Advertisement
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳಬೇಜವಾಬ್ದಾರಿತನದಿಂದ ತಾಲೂಕು ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿ ಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಹಾಸ್ಟೆಲ್‌ಗಳಲ್ಲಿ ಆಹಾರ ವಸ್ತುಗಳ ಖರೀದಿಯಲ್ಲಿ ಅಕ್ರಮ ನಡೆಯುತ್ತಿದೆ. ಮೊಟ್ಟೆ, ಹಾಲು, ಹಣ್ಣು ನೀಡುತ್ತಿಲ್ಲ. ದರ ಪಟ್ಟಿ ಸೇರಿದಂತೆ ದಾಸ್ತಾನು ಪರಿಶೀಲನೆ ಮಾಡಲು ಸಮಗ್ರ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಸದಸ್ಯ ಸುನೀಲ್ ಮಾತನಾಡಿ, ಸಣ್ಣ ನೀರಾವರಿ ಇಲಾಖೆ ಕೆರೆ ಅಭಿವೃದ್ಧಿಗೆ ಒತ್ತು ನೀಡಬೇಕು. ಮಳೆಗಾಲದಲ್ಲಿ ನೀರು ತುಂಬಿಕೊಂಡಿರುವ ತಾಳ್ಯ ಮತ್ತು ಟಿ.ಎಮ್ಮಿಗನೂರು ಕೆರೆ ಏರಿಗಳು ಸಂಪೂರ್ಣ ಶಿಥಿಲಗೊಂಡಿವೆ. ಅವುಗಳ ದುರಸ್ತಿಗೆ ಮುಂದಾಗಬೇಕು. ಯಾವುದೇ ಸಮಯದಲ್ಲಿ ಒಡೆದು ಹೋಗುವ ಆತಂಕ ಜನರನ್ನು ಕಾಡುತ್ತಿದೆ ಎಂದರು. ಸದಸ್ಯ ಶಿವಕುಮಾರ್ ಮಾತನಾಡಿ, ಕೆರೆಗಳಿಗೆ ಕೊಳಚೆ ನೀರು ಹರಿಯದಂತೆ ನೀರು ಇಂಗಿಸುವ ಹಾಗೂ ಚೆಕ್ ಡ್ಯಾಮ್‌ಗಳಲ್ಲಿ ನೀರು ಇಂಗಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೆರೆ ಅಭಿವೃದ್ಧಿ ಜತೆಗೆ ನೀರು ಇಂಗಿಸುವ ಕೆಲಸ ಆಗಬೇಕೆಂದರು.
ಇಒ ತಾರಾನಾಥ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆಗಳು ಭರ್ತಿಯಾಗಿವೆ. ಮೀನುಗಾರಿಕೆ ಇಲಾಖೆ ಎಲ್ಲಾ ಕೆರೆಗಳಲ್ಲಿ ಮೀನುಗಳನ್ನು ಸಾಕುವಂತೆ ಪ್ರೋತ್ಸಾಹ ನೀಡಬೇಕು. ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಲು ಕೃಷಿಕರಿಗೆ ಉತ್ತೇಜನ ನೀಡಬೇಕು. ತಾಪಂ ವಾಣೀಜ್ಯ ಸಂಕೀರ್ಣಗಳಲ್ಲಿರುವ ಬಾಡಿಗೆದಾರರು ಸರಿಯಾಗಿ ಬಾಡಿಗೆ ಸಂದಾಯ ಮಾಡುತ್ತಿಲ್ಲ. ಅವರ ವಿರುದ್ದ ಕಾನೂನು ಕ್ರಮಕ್ಕೆ ಸದಸ್ಯರು ಒಪ್ಪಿಗೆ ನೀಡಬೇಕೆಂದು ತಿಳಿಸಿದರು.
ಸರ್ವ ಸದಸ್ಯರು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಹಾಯಕ ಕೃಷಿ ನಿದೇರ್ಶಕ ಶ್ರೀನಿವಾಸುಲು ಮಾತನಾಡಿ, ಧಾರವಾಡದಲ್ಲಿ ನಡೆಯುವ ಕೃಷಿ ಮೇಳಕ್ಕೆ ರೈತರನ್ನು ಕರೆದೊಯ್ಯಲು ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸದಸ್ಯರು ರೈತರ ಪಟ್ಟಿ ನೀಡಬೇಕೆಂದರು.
ಸಭೆಯಲ್ಲಿ ತಾಪಂ ಸದಸ್ಯರಾದ ಜಿ.ಎಚ್. ಜಗದೀಶ್, ಎಚ್. ಜಯಪ್ಪ, ಸರೋಜಾ, ಶಶಿಕಲಾ, ರಾಮಚಂದ್ರಪ್ಪ, ಗೀತಾಬಾಯಿ,ಗಿರಿಜಮ್ಮ, ಸುಮಾ ಹಳ್ಳಪ್ಪ, ಆರ್.ಗಿರಿಜಾ, ಮೂಡಲಗಿರಿಯಪ್ಪ, ರುಕಿಷ್ಮಿಣಿ ಗಿರಿಯಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.