Advertisement
ಕೋವೊವ್ಯಾಕ್ಸ್ ಗಾಗಿ ಕಂಪನಿಯು 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿದೆ ಮತ್ತು ಸೆಪ್ಟೆಂಬರ್ ವೇಳೆಗೆ ಲಸಿಕೆ ಬಿಡುಗಡೆ ಮಾಡುವ ಭರವಸೆ ಇದೆ ಎಂದು ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಆದರ್ ಪೂನವಾಲಾ ಮಾಹಿತಿ ನೀಡಿದ್ದಾರೆ.
Related Articles
Advertisement
ಜನವರಿ 30 ರಂದು, ನೊವಾವಾಕ್ಸ್ ಮೊದಲ ಮಧ್ಯಂತರ ಪರಿಣಾಮಕಾರಿತ್ವದ ಡೇಟಾವನ್ನು ಪ್ರಕಟಿಸಿದ ನಂತರ, ವಿಶ್ವದ ಅತಿದೊಡ್ಡ ಲಸಿಕೆ ತಯಾರಕರ ಸಿಇಒ ಜೂನ್ ವೇಳೆಗೆ ಲಸಿಕೆಯನ್ನು ಬಿಡುಗಡೆ ಮಾಡುವ ಭರವಸೆ ಇದೆ ಎಂದು ಹೇಳಿದ್ದರು. ಆದಾಗ್ಯೂ, ಈ ತಿಂಗಳ ಆರಂಭದಲ್ಲಿ, ಬ್ಲೂಮ್ ಬರ್ಗ್ ಇಕ್ವಿಟಿ ಶೃಂಗಸಭೆಯಲ್ಲಿ, ಆಗಸ್ಟ್ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದ್ದರು.
ಲಸಿಕೆ ಬಹುನಿರೀಕ್ಷಿತ ಲಸಿಕೆಗಳಲ್ಲಿ ಒಂದಾಗಿದೆ.
ಕೋವೊವ್ಯಾಕ್ಸ್ ಯುಎಸ್ ಮೂಲದ ನೊವಾವಾಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯ ಸೀರಮ್ ಇನ್ ಸ್ಟೀಟ್ಯೂಟ್ ನ ಆವೃತ್ತಿಯಾಗಿದೆ, ಇದು ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆಸಿದ 3 ನೇ ಹಂತದ ಪ್ರಯೋಗದಲ್ಲಿ 96% ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಸಂಸ್ಥೆ ತಿಳಿಸಿತ್ತು.
ಇನ್ನು, ಏಪ್ರಿಲ್ ನಿಂದ ಕಂಪನಿಯು ಲಸಿಕೆಯನ್ನು ದಾಸ್ತಾನು ಮಾಡಲು ಪ್ರಾರಂಭಿಸುತ್ತದೆ ಎಂದು ಪೂನವಾಲ್ಲಾ ಈ ಹಿಂದೆ ಹೇಳಿದ್ದರು. ಸೀರಮ್ ಇನ್ಸ್ಟಿಟ್ಯೂಟ್ 1 ಬಿಲಿಯನ್ ಡೋಸ್ ಲಸಿಕೆಯನ್ನು ತಯಾರಿಸಲಿದ್ದು, ಇದನ್ನು ಭಾರತ ಮತ್ತು ಕೊವಾಕ್ಸ್ ಎರಡಕ್ಕೂ ಪೂರೈಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಓದಿ : ಕೊರೋನ ಹಿನ್ನೆಲೆ ರಾಬರ್ಟ್ ವಿಜಯ ಯಾತ್ರೆ ಮುಂದಕ್ಕೆ