Advertisement

Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ

07:33 AM Dec 13, 2024 | Team Udayavani |

ಮೇಷ: ಯೋಚನೆಗಳು ಸ್ಪಷ್ಟವಾಗಿರಲು ಮನೋನಿಯಂತ್ರಣ ಇರಲಿ. ಉದ್ಯೋಗ, ವ್ಯವಹಾರಗಳಲ್ಲಿ ಮಹತ್ವದ ದಿನ. ಆರ್ಥಿಕ ಸಂಸ್ಥೆ ನೌಕರರಿಗೆ ಅಧಿಕ ಹೊರೆ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ.

Advertisement

ವೃಷಭ: ಮೊದಲಿಗಿಂತ ಹೆಚ್ಚು ಅನುಕೂಲದ ಪರಿಸ್ಥಿತಿ. ಹಣಕಾಸು ವ್ಯವಹಾರ ಸುಗಮ. ಸರಕಾರಿ ನೌಕರರಿಗೆ ಸಡಿಲಾದ ಆತಂಕ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ.

ಮಿಥುನ: ಪ್ರಾಪಂಚಿಕ ದೃಷ್ಟಿಯಿಂದ ಶುಭಕಾಲ. ಶಾರೀರಿಕ ತೊಂದರೆಗಳಿಗೆ ವಿದಾಯ. ಕಾರ್ಯ ನಿರ್ವಹಣೆ ನಿರಾತಂಕವಾಗಿ ನೆಮ್ಮದಿ. ವ್ಯವಹಾರಸ್ಥರಿಗೆ ಅನುಕೂಲದ ದಿನ. ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ.

ಕರ್ಕಾಟಕ: ಕಡಿಮೆಯಾದ ಅಶುಭಫ‌ಲಗಳು. ಉದ್ಯೋಗಸ್ಥರಿಗೆ ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಸುಧಾರಣೆ. ಕಟ್ಟಡ, ನಿವೇಶನ ಖರೀದಿ-ಮಾರಾಟ ವ್ಯವಹಾರಸ್ಥರಿಗೆ ಲಾಭ. ವ್ಯವಹಾರ ಸಂಬಂಧ ಪೂರ್ವಕ್ಕೆ ಪ್ರಯಾಣ.

ಸಿಂಹ: ಹಂಚಿಕೊಂಡಷ್ಟೂ ವೃದ್ಧಿಯಾಗುವ ಆನಂದ. ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಊರಿನ ಪ್ರಮುಖ ದೇವಿ ಆಲಯಕ್ಕೆ ಭೇಟಿ.

Advertisement

ಕನ್ಯಾ: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಉದ್ಯೋಗಸ್ಥರಿಗೆ, ಸಹೋದ್ಯೋಗಿಗಳ ಸಹಾಯ.ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೊಟ್ಟು ಮರೆತಿದ್ದ ಸಾಲ ಮರಳಿ ಕೈಗೆ.

ತುಲಾ: ಕಾದು ಸುಸ್ತಾಗಿ ಆಸೆ ಬಿಟ್ಟಿದ್ದ ಸಹಾಯ ಲಭ್ಯ. ಉದ್ಯೋಗ ಕ್ಷೇತ್ರದಲ್ಲಿ ಬದಲಾದ ಕಾರ್ಯಗಳು. ನಿವೇಶನ, ಮನೆ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಅನುಕೂಲ. ಕೃಷಿ ಉತ್ಪನ್ನ ಮಾರಾಟ ಗಾರರಿಗೆ ತೃಪ್ತಿಕರ ಲಾಭ. ಹಿರಿಯರಿಗೆ ಉಲ್ಲಾಸ.

ವೃಶ್ಚಿಕ: ಕಾರ್ಯಗಳು ನಿರೀಕ್ಷೆಯಂತೆ ಕೈಗೂಡುವ ದಿನ. ಗಿರವಿ ವ್ಯವಹಾರದ ವ್ಯಾಪಾರಿಗಳಿಗೆ, ಸಂಸ್ಥೆಗಳಿಗೆ ಉತ್ತಮ ಲಾಭ. ಮಾಲಕ- ನೌಕರರ ಬಾಂಧವ್ಯ ವೃದ್ಧಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ.

ಧನು: ನಿಸ್ವಾರ್ಥ ಮನೋಭಾವದ ದುಡಿಮೆಗೆ ಶುಭಫ‌ಲ. ಹೊಂದಾಣಿಕೆ, ಕಾರ್ಯನಿಷ್ಠೆಗಳಿಂದ ಯಶಸ್ಸು. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ. ನಿವಾಸ ಬದಲಾವಣೆಗೆ ಪೂರ್ವಸಿದ್ಧತೆ.

ಮಕರ: ತಾಳ್ಮೆಯಿಂದ ಯೋಚಿಸಿ ಕೆಲಸ ಮಾಡಿ. ಉದ್ಯೋಗ ಸ್ಥಾನದಲ್ಲಿ ಅನುಕೂಲ ವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ.ಹೆಚ್ಚಿನವರಿಗೆ ಮಿಶ್ರಫ‌ಲ ಕೊಡುವ ದಿನ.

ಕುಂಭ: ಸವಾಲುಗಳು ಹೆಚ್ಚಾದಷ್ಟೂ ನಿಭಾಯಿಸುವ ಸಾಮರ್ಥ್ಯ. ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ ಚಟುವಟಿಕೆಗಳಿಂದ ಆಯಾಸ. ಗೃಹೋದ್ಯಮಗಳ ಆದಾಯ ವೃದ್ಧಿ.

ಮೀನ: ಇನ್ನಷ್ಟು ಹೊಣೆಗಾರಿಕೆಗಳನ್ನು ನಿರೀಕ್ಷಿಸಿರಿ. ಕಾರ್ಯ ಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫ‌ಲ. ಸ್ವಂತದ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ. ಹೊಸ ವ್ಯವಹಾರದಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ.

Advertisement

Udayavani is now on Telegram. Click here to join our channel and stay updated with the latest news.

Next