Advertisement

ಹೂಡಾ, ವೋರಾ ವಿರುದ್ಧವೂ ಆರೋಪ ಪಟ್ಟಿ

06:00 AM Dec 02, 2018 | |

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಅಕ್ರಮವಾಗಿ ಭೂಮಿಯನ್ನು ಮಂಜೂರು ಮಾಡಿದ ಆರೋಪದಲ್ಲಿ ಹರ್ಯಾಣದ ಮಾಜಿ ಸಿಎಂ ಭೂಪಿಂದರ್‌ ಸಿಂಗ್‌ ಹೂಡಾ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಮೋತಿಲಾಲ್‌ ವೋರಾ ವಿರುದ್ಧವೂ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಸಿದೆ. ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಹರ್ಯಾದ ಪಂಚಕುಲಾ ವಿಭಾಗ 6 ರಲ್ಲಿ ಸಾಂಸ್ಥಿಕ ಭೂಮಿಯನ್ನು ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ ಮಂಜೂರು ಮಾಡಲಾಗಿತ್ತು. ಇದರಿಂದ ಸರ್ಕಾರಕ್ಕೆ 67 ಲಕ್ಷ ರೂ. ನಷ್ಟವಾಗಿತ್ತು ಎಂದು ವಿವರಿಸಲಾಗಿದೆ. ಈ ಎಜೆಎಲ್‌ ಅನ್ನು ಹಿರಿಯ ಕಾಂಗ್ರೆಸ್‌ ನಾಯಕರು ಹಾಗೂ ನೆಹರೂ ಕುಟುಂಬದ ಸದಸ್ಯರು ನಿಯಂತ್ರಿಸುತ್ತಿದ್ದಾರೆ. ಇದೇ ಸಂಸ್ಥೆಯ ಒಡೆತನದಲ್ಲಿ ನ್ಯಾಷನಲ್‌ ಹೆರಾಲ್ಡ್‌ ಇದೆ.

Advertisement

ಭೂಮಿ ಮಂಜೂರು ವೇಳೆ ಹೂಡಾ ಸಿಎಂ ಆಗಿದ್ದರು. ಎಜೆಎಲ್‌ಗೆ ಆಗ ವೋರಾ ಮುಖ್ಯಸ್ಥರಾಗಿದ್ದರು. 3500 ಚದರಡಿ ಭೂಮಿಯನ್ನು ಎಜೆಎಲ್‌ಗೆ 1982ರಲ್ಲಿ ನೀಡಲಾಗಿತ್ತು. 1992ರ ವರೆಗೂ ಯಾವುದೇ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. 1996ರಲ್ಲಿ ಅದರ ಭೋಗ್ಯದ ಅವಧಿ ಮೀರಿದ್ದರಿಂದ ವಾಪಸ್‌ ಪಡೆಯಲಾಯಿತು. ಆದರೆ ಅದೇ ಭೂಮಿಯನ್ನು 1982ರ ಬೆಲೆಯಲ್ಲೇ 2005ರಲ್ಲಿ ಪುನಃ ಎಜೆಎಲ್‌ಗೆ ನೀಡಲಾಗಿದೆ ಎಂದು ವಿವರಿಸಲಾಗಿದೆ. ಚುನಾವಣೆ ಸಮೀಪಿಸಿದಾಗ ಸರ್ಕಾರ ಇಂಥದ್ದೇ ತಂತ್ರಗಳಿಗೆ ಇಳಿಯುತ್ತದೆ. ಮೋದಿ ಸರ್ಕಾರ ಇಷ್ಟು ವರ್ಷದಲ್ಲಿ ಆರೋಪ ಮಾಡಿ ದೆಯೇ ಹೊರತು ದಾಖಲೆ ಒದಗಿಸಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಗ್ವಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next