ವಂತ ಉದ್ಯಮದ ಪ್ರಗತಿ ಸ್ಥಿರ. ತಂದೆಯ ಕಡೆಯ ಬಂಧುಗಳ ಆಗಮನ.

ರ್ಕಾಟಕ: ಆಗಿದ್ದ ನಷ್ಟ ತುಂಬಿಸಿಕೊಟ್ಟ ವ್ಯವಹಾರ ಕೌಶಲ! ಉದ್ಯೋಗ ಕ್ಷೇತ್ರದ ಆತಂಕ ದೂರ. ಸರಕಾರಿ ನೌಕರರಿಗೆ ವರ್ಗಾವಣೆಯ ಸೂಚನೆ. ಹೊಸ ಉದ್ಯಮ ಆರಂಭಿಸಲು ಸಮಾಲೋಚನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ.

ಸಿಂಹ: ಒಂದೇ ದಿನದಲ್ಲಿ ಯಶಸ್ಸುಗಳ ಸರಮಾಲೆ ಧಾರಣೆಯ ಯೋಗ! ಉದ್ಯೋಗದಲ್ಲಿ ಸ್ಥಾನಕ್ಕೆ ತಕ್ಕ ಪ್ರತಿಫ‌ಲ. ಉದ್ಯಮ ಸ್ಥಳದಲ್ಲಿ ದೇವತಾ ಕಾರ್ಯ. ನೆಂಟರ ಮನೆಯಲ್ಲಿ ಶುಭಕಾರ್ಯ. ಕೌಟುಂಬಿಕ ವ್ಯಾಜ್ಯ ಮಾತುಕತೆಯ ಮೂಲಕ ಪರಿಹಾರ. ಹಿರಿಯರ ಆರೋಗ್ಯ ವೃದ್ಧಿ.

Advertisement

ಕನ್ಯಾ: ದೇವರಲ್ಲಿ ಸ್ಥಿರವಾದ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗಿರಿ. ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ.

ತುಲಾ: ಉದ್ಯೋಗದಲ್ಲಿ ಸಂತೃಪ್ತಿಯ ಅನುಭವ. ಉದ್ಯಮ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಗೃಹೋ ಪಯೋಗಿ ಸಾಮಗ್ರಿಗಳ ಖರೀದಿ ಗುರು ಮಂದಿರ ದರ್ಶನ, ಅಪೂರ್ವ ಸಾಧಕರ ಭೇಟಿ. ಆತ್ಮೀಯ ಗೆಳೆಯರ ಪುತ್ರಿಯ ವಿವಾಹ. ಉದ್ಯೋಗದ ನಿಮಿತ್ತ ಸಣ್ಣ ಪ್ರವಾಸ.

ವೃಶ್ಚಿಕ: ಆತ್ಮನಿಂದನೆ ಸಲ್ಲದು. ನಾವೇ ಭಾಗ್ಯವಂತ ರೆಂಬ ಭಾವನೆಗೆ ಜಯ. ಉದ್ಯೋಗದಲ್ಲಿ ಗೌರವದ ಸ್ಥಾನ. ಉದ್ಯಮದಲ್ಲಿ ಹೊಸ ವಿಭಾಗ ಆರಂಭ. ಯಂತ್ರೋಕರಣ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಯ ಕಾಲ. ಊರಿನ ದೇವಾಲಯ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ.

ಧನು: ಅನೇಕ ದಿನಗಳಿಂದ ಮಾಡುತ್ತಿದ್ದ ಪ್ರಯತ್ನಕ್ಕೆ ಫ‌ಲ ಲಭ್ಯ. ಉದ್ಯೋಗದಲ್ಲಿ ಹೊಸ ಬಗೆಯ ಹೊಣೆಗಾರಿಕೆ ನಿರ್ವಹಣೆಯಲ್ಲಿ ಯಶಸ್ಸು. ಆದಾಯ ವೃದ್ಧಿ ಯೋಜನೆಗಳ ಕುರಿತು ಸಹಚರರೊಡನೆ ಸಮಾಲೋಚನೆ. ಬಾಲ್ಯದ ಗುರುಗಳ ಹಠಾತ್‌ ಭೇಟಿ.

ಮಕರ: ಸಕಾರಾತ್ಮಕ ಚಿಂತನೆಯಿಂದ ಮನೋ ಬಲ ವೃದ್ಧಿ. ಹೊಸ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ಸು ಪ್ರಾಪ್ತಿ. ಉದ್ಯಮ ಸಂಸ್ಥೆಗೆ ಗಣ್ಯರ ಭೇಟಿ. ವಧೂ ವರಾನ್ವೇಷಣೆಯಲ್ಲಿ ನಿರತರಾಗಿರುವವರಿಗೆ ಶುಭ ಸಮಾಚಾರ. ಸಣ್ಣ ಕೃಷಿಭೂಮಿ ಖರೀದಿಸುವ ಪ್ರಯತ್ನ ಮುಂದುವರಿಕೆ.

ಕುಂಭ: ನಿರಂತರ ಕ್ರಿಯಾಶೀಲತೆಯ ಕಾರಣದಿಂದ ಮತ್ತಷ್ಟು ಹೊಸ ಜವಾಬ್ದಾರಿಗಳು. ಉದ್ಯೋಗ ಸ್ಥಾನದಲ್ಲಿ ಮುಂದಿನ ವ್ಯವಸ್ಥೆಗಳ ಚಿಂತನೆ. ಉದ್ಯಮ ನಿರ್ವಹಣೆ ನಿರಾತಂಕ. ಮುದ್ರಣ ಸಾಮಗ್ರಿಗಳ ಮಾರಾಟ ವೃದ್ಧಿ. ಹಿರಿಯರ, ಗೃಹಿಣಿಯರ ಹಾಗೂ ಮಕ್ಕಳ ಆರೋಗ್ಯ ಉತ್ತಮ.

ಮೀನ: ಸಪ್ತಾಹ ಅಂತ್ಯವಾಗುತ್ತಿದ್ದಂತೆ ಇನ್ನಷ್ಟು ಶುಭ ಸೂಚನೆಗಳು. ಸಹೋದ್ಯೋಗಿಗಳ ಉತ್ತಮ ಸಹಕಾರ. ಸರಕಾರಿ ಅಧಿಕಾರಿಗಳ ಪೂರ್ಣ ಸಹಾಯ. ವಿದ್ಯಾರ್ಥಿಗಳಿಗೆ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ. ಪ್ರಾಪ್ತವಯಸ್ಕರಿಗೆ ಶೀಘ್ರ ವಿವಾಹ ಯೋಗ. ಉದ್ಯೋಗ ಅರಸುತ್ತಿರುವವರಿಗೆ ಸ್ವಾವಲಂಬಿಗಳಾಗಲು ಮಾರ್ಗದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next