Advertisement

ಹಾಪ್‌ಕಾಮ್ಸ್‌ ವಹಿವಾಟು ತುಸು ಇಳಿಕೆ

11:16 AM Dec 07, 2019 | Suhan S |

ಬೆಂಗಳೂರು: ಶೀತಗಾಳಿ ಸೇರಿದಂತೆ ಆಗಾಗ ಆಗುತ್ತಿರುವ ಹವಾಮಾನದ ಬದಲಾವಣೆ ಇದೀಗ ಹಾಪ್‌ಕಾಮ್ಸ್‌ನ ಹಣ್ಣು ತರಕಾರಿ ಮಾರಾಟದ ಮೇಲೆ ಪರಿಣಾಮ ಬೀರಿದೆ. ಹಾಪ್‌ಕಾಮ್ಸ್‌ನಲ್ಲಿ ಸಾಮಾನ್ಯ ದಿನಗಳಲ್ಲಿ ಸುಮಾರು 80 ಟನ್‌ ಹಣ್ಣು ಮತ್ತು ತರಕಾರಿಗಳು ಮಾರಾಟವಾಗುತ್ತವೆ. ಆದರೆ ಆ ಮಾರಾಟ ಪ್ರಮಾಣ ಇದೀಗ 50ರಿಂದ 52 ಟನ್‌ಗೆ ಬಂದು ನಿಂತಿದೆ.

Advertisement

ನಗರದಲ್ಲಿ ಕಳೆದೆರಡು ದಿನಗಳಿಂದ ವಾತಾವರಣದಲ್ಲಿ ಬದಲಾವಣೆ ಆಗುತ್ತಲೇ ಇದೆ. ಮೋಡ ಮುಸುಕಿದ ವಾತಾವರಣದ ಜತೆಗೆ ಶೀತಗಾಳಿ ಕೂಡ ಶುರುವಾಗಿದೆ. ಈ ಎಲ್ಲಾ ಪ್ರಭಾವ ಹಾಪ್‌ಕಾಮ್ಸ್‌ನ ಹಣ್ಣು ಮತ್ತು ತರಕಾರಿ ಮಾರಾಟದ ಮೇಲೆ ಬಿದ್ದಿದೆ. ಆ ಹಿನ್ನೆಲೆಯಲ್ಲಿಯೇ ಶೇ.30ರಷ್ಟು ಮಾರಾಟ ಕಡಿಮೆಯಾಗಿದೆ. ಶುಕ್ರವಾರ ಹಾಪ್‌ಕಾಮ್ಸ್‌ನಲ್ಲಿ 20 ಟನ್‌ ಹಣ್ಣು ಹಾಗೂ 32 ಟನ್‌ ವಿವಿಧ ತರಕಾರಿ ಖರೀದಿ ಯಾಯಿತು. ಇದರಲ್ಲಿ ಬಾಳೆ ಮತ್ತು ಪಪ್ಪಾಯ ಹಣ್ಣು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಕಳೆದ ಹಲವು ದಿನಗಳಿಂದ ಹವಾಮಾನದಲ್ಲಿ ಆಗಾಗ ಬದಲಾವಣೆ ಆಗುತ್ತಲೇ ಇದೆ. ಇದರ ಜತೆಗೆ ಶೀತಗಾಳಿ ಕೂಡ ಶುರುವಾಗಿದೆ. ಇದು ಮಾರಾಟದ ಮೇಲೆ ಅಲ್ಪ ಮಟ್ಟಿನ ಪರಿಣಾಮ ಬೀರಿದೆ ಎಂದು ಹಾಪ್‌ಕಾಮ್ಸ್‌ ಅಧ್ಯಕ್ಷ ಚಂದ್ರೇಗೌಡ ಹೇಳಿದ್ದಾರೆ. ಸಾಮಾನ್ಯ ದಿನಗಳಲ್ಲಿ ಹಾಪ್‌ಕಾಮ್ಸ್‌ನಲ್ಲಿ ಸುಮಾರು 80 ಟನ್‌ ಹಣ್ಣು ಮತ್ತು ತರಕಾರಿ ಮಾರಾಟವಾಗುತ್ತದೆ. ಆದರೆ ಈಗ ಶೇ.30  ರಷ್ಟು ಕಡಿಮೆಯಾಗಿದೆ. ಕೆಲವು ದಿನಗಳ ಕಾಲ ಈ ಪ್ರಕ್ರಿಯೆ ಹೀಗೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬಾಳೆ ಹಣ್ಣು ಹೆಚ್ಚು ಮಾರಾಟ: ಕೆಲ ದಿನಗಳಿಂದ ಪ್ರತಿದಿನ 8-10 ಟನ್‌ ಬಾಳೆ ಹಣ್ಣು ಮತ್ತು 2-3 ಟನ್‌ ಪಪ್ಪಾಯ ಮಾರಾಟ ವಾಗು ತ್ತಿದೆ. ಪಪ್ಪಾಯ ಮತ್ತು ಬಾಳೆ ಹಣ್ಣುಗಳನ್ನು ಚಿಕ್ಕ ಬಳ್ಳಾಪುರ, ರಾಮನಗರ ಸೇರಿ ಬೆಂಗಳೂರಿನ ಸಮೀಪ ಪ್ರದೇಶಗಳ ರೈತರಿಂದ ಖರೀದಿಸಲಾಗುತ್ತಿದೆ ಎಂದು ಹಾಪ್‌ಕಾಮ್ಸ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ವ್ಯಾಪಾರ ತುಸು ಕಡಿಮೆ ಇರುತ್ತದೆ. ಜನವರಿ ತಿಂಗಳಲ್ಲಿ ಮತ್ತೆ ವ್ಯಾಪಾರ ಸಹಜ ಸ್ಥಿತಿಗೆ ಮರಳುತ್ತದೆ. ಇತರೆ ದಿನಗಳಲ್ಲಿ ಸೋಮ ವಾರದಂದು ಹಣ್ಣು ಮತ್ತು ತರಕಾರಿ ಸೇರಿಸುಮಾರು 90 ಟನ್‌ ಮಾರಾಟವಾಗುತ್ತದೆ ಎಂದು ಹೇಳಿದ್ದಾರೆ.

 

Advertisement

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next