Advertisement

ಸಾಧಕರನ್ನು ಸನ್ಮಾನಿಸುವುದು ಸಂಸ್ಕೃತಿ

11:05 AM Jun 11, 2018 | |

ವಿಜಯಪುರ: ಪ್ರತಿಭೆ, ಪರಿಶ್ರಮದಿಂದ ಸಾಧನೆ ಮಾಡುವವರನ್ನು ಗೌರವಿಸುವುದು ಸಂಸ್ಕೃತಿಯ ಲಕ್ಷಣ ಎಂದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ನಗರದ ಎಕ್ಸ್‌ಲೆಂಟ್‌ ಪಪೂ ಕಾಲೇಜಿನಲ್ಲಿ ನೀಟ್‌ ಪರೀಕ್ಷೆಯಲ್ಲಿ ರಾಜ್ಯದಿಂದ ಪ್ರಥಮ ಸ್ಥಾನ ಪಡೆದ ಶ್ರೀಧರ ದೊಡಮನಿ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ಪರಿಪೂರ್ಣ ವ್ಯಕ್ತಿತ್ವ ಹೊಂದಲು ದೈಹಿಕ ಹಾಗೂ ಮಾನಸಿಕವಾಗಿ ಮೊದಲು ಸಮರ್ಥನಾಗಬೇಕು. ಹೃದಯ ವೈಶಾಲ್ಯತೆ ಬೆಳೆಸಿಕೊಂಡಲ್ಲಿ ಭಾವನೆಗಳು ಪ್ರತಿಯೊಬ್ಬರಲ್ಲೂ ಅರಳುತ್ತವೆ. ಮಾತಿನ ಚಾಕಚಕ್ಯತೆ ಅರಿತು ಮೃದುವಚನ ಆಡುವವನಾಗಬೇಕು. ಬೌದ್ಧಿಕ ಸಾಮರ್ಥ್ಯ ವೃದ್ಧಿಸಬೇಕು. ತೇನಸಿಂಗ್‌, ಥಾಮಸ್‌ ಅಲ್ವಾ ಎಡಿಸನ್‌, ಸ್ಟಿಪನ್‌ ಹಾಕಿಂಗ್‌, ಜೆ.ಜೆ. ಥಾಮ್ಸನ್‌, ಮೇಡಂ ಕ್ಯೂರಿ ಅವರಂಥ ಸಾಧಕರು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಬೇಕು ಎಂದು ಸಲಹೆ ನೀಡಿದರು.

ಮನುಷ್ಯ ನಿರಂತರ ಶೋಧನೆಯಲ್ಲಿ ತೊಡಬೇಕು, ಇಡಿ ಜಗತ್ತನ್ನು ಪ್ರೀತಿಸುವ ಹೃದಯ ವೈಶಾಲ್ಯತೆ ಬರಬೇಕು, ಬುದ್ಧಿಯಲ್ಲಿ ಸತ್ಯ ತುಂಬಿರಬೇಕು, ಬಲ್ಲವರಿಂದ ಒಂದಿಷ್ಟು ಪ್ರೇರಣೆಯನ್ನು ಪಡೆಯಬೇಕು ಆ ಮೂಲಕ ಸಾಧಕರು ನೀವಾಗಬೇಕು ಎಂದರು. 

ಸಮಾರಂಭಕ್ಕೆ ಚಾಲನೆ ನೀಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಬಿ. ಅಂಕದ ಮಾತನಾಡಿ, ಇಂದು ಮಕ್ಕಳ ಮನಸ್ಸನ್ನು ಏಕಾಗ್ರಗೊಳಿಸಿ ಅಧ್ಯಯನದಲ್ಲಿ ತೊಡಗಿಸುವುದು ಕಷ್ಟಸಾಧ್ಯ ಕೆಲಸವಾಗಿದೆ. ದೃಶ್ಯ ಮಾಧ್ಯಮಗಳು, ಅಂತರ್ಜಾಲದಂಥ ತಂತ್ರಜ್ಞಾನ ಸನ್ನಿವೇಶಗಳಿಂದ ಮಕ್ಕಳ ಮನಸ್ಸು ಅನಗತ್ಯವಾಗಿ ಆಕರ್ಷಿತಗೊಳ್ಳದಂತೆ ತಡೆದು, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಆಸಕ್ತಿ ಹುಟ್ಟಿಸುವ ಮಹತ್ವದ ಕೆಲಸ ಇಲ್ಲಿ ನಡೆಯುತ್ತಿದೆ. ಇದರಿಂದಾಗಿಯೇ ಇಲ್ಲಿನ ಮಕ್ಕಳು ರಾಜ್ಯ-ರಾಷ್ಟ ಮಟ್ಟದಲ್ಲಿ ಅದ್ಭುತ ಸಾಧನೆ ಮಾಡಲು ಸಾಧ್ಯವಾಗಿದ. ರಾಜ್ಯಕ್ಕೆ ಕೀರ್ತಿ ತರುವ ಪ್ರತಿಭೆಗಳನ್ನು ರೂಪಿಸುತ್ತಿರುವ ಎಕ್ಸ್‌ಲೆಂಟ್‌ ಶಿಕ್ಷಣ ಸಂಸ್ಥೆ ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.

Advertisement

ಶ್ರೀಧರ ದೊಡಮನಿ ಅವರನ್ನು ಸನ್ಮಾನಿಸಿ 2 ಲಕ್ಷ ರೂ. ನಗದು ಬಹುಮಾನ, ಅವರ ಹೆತ್ತವರಾದ ಸಂಗನಬಸಪ್ಪ ದೊಡಮನಿ-ಪ್ರಭಾವತಿ ದೊಡಮನಿ ಅವರನ್ನು ಎಕ್ಸಲೆಂಟ್‌ ಸಂಸ್ಥೆ ಪರ ಸನ್ಮಾಸಿ ಚಿನ್ನದ ಉಂಗುರಗಳನ್ನು ನೀಡಿ
ಸತ್ಕರಿಸಲಾಯಿತು.

ಇದೇ ವೇಳೆ ನೀಟ್‌ ಪರೀಕ್ಷೆಯಲ್ಲಿ ಉತ್ತ ಸಾಧನೆ ಮಾಡಿದ ಎಕ್ಸ್‌ಲೆಂಟ್‌ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಾದ ಕ್ಷಮಾ ಕೆಲೂರ, ಅಪೂರ್ವಾ ಭೈರಶೆಟ್ಟಿ, ಶೃತಿ ಉಮ್ಮಾಗೋಳ, ಸೌಮ್ಯ ಬಿರಾದಾರ, ಸೋಮನಾಥ ಬಿಜ್ಜರಗಿ, ಲಕ್ಷಣ ದಿಕ್ಷೀತ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಮಾತನಾಡಿದರು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ರಾಜಶೇಖರ ಕೌಲಗಿ, ದಯಾನಂದ ಕೆಲೂರ, ಮಂಜುನಾಥ ಕೌಲಗಿ, ಬಿ.ಆರ್‌. ನಿಡೋಣಿ, ಪ್ರಕಾಶ ಗೋಂಗಡಿ, ಜಿ.ವೈ. ಕೌಲಗಿ ಇದ್ದರು.

ಚೈತ್ರಾ ಬಿಜಾಪುರ ಪ್ರಾರ್ಥಿಸಿದರು. ಡಿ.ಎಲ್‌. ಬನಸೋಡೆ ವಂದಿಸಿದರು. ಚಂದ್ರಕಾಂತ ಉಂಡೋಡಿ ಹಾಗೂ ಶ್ರದ್ಧಾ ಜಾಧವ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next