Advertisement
ವೃಷಭ: ಹಲವು ಬಗೆಯ ಸಂಪಾದನಾ ಮಾರ್ಗ ಗಳಲ್ಲಿ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಸಹಕಾರ ವೃದ್ಧಿಗೆ ವಿಶೇಷ ಬಳಗ ನಿರ್ಮಾಣ. ಗೃಹೋದ್ಯಮದ ಉತ್ಪನ್ನ ಗಳಿಗೆ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ. ಅವಿವಾಹಿತ ಹುಡುಗರಿಗೆ ವಿವಾಹ ಯೋಗ.
Related Articles
Advertisement
ಕನ್ಯಾ: ಹೊಸ ಅನುಭವಗಳಿಂದ ವೃದ್ಧಿಯಾದ ಜೀವನಾಸಕ್ತಿ. ಎಲೆಕ್ಟ್ರಾನಿಕ್ಸ್ , ಎಲೆಕ್ಟ್ರಿಕಲ್ಸ್ ವ್ಯಾಪಾರ ವೃದ್ಧಿ. ವೃತ್ತಿ ಪರಿಣತಿ ವೃದ್ಧಿಗೆ ಸೂಕ್ತ ಮಾರ್ಗದರ್ಶನ. ವರಾನ್ವೇಷಣೆ ಯಲ್ಲಿ ಯಶಸ್ವಿಯಾದ ಸಮಾಧಾನ. ಮನೆಯಲ್ಲಿ ದೇವತಾ ಕಾರ್ಯ. ಹಿರಿಯರು ಮಹಿಳೆಯರು, ಮಕ್ಕಳಿಗೆ ಸಂಭ್ರಮ.
ತುಲಾ: ನಿರಂತರ ಸಾಧನೆಯಿಂದ ಸಾಧಿಸಿದ ಚಿತ್ತಸ್ಥೈರ್ಯ. ಉದ್ಯೋಗ ಸ್ಥಾನದಲ್ಲಿ ವಿಶ್ವಾಸ ಮೂಡಿಸುವ ವಾತಾವರಣ. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ.
ವೃಶ್ಚಿಕ: ನಿಶ್ಚಿಂತೆಯಿಂದ ಕಾರ್ಯಪ್ರವೃತ್ತರಾಗುವ ದಿನ. ಉದ್ಯೋಗಸ್ಥರಿಗೆ ಹರ್ಷದ ಸನ್ನಿವೇಶ ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಲೇವಾದೇವಿ ವ್ಯವಹಾರದಿಂದ ದೂರವಿರಿ.
ಧನು: ನಿಮ್ಮ ಕ್ರಿಯಾಶೀಲತೆಗೆ ಸವಾಲಾಗುವಷ್ಟು ಕೆಲಸಗಳ ಹೊರೆ. ಉದ್ಯೋಗಸ್ಥರ ನಡುವೆ ಸಹಕಾರ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಯಥೋಚಿತ ಮಾರ್ಗದರ್ಶನ. ನೂತನ ವಾಹನ ಖರೀದಿ. ಮನೆಯಲ್ಲಿ ಇಷ್ಟದೇವತಾರ್ಚನೆ.
ಮಕರ: ಸಂಸಾರ, ಉದ್ಯೋಗ ಎರಡರ ನಿರ್ವಹಣೆಯ ಸವಾಲು. ಹೊಸ ವಿಭಾಗದಲ್ಲಿ ಪರಿಣತಿ ಪ್ರಾಪ್ತಿ. ಸಹೋದ್ಯೋಗಿಯ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ.
ಕುಂಭ: ವಿರಾಮ ಕಾಲದಲ್ಲೂ ಬರುವ ಕಾರ್ಯ ರಂಗದ ಕರೆಗಳಿಗೆ ಸ್ಪಂದನ ಉದ್ಯೋಗಸ್ಥರಿಗೆ ಹೊಸ ವಿಭಾಗಕ್ಕೆ ಪ್ರವೇಶ. ವೃತ್ತಿರಂಗದ ಮಿತ್ರರಿಂದ ಮಾರ್ಗದರ್ಶನಕ್ಕೆ ಕೋರಿಕೆ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಬೇಡಿಕೆಗಳಿಗೆ ಸ್ಪಂದಿಸುವ ಒತ್ತಡ.
ಮೀನ: ವಾರದ ಅಂತ್ಯ ಸಮೀಪವಾದಾಗ ಕೆಲಸದ ಒತ್ತಡ. ಒಡನಾಡಿಗಳಿಂದ ಸರ್ವವಿಧ ಸಹಾಯ. ಜನಸೇವಾ ಕಾರ್ಯಗಳು ನಿರಾತಂಕವಾಗಿ ಮುಂದುವರಿಕೆ. ನಿರ್ಮಾಣ ವ್ಯವಹಾರ ಮತ್ತೆ ಆರಂಭ. ಗುರುಸಮಾನ ವ್ಯಕ್ತಿಯ ಆಗಮನ. ಮಕ್ಕಳಿಗೆ ಧಾರ್ಮಿಕ ವಿಧಿಗಳಲ್ಲಿ ತರಬೇತಿ ನೀಡುವ ಕ್ರಮಗಳ ಶುಭಾರಂಭ