Advertisement

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:32 AM Jul 05, 2022 | Team Udayavani |

ಮೇಷ:

Advertisement

ಉತ್ತಮ ಆರೋಗ್ಯ ಜವಾಬ್ದಾರಿಯುತ ಉದ್ಯೋಗ ವ್ಯವಹಾರದಿಂದ ಎಲ್ಲರ ಪ್ರಶಂಸೆ ಸಂಭವ. ಸಂದರ್ಭಕ್ಕೆ ಸರಿಯಾದ ಉಪಾಯ ಆಲೋಚನೆಯಿಂದ ಕೂಡಿ ಕಾರ್ಯವೈಖರಿ. ದೂರ ಪ್ರಯಾಣ ದಿಂದಲೂ, ಧನಾರ್ಜನೆ ಸಂಭವ.

ವೃಷಭ:

ಗೌಪ್ಯತೆಯ ವ್ಯವಹಾರದಿಂದ ಲಾಭ. ಜಲೋತ್ಪನ್ನ ವಸ್ತುಗಳಿಂದ ನಿರೀಕ್ಷಿತ ಫ‌ಲಿತಾಂಶ. ಆರೋಗ್ಯ ಗಮನಿಸಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ಕೊರತೆಯಾಗದು. ಸಣ್ಣ ಪ್ರಮಾಣದ ಉಳಿತಾಯ. ನಿಷ್ಠೆಯಿಂದ ವ್ಯವಹರಿಸಿ ಅಭಿವೃದ್ಧಿ ಸಾಧಿಸಿರಿ.

ಮಿಥುನ:

Advertisement

ಆರೋಗ್ಯ ಸ್ಥಿರ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಲಾಭ. ಸ್ಥಾನಾದಿ ಸುಖ. ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಅಭಿ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಹರ್ಷದಾಯಕ. ವಿದ್ಯಾರ್ಥಿಗಳಿಗೆ ನಾನಾ ಸೌಕರ್ಯದಿಂದ ಕೂಡಿದ ಸಮಯ.

ಕರ್ಕ:

ಆರೋಗ್ಯದಲ್ಲಿ ಸುಧಾರಣೆ. ಜವಾಬ್ದಾರಿಯುತ ಕೆಲಸ ಕಾರ್ಯ ವೈಖರಿಯಿಂದ ಜನಮನ್ನಣೆ. ಸ್ಥಾನ ಸುಖ ವೃದ್ಧಿ. ಅನ್ಯರ ಸಹಕಾರ ನಿರೀಕ್ಷಿಸದೇ ಕಾರ್ಯ ಪ್ರವೃತ್ತರಾಗಿ. ಆಸ್ತಿ ವಿಚಾರದಲ್ಲಿ ಮುನ್ನಡೆ.

ಸಿಂಹ:

ಕೆಲವು ಸಮಯದಿಂದ ಸಹಿಸಿಕೊಂಡು ಬಂದ ಕ್ಲೇಷಗಳಿಗೆ ಮುಕ್ತಿ. ಪೂರ್ವ ನಿರ್ಧಾರಿತ ಯೋಜನೆಗಳು ಸಫ‌ಲ. ನಾಯಕತ್ವದಿಂದ ನಿರೀಕ್ಷಿತ ಸಾಧನೆ. ವಾಕ್‌ಚತುರತೆಯಿಂದ ಜನಮನ್ನಣೆ. ಆರೋಗ್ಯ ವೃದ್ಧಿ. ಎಲ್ಲಾ ವಿಧಗಳಲ್ಲೂ ಯಶಸ್ಸು ಲಭಿಸುವ ಅವಕಾಶ.

ಕನ್ಯಾ:

ಆರೋಗ್ಯ ಉತ್ತಮ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಗುರುಹಿರಿಯರ ಮೇಲಧಿಕಾರಿಗಳ ಸಹಕಾರ ಮಾರ್ಗ ದರ್ಶನ ಲಾಭ.ಸಾಂಸಾರಿಕ ಸುಖ ತೃಪ್ತಿದಾಯಕ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೃಪ್ತಿ.

ತುಲಾ:

ಚುರುಕು ಬುದ್ಧಿ ಇದ್ದರೂ ಸ್ವಾಭಿಮಾನ ಶಾಂತ ಸ್ವಭಾವದಿಂದ ಕೂಡಿದ ಕಾರ್ಯವೈಖರಿ ಸಫ‌ಲತೆ, ರಾಜಕೀಯ ವಿಚಾರದಲ್ಲಿ ಬೇಸರವಿದ್ದರೂ ಸ್ಥಾನಮಾನ ಪ್ರಾಪ್ತಿ. ಹಿರಿಯರಲ್ಲಿ ವಿಶೇಷ ಪ್ರೀತಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೃಪ್ತಿ.

ವೃಶ್ಚಿಕ:

ದೇವತಾ ಕಾರ್ಯದಲ್ಲಿ ಶ್ರದ್ಧೆ ಭಕ್ತಿ ಪೂರ್ವಕ ನಿಮ್ಮನ್ನು ತೊಡಗಿಸಿಕೊಂಡು ಸಂತೋಷಪಡುವ ಸಮಯ. ಪಾಲುದಾರಿಕಾ ವ್ಯವಹಾರದಲ್ಲಿ ಭೂಮಿ ವಾಹನಾದಿ ವಿಚಾರಗಳಲ್ಲಿ, ಸರಕಾರಿ ಕಾರ್ಯ ಕ್ಷೇತ್ರದಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮ.

ಧನು:

ಆರೋಗ್ಯ ಗಮನಿಸಿ. ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ತೋರೀತು. ಜನ ಪದರೊಂದಿಗೆ ತಾಳ್ಮೆ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಅನ್ಯಥಾ ಚರ್ಚೆಗೆ ಆಸ್ಪದ ನೀಡದಿರಿ. ಧನಾರ್ಜನೆಗೆ ಕೊರತೆ ಕಾಣದು.

ಮಕರ:

ಅನ್ಯರ ಸಹಾಯವನ್ನು ಅಪೇಕ್ಷಿಸದೆ ಸ್ವಂತ ಪ್ರಯತ್ನದಿಂದ ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೃಪ್ತಿ. ಪಾಲುದಾರಿಕಾ ವ್ಯವಹಾರದಲ್ಲಿ ಸೂಕ್ಷ್ಮ ಗಮನಿಸಿ. ಉತ್ತಮ ಧನಾಗಮವಿದ್ದರೂ ಖರ್ಚು ನಿಗಾವಿರಲಿ.

ಕುಂಭ:

ಉತ್ತಮ ಆಲೋಚನೆಯಿಂದಲೂ ರಂಜಿಸುವ ಗುಣದಿಂದ ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಅನಿರೀಕ್ಷಿತ ಧನಾಗಮ, ಕೀರ್ತಿ, ಸ್ಥಾನ ಲಾಭ. ಪಾಲುದಾರಿಕಾ ವ್ಯವಹಾರ ಅಭಿವೃದ್ಧಿ. ದಾಂಪತ್ಯ ಸುಖ ತೃಪ್ತಿ. ಆತ್ಮವಿಶ್ವಾಸದಿಂದ ಕೂಡಿದ ಕಾಲ.

ಮೀನ:

ದೀರ್ಘ‌ ಪ್ರಯಾಣ ಸಂಭವ. ದೇಹಾಯಾಸ ತೋರಿತು. ದೂರದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಸಂಪತ್ತು ವೃದ್ಧಿ. ಮಕ್ಕಳಿಂದಲೂ ಗುರುಹಿರಿಯರಿಂದಲೂ ಸುಖ ಸಂತೋಷ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಬದಲಾವಣೆ. ಕ್ರಯವಿಕ್ರಯಕ್ಕೆ ಸಮಯ. ದಾಂಪತ್ಯದಲ್ಲಿ ತೃಪ್ತಿ. ಮೇಲಾಧಿಕಾರಿಗಳಲ್ಲಿ ಸಂಯಮದಿಂದ ವ್ಯವಹರಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next