Advertisement

ಹೂಂ ಹೇಳಿ ಸೀನ್ವಾಸಾ…

05:25 AM Oct 15, 2017 | |

“ಪುಲ್‌ಕೇಸಿನಗರದಾಗೆ ಸಾಬ್ರು, ತಮಿಳ್ರು ಜಾಸ್ತಿ. ಅಲ್ಲಿ ರೋಸನ್‌ ಬೇಗು ತಮಿಳ್ನಾಗೆ ಭಾಷ್ಣ ಮಾಡ್ಬೇಕಾದ್ರೆ “ಯಡ್ನೂರಪ್ಪ ಸಿಎಂ ಇರ್ಕಾಬೋದು ಶೋಭಾ ಕರಂದ್ಲಾಜೆ ಮೂಂಜಿ ಪಾತೆಂದಿರಿಕ್ಕಾಂಗ, ಇಪ್ಪು ವಂದು ಸಿದ್ರಾಮಯ್ಯ ಎನ್ನಾಮು ಪಂಡ್ರಿದಿಲ್ಲೆ, ಕಾಂಗ್ರೆಸ್‌ ಎನ್ನಾಮು ಪಂಡ್ರಿದಿಲ್ಲೆ’ ಅಂತಾ ಬೊಂಬ್ದಾ ಬಜಾಯಾತಾವ್ರೆ, ಆವಪ್ಪಾನೇ ಸಿಎಂ ಆಗಿದ್ದಾಗ ಏನ್‌ ಮಾಡಿದ್ರು ಅದ್ರಂತೆ’

Advertisement

ಅಮಾಸೆ: ನಮಸ್ಕಾರ ಸಾ..
ಚೇರ್ಮನ್ರು: ಏನ್ಲಾ ಅಮಾಸೆ, ಆಳೆ ಕಾಣೆ?
ಅಮಾಸೆ: ಸಿದ್ರಾರಾಮಣ್ಣೋರ ಗೌರ್ನಮೆಂಟು ನಮ್ಗೆಲ್ಲಾ ಸಂಸ್ಕೃತ ಸ್ಕೂಲ್‌ ನಡೆಸ್ತಾರಂತೆ. ಅದ್ನ ಕಲಿತ್ರೆ ದೇವಸ್ಥಾನದ್ಯಾಗೆ ಪೂಜಾರಿ ಆಗ್‌ಬೋದಂತೆ. ಅದ್ಕೆ ಒಸಿ ವಿಚಾಸೋಮಾ ಅಂತಾ ಹೋಗಿದ್ದೆ ಸಾ…

ಚೇರ್ಮನ್ರು: ನೀ ಯಾವ್‌ ಸೀಮೆ ಪೂಜಾರಿ ಆಯ್ತಿಯೋ ಆಮಾಸೆ? ವಾದ್ದಾಗೆ ಏಳೂ ದಿನ ಬಾಡು, ರಮ್ಮು ಅಂತ ತೇಲಾಡ್ತೀಯ, ನೀ ಸಂಸ್ಕೃತ ಕಲ್ತು ವತಾರೆ ಎದ್ದು ದೇವ್ರು ಮುಂದೆ ನಿಂತು ಮಂತ್ರಾ ಹೇಳಾಕಾಯ್ತದ?

ಅಮಾಸೆ: ಅದ್ಯಾಕಾಗಿಲ್ಲಾ ಸಾ…ದೇವಸ್ಥಾನದ್‌ ಪೂಜಾರಿ ಕೆಲ್ಸ ಸಿಕ್ರೆ ಎಣ್ಣೆ-ಬಾಡು ಬಿಟ್ಟಾಕೋಮಾ, ರಾಮ-ಕೃಷ್ಣಾ ಅಂತ ದೇವ್ರ ಸೇವೆ ಮಾಡೂಮಾ ಅಂದ್ಕೊಂಡಿದ್ದೀನಿ. 
ಚೇರ್ಮನ್ರು: ನೀನ್‌ ಎಣ್ಣೆ-ಬಾಡು ಬಿಟ್ಟು ದೇವ್ರು ಸೇವೆ ಮಾದ್ದಂಗೆ ಬುಡ್ಲಾ. ನಮ್‌ ಸಿಎಂ ಚಂದ್ರು ಅವ್ರು ಕನ್ನಡದ್ಯಾಗೆ ಮಂತ್ರ, ಅರ್ಚ್ನೆ ಮಾಡಿ, ನಮ್‌  ಜನ್ಗಳು ಕನ್ನಡ್ದಾಗೆ ಬೇಡ್ಕೊತಾರೆ, ದೇವ್ರಗೆ ಸಂಸ್ಕೃತ ಭಾಷೆ ಮಾತ್ರ ಬರೋದಾ ಅಂತ ಕೇಳವ್ರೆ.

ಆಮಾಸೆ: ಅಣ್ಣೋ ನಮ್‌ ಸಿಎಂ ಸಿದ್ರಾಮಣ್ಣೋರು ಅಲ್ವಾ, ಅವ್ರು ಆ ತರಾ ಹೇಳ್ದಗೇ ಇಲ್ವಲ್ಲಾ?
ಚೇರ್ಮನ್ರು: ಲೇ ಅಮಾಸೆ, ನಮ್‌ ಸಿಎಂ ಸಿದ್ರಾಮಣ್ಣೋರೇ ಕಣಾ, ಆದ್ರೆ ನಮ್‌ ಆ್ಯಕು ಪರ್ಮನೆಂಟ್‌ ಸಿಎಂ ಅಂದ್ರೆ ಮುಖ್ಯಮಂತ್ರಿ ಚಂದ್ರು ಕನ್ನಡಾªಗೆ ಮಂತ್ರ ಹೇಳಿ ಅಂತ್‌ ಹೇಳಿರೋದು ಕಣಾ.

Advertisement

ಅಮಾಸೆ: ಹೌದ್ರಾ…ಇನ್ನೂ ಒಳ್ಳೇದಾಯ್ತಲ್ಲ, ನಾನು ಸಂಸ್ಕೃತ ಸ್ಕೂಲ್‌ ಹೋಗೋ ಪ್ರೋಗ್ರಾಮೇ ಕ್ಯಾನ್ಸಲ್‌. ಸರ್ಕಾರ ಕನ್ನಡ್ದಾಗೆ ಮಂತ್ರ ಹೇಳ್ಳೋದ್ನಾ ಕಡ್ಡಾಯ ಅಂತಾ ಮಾಡಿದ್ರೆ, ನಮ್‌ ಹೈಕ್ಳು ಬಡ್ಡೆ„ತಾವು ಎಲ್ಲಾ ದೇವ್ರ ಗುಡಿತಾವ ಕ್ಯೂ ನಿಂತ್ಕೊಂಡು ಊರ್‌ನಾಗೆ ಲಗ್ನಾ ಆಗ್ದೇ ಇರೋ ಹುಡ್ಗಿರೆಲ್ಲಾ ಕರೂ ಬಾರಮ್ಮಿ ಅರ್ಚ್ನೆ ಮಾಡ್ತೀನಿ ಅಂತ ಶುರುಹಚ್‌ಕೊಂಡ್ರೆ ಕಷ್ಟ.  
ಚೇರ್ಮನ್ರು: ಮುಖ್ಯಮಂತ್ರಿ ಚಂದ್ರು, ಕನ್ನಡಾªಗೆ ಮಂತ್ರ ಹೇಳಿ, ಅರ್ಚ್ನೆ ಮಾಡಿ ಅಂದವ್ರೆ, ಹೈಕ್ಳನೆಲ್ಲಾ ಪೂಜಾರಿ ಮಾಡಿ ಅಂತ ಹೇಳಿಲ್ಲ ಅಮಾಸೆ. ಅದೂವೆ ಎಲ್ಲ ದೇವ್ರು ಗುಡೀಲಿ ಅಲ್ಲ, ಮುಜ್ರಾಯಿ ದೇವ್ರು ಗುಡಿಯಾಕೆ ಮಾತ್ರ.

ಆಮಾಸೆ: ಹೌದಾ ಸಾ….ಕನ್ನಡ್ದಾಗೆ ಮಂತ್ರ, ಅರ್ಚ್ನೆ ಸರಿ. ಆದ್ರೆ ಅಚ್ಚ ಕನ್ನಡ  ಎಲ್ರಗೂ ಅರ್ಥವಾಗ್ತದಾ? ಬೆಂಗಳೂರ್‌ ನ್ಯಾಗೆ ಕನ್ನಡ ಜೊತ್ಗೆ ಇಂಗ್ಲೀಸು ಸೇರಬೇಕಾಯ್ತದೆ.  ಓ ಲಾರ್ಡ್‌ ವೆಂಕ್‌ಟೇಶಾ, ಓ ಗಾಡ್‌ ಶ್ರೀನ್‌ವಾಸಾ, ಹಾಸ್ನ, ಮಂಡ್ಯದಾಗೆ ನಮೋ ಎಂಟೇಸಾ, ನಮೋ ಸೀನ್ವಾಸಾ ಅಂತೇಳ್ಬೇಕು, ಚಾಮರಾಜನಗರ ಭಾಗ್‌ದ್ಯಾಗೆ ಹೌದೇಳಿ ವೆಂಕ್ಟೇಸಾ, ಹೂಂ ಹೇಳಿ ಶ್ರೀನ್ವಾಸ, ಉತ್ರ ಕರ್ನಾಟಕದ್ಯಾಗೆ ಯೆಂಕ್ಟೇಶಣ್ಣಾ, ಶ್ರೀನಿವ್ವಾಸಪ್ಪಾ ಹ್ಯಾಂಗಿದೀಯಪ್ಪಾ ಅಂತೇಳಿದ್ರೆ ಅರ್ಥವಾಗೋದಲ್ವೆ?

ಚೇರ್ಮನ್ರು: ಒಂದೊಂದ್‌ ಊರು, ಒಂದೊಂದ್‌ ಕೇರಿನ್ಯಾಗೆ ಒಂದೊಂದ್‌ ರೀತಿ ಮಂತ್ರ, ಅರ್ಚ್ನೆ ಮಾಡಿದ್ರೆ ದೇವ್ರು ಗುಡಿ ಬಿಟ್ಟು ಓಡೋಬೇಕಾಯ್ತದೆ ಕನ್ಲಾ. ಅದು ಬಿಡು, ಈಗ ಎಮ್ಮೆಲ್ಲೆಗಳಿಗೂ ಅನ್ನಭಾಗ್ಯ ಅಂತೆ ಹೌದೇನಾ?
ಅಮಾಸೆ: ಹೌದು ಸಾ…ಅದಿವೇಸನ ನಡೆಯೋ ಟೈಂನ್ಯಾಗೆ ಎಮ್ಮೆಲ್ಲೆಗ್ಳು ಊಟಕ್ಕೋಬತ್ತೀವಿ ಅಂತ ಎಲ್ಲೆಲ್ಲೊ ಹೋಯ್ತಾರಂತೆ, ಅದ್ಕೆ ವಿಧಾನಸೌಧದಾಗೆ ಫ‌ುಲ್‌ ಮೀಲ್ಸ್‌ ಕೊಡ್ತಾರಂತೆ. ಅಷ್ಟೆ ಅಲ್ಲ ಸಾ…ರಾತ್ರಿ ಊಟ ಮಾಡಕ್ಕೂ ಕ್ಲಬ್‌ ಮಾಡ್ತಾರಂತೆ. ಅಷ್ಟೆ ಅಲ್ಲ ಸಾ…ರಾತ್ರಿ ಊಟ ಮಾಡಕ್ಕೂ ಕ್ಲಬ್‌ ಮಾಡ್ತಾರಂತೆ. ಅಷ್ಟೇ ಅಲ್ಲ ಸಾ…ಸ್ಪೀಕರ್‌ ಸಾಹೇಬ್ರು ಫ‌ುಲ್‌ ಸ್ಟ್ರಿಕುr ಸಾ….ಅಧಿವೇಶ° ನಡೆಯೋ ಟೈಂ ನ್ಯಾಗೆ ಗಂಟೆ ಹೊಡª ತಕ್ಸಣ ಸ್ಕೂಲ್‌  ಬಂದಂಗೆ ಅಸೆಂಬ್ಲೀಗ್‌ ಬರ್ಬೇಕು, ಇಲ್ಲಾಂದ್ರೆ, ಯಾರ್ಯಾರ್‌ ಶಾಸಕ್ರು ಲೇಟ್‌ ಲತೀಫ್ ಅಂತ ಪೇಪರ್‌ನ್ಯಾಗೆ ಅಡ್ವಿಟೇಜ್‌ ಕೊಟ್‌ ಬುಡ್‌ತೀನಿ ಹುಸಾರ್‌ ಅಂತ ಹೆಡ್‌ ಮಾಸ್ಟರ್‌ ಹೇಳªಂತೆ ಹೇಳಿದ್ರು.  ವತ್ತಾರೆ ಅಸೆಂಬ್ಲಿಗ್‌ ಬಂದ್‌ಮ್ಯಾಕೆ ವರಾತ ತೆಗೀಬಾರ್ಧು, ಧರಿ¡ -ಪ್ರತಿಭಟೆ° ಮಾಡಬಾರ್ಧು, ಅವೆಲ್ಲಾ ಏನಿದ್ರೂ ಊಟ ಆದ್‌ಮ್ಯಾಕೆ ಅಂತಾನೂ ಫ‌ರ್ಮಾನು ಹೊರ್‌ಡಿದ್ರು. ಅದಾದ್‌ ಮ್ಯಾಕೆ ಯಾರೂ ತುಟಿಕ್‌ ಪಿಟಿಕ್‌ ಅಂತಿಲ್ಲ ಸಾ…ಅಲ್ಲಿ.

ಚೇರ್ಮನ್ರು: ಹೌದಾ, ಅಂಗೆ ಇರ್ಬೇಕು ಬುಡ್ಲಾ. ಅದ್ಸರಿ ಅದೇನಾ ರೋಸನ್‌ಬೇಗ್‌ ಏನೇನೋ ಮಾತಾಡವ್ರಂತೆ.
ಅಮಾಸೆ: ಹೌದು ಸಾ… ಆವಪ್ಪ ಬೆಂಗಳೂರ್‌ನ್ಯಾಗೆ ಪುಲಿಕೇಸಿನಗರ ಅಂತ ಏರಿಯಾ ಐತೆ, ಅಲ್ಲಿ ಸಾಬ್ರು, ತಮಿಳು ಜಾಸ್ತಿ. ಅಲ್ಲಿ ತಮಿಳ್ನಾಗೆ ಭಾಷ್ಣ ಮಾಡ್ಬೇಕಾದ್ರೆ  “ಯಡ್ನೂರಪ್ಪ ಸಿಎಂ ಇರಬೋದು ಶೋಭಾ ಕರಂದ್ಲಾಜೆ ಮೂಂಜಿ ಪಾತೆಂದಿರಿಕ್ಕಾಂಗ, ಇಪ್ಪು ವಂದು ಸಿದ್ರಾಮಯ್ಯ ಎನ್ನಾಮು ಪಂಡ್ರಿದಿಲ್ಲೆ, ಕಾಂಗ್ರೆಸ್‌ ಎನ್ನಾಮು ಪಂಡ್ರಿದಿಲ್ಲೆ’ ಅಂತಾ ಬೊಂಬ್ದಾ ಬಜಾಯಾತಾವ್ರೆ, ಆವಪ್ಪಾನೇ ಸಿಎಂ ಆಗಿದ್ದಾಗ ಏನೂ ಮಾಡಿಲ್ಲ, ಆದ್ರೆ ನಮ್‌ ಸಿದ್ರಾಮಣ್ಣೋರು ಇಂದಿರಾ ಕ್ಯಾಂಟೀನ್‌ ಮಾಡಿ ಐದ್‌ ರೂಪಾಯ್ಗೆ ನಾಸ್ಟಾ, ಹತ್‌ ರೂಪಾಯ್ಗೆ ಫ‌ುಲ್‌ ಮೀಲ್ಸ್‌ ಕೊಡ್ತಾವ್ರೆ ಅಂತ ಹೇಳವ್ರಂತೆ.
 
ಚೇರ್ಮನ್ರು: ರೋಸನ್‌ ಬೇಗ್‌ಗೆ ಯಾಕ್ಲಾ ಬೇಕು ಇವೆಲ್ಲಾ? ಆವಪ್ಪುಂದು ಸಿವಾಜಿನಗ್ರ ಅಲ್‌ ಬಿಟ್ಟು ಪುಲಿಕೇಸಿನಗ್ರಕ್ಕೆ ಹೋಗಿ ಹಿಂಗೆಲ್ಲಾ ಹೆಣ್‌ ಮಕ್ಳು ಬಗ್ಗೆ ಮಾತಾಡಾºರ್ಧು ಬುಡ್ಲ.
ಅಮಾಸೆ: ಹೌದ್‌ ಕಣೇಳಿ. ಯಡ್ನೂರಪ್ನೊರು ಸಿಎಂ ಆಗಿದ್ದಾಗ ಶೋಭಕ್ಕಾ ಮುಖ ನೋಡ್ಕಂಡ್‌ ಇರಿ¤ದ್ರು ಅಂತ ಹೇಳಿದ್ರೆ ಏನಂದ್ಕೊಬೇಕು ಜನಾವಾ? ಅದ್ಕೆ ಶೋಭಕ್ಕಾ ಸರಿಯಾಗೆ ಮಡ್ಗವ್ರೆ, ಆಚಾರ ಇಲ್ದ ನಾಲಿಗೆ ನಿನ್ನ ನೀಚ ಬುದ್ಧಿಯಾ ಬಿಡು ಅಂತ ಹೇಳವ್ರೆ. ಬಿಜೆಪಿ ನಾಯಕ್ರು ರೋಸನ್‌ಬೇಗ್‌ ರಾಜೀನಾಮೆ ಕೊಡ್ಬೇಕು ಅಂತ ಹಠ ಹಿಡಿದವ್ರೆ.

ಚೇರ್ಮನ್ರು:ಗಣಪತಿ ಕೇಸ್‌ನ್ಯಾಗೆ ಜಾರ್ಜ್‌ ರಾಜೀನಾಮೆ ಕೊಡಿ ಅಂತ ಬಿಜೆಪಿಯವ್ರು ಗಂಟ್ಲು ಹರಕೊಂಡ್ರು, ಅವ್ರು ಕೊಟ್ರ? ಇದೂ ಅದೇ ಕೇಸ್‌ ಬುಡ್ಲಾ. ಆದ್ರೂ ನಮ್‌ ರಾಜ್‌ಕಾರಿ¡ಗಳಿಗೆ ಯಾವಾಗ್‌ ಏನ್‌ ಮಾತಾಡ್ಬೇಕು ಗೊತ್ತಾಗಾಕಿಲ್ಲ. ಪಿಶ್‌ ಮಾರ್ಕೆಟ್‌ನ್ಯಾಗೆ ಮಾತಾಡೋ ತರಾ ಮಾತಾಡ್ತಾರೆ. ಜನ್ರು ಬುದ್ಧಿ ಇಲ್ಲಾ.
ಆಮಾಸೆ: ಹೌದೇಳಿ ಸಾ…ಎಲೆಕ್ಷನ್‌ ಬರ್ತಿದ್ದಂತೆ ಎಲ್ರುಗೂ ಮೈಮೇಲೆ ದೆವ್ವ ಬಂದಂಗಾಡ್ತವೆ. ಒಂದ್ಕಿತಾ ಸೋತ್ರೆ ಆಪರೇಸನ್‌ ಆಗಿ ಸುಸ್ತಾದ ಪೇಸೆಂಟ್‌ನಂಗಾಯ್ತಾರೆ. ಇಂತ ಟೇಮ್‌ನ್ಯಾಗೆ ನಮ್‌ ಜನಾ ಮಜಾ ತಗೋಳ್ಳೋದ್‌ ಬಿಟ್ಟು ಎಲೆಕ್ಷನ್‌ನ್ಯಾಗೆ ಮಾಂಜಾ ಕೊಟ್ರೆ ಸರೋಯ್ತದೆ ಅಲ್ವ್ರೇ? ಆಯ್ತು ಬುಡಿ ಸಾ…ಊರಿನ್‌ ಉಸಾಬ್ರಿ ನಂಗ್ಯಾಕೆ. ಮನ್ಯಾಗೆ ತಲೆ ಮಾಂಸಾ ಮುದ್ದೆ ಮಾಡವ್ರೆ ಬತ್ತೀನಿ ಸಾ…….

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next