Advertisement

ಈ ರಾಶಿಯವರು ಇಂದು ಆರೋಗ್ಯ ವಿಚಾರದಲ್ಲಿ ಉದಾಸೀನತೆ ತೋರುವುದು ಒಳ್ಳೆಯದಲ್ಲ

08:22 AM Nov 13, 2021 | Team Udayavani |

ಮೇಷ: ಸರಕಾರಿ ವ್ಯವಹಾರಗಳಲ್ಲಿ ಪ್ರಗತಿ. ಅಪೇಕ್ಷಿಸಿ ದಂತೆ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಸಾಂಸಾರಿಕ ಸುಖ ವೃದ್ಧಿ . ಮಕ್ಕಳ ಅಭಿವೃದ್ಧಿ ಗಾಗಿ ಧನವ್ಯಯ ಸಂಭವ. ಅವಿವಾಹಿತರಿಗೆ ವಿವಾಹ ಭಾಗ್ಯ.

Advertisement

ವೃಷಭ: ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಮಯ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ವಾತಾವರಣ.

ಮಿಥುನ: ಅಧ್ಯಯನದಲ್ಲಿ ತಲ್ಲೀನತೆ ಪ್ರಗತಿ. ದೂರದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ  ಸಹೋದ್ಯೋಗಿ ಗಳಿಂದ ಸಹೋದರ ಸಮಾನರಿಂದ ಸಂದಭೋìಚಿತವಾಗಿ ಸಹಾಯ ಸಂಭವ. ಗೃಹದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ತೋರಬಹುದು.

ಕಟಕ: ಆರೋಗ್ಯ ಗಮನಿಸಿ ನಿರ್ಲಕ್ಷ್ಯಮಾಡದಿರಿ. ತಾಳ್ಮೆ ಯಿಂದ ಕೆಲಸ ಕಾರ್ಯ ನಿರ್ವಹಿಸಿ ಆರ್ಥಿಕ ವಿಚಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ಮಧ್ಯಮ. ಗುರುಹಿರಿಯರ ಸಹಕಾರ ಲಭ್ಯ. ವಿದ್ಯಾರ್ಥಿಗಳಿಗೆ ಅನುಕೂಲ ಪರಿಸ್ಥಿತಿ.

ಸಿಂಹ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಹೆಚ್ಚಿದ ದೇಹಾಯಾಸ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷೆಗೂ ಮೀರಿದ ಧನಾರ್ಜನೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ನಿರೀಕ್ಷಿತ ಸ್ಥಾನ ಲಾಭ.

Advertisement

ಕನ್ಯಾ: ಸುದೃಢ ಆರೋಗ್ಯ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ವರಮಾನ. ಆಲೋಚಿಸಿದ ರೀತಿಯಲ್ಲಿ ಕೆಲಸ ಕಾರ್ಯಗಳು ಸಾಧಿಸಿದ್ದರಿಂದ ಮಾನಸಿಕ ತೃಪ್ತಿ. ಬಂಧುಮಿತ್ರರ ಸಹಕಾರ ಗೃಹದಲ್ಲಿ ಸಂತಸದ ವಾತಾವರಣ.

ತುಲಾ: ಆರೋಗ್ಯ ವೃದ್ಧಿ. ಅತೀ ಆಸೆ ಮಾಡದೆ ಬಂದ ಅವಕಾಶ ಉಪಯೋಗಿಸಿಕೊಳ್ಳಿ. ಉತ್ತಮ ಜನ ಮನ್ನಣೆ. ನಿರೀಕ್ಷೆಗಿಂತಲೂ ಅಧಿಕ ಧನಾರ್ಜನೆ. ನಿರೀಕ್ಷಿಸಿದ ಕಾರ್ಯ ಸಾಧಿಸಿದ ಸಮಾಧಾನ. ವಿದ್ಯಾರ್ಥಿಗಳಿಗೆ ಶುಭ ಫ‌ಲದ ದಿನ.

ವೃಶ್ಚಿಕ: ರಾಜಕೀಯ ನಾಯಕರಿಗೆ ಉತ್ತಮ ಜನಮನ್ನಣೆ. ಹೆಚ್ಚಿನ ಜವಾಬ್ದಾರಿ ಸಿಗುವ ಅವಕಾಶ. ನೂತನ ಮಿತ್ರರ ಸಮಾಗಮ. ಬಂಧುಗಳಿಂದ ಪ್ರೋತ್ಸಾಹ. ಗೃಹಸ್ಥರಿಗೆ, ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿಗಳ ಸುಖ.

ಧನು: ಪಾಲುದಾರಿಕಾ ವ್ಯವಹಾರಸ್ಥರೂ, ದಂಪತಿಗಳೂ ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಪ್ರಯಾಣ ಅವಕಾಶ. ಸ್ಥಾನಮಾನಕ್ಕೆ ಕೊರತೆ ಕಾಣದು. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯ ಸುಧೃಢ.

ಮಕರ: ಪರದೇಶದ ಕಾರ್ಯಗಳಲ್ಲಿ ನಿರೀಕ್ಷಿತ ಗೌರವಾದಿ ಪ್ರಾಪ್ತಿ. ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಿತ್ರ ರಲ್ಲಿ, ಮಕ್ಕಳಲ್ಲಿ ತಾಳ್ಮೆಯಿಂದ ವರ್ತಿಸಿ. ಜಲೋತ್ಪನ್ನ ವಸ್ತುಗಳಿಂದ, ಆಹಾರೋದ್ಯಮ, ಆಭರಣ ವ್ಯವಹಾರಸ್ಥರಿಗೆ ನಿರೀಕ್ಷಿತ ಲಾಭ.

ಕುಂಭ: ಅನ್ಯರ ಸಹಾಯ ನಿರೀಕ್ಷಿಸದೆ  ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಗುರಿ ಸಾಧಿಸಿರಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದಯಶಸ್ಸು. ಗಣಿ, ಭೂ ವ್ಯವಹಾರ, ಆಹಾರೋ ದ್ಯಮದವರಿಗೆ ಅನುಕೂಲ ಪರಿಸ್ಥಿತಿ.

ಮೀನ: ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ದೇಶ ವಿದೇಶದ ವಿದ್ಯಾಲಯದಲ್ಲಿ ಅವಕಾಶ. ದೀರ್ಘ‌ ಪ್ರಯಾಣದಿಂದ ಲಾಭ. ರಾಜಕೀಯ ಕ್ಷೇತ್ರದಲ್ಲಿ ರಹಸ್ಯ ವ್ಯವಹಾರದಿಂದ ನಿರೀಕ್ಷಿತ ಸಾಧನೆ. ಅಭಿವೃದ್ಧಿದಾಯಕ ಧನಾರ್ಜನೆ.
Advertisement

Udayavani is now on Telegram. Click here to join our channel and stay updated with the latest news.

Next