Advertisement

Savanur: ಸಮಾಜ ಸೇವೆಯಿಂದ ಗೌರವ: ಅಶೋಕ್‌ ಕುಮಾರ್‌

09:40 AM Aug 15, 2023 | Team Udayavani |

ಸವಣೂರು: ಹಣ ಸಂಪಾದನೆಯ ಜತೆಗೆ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ಆಗ ಮಾತ್ರ ವ್ಯಕ್ತಿಗೆ ಗೌರವ ದೊರೆಯುತ್ತದೆ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು.

Advertisement

ಅವರು ಸೋಮವಾರ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ ನಿವೃತ್ತ ಸೇನಾನಿ, ಶಿಕ್ಷಕ ದಿ| ಶೀಂಟೂರು ನಾರಾಯಣ ರೈ ಅವರ ಸ್ಮರಣೆ ʼಶೀಂಟೂರು ಸ್ಮೃತಿʼಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಸವಣೂರು ಸೀತಾರಾಮ ರೈ ಅವರು ಸುಮಾರು 25 ಕೋ.ರೂ.ಗಳನ್ನು ಸವಣೂರಿನ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಕಾರ್ಯಕ್ಕಾಗಿ ವಿನಿಯೋಗಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಸವಣೂರಿನ ಸಮಗ್ರ ಅಭಿವೃದ್ಧಿಯ ರೂವಾರಿಯಾಗಿರುವ ರೈಗಳು “ಸವಣೂರಿನ ಶಿಲ್ಪಿ’ಯಾಗಿದ್ದಾರೆ ಎಂದು ಹೇಳಿದರು.

ಸಮ್ಮಾನ

ಶಾಸಕರಾದ ಬಳಿಕ ಪ್ರಥಮ ಬಾರಿಗೆ ವಿದ್ಯಾರಶ್ಮಿ ವಿದ್ಯಾಲಯಕ್ಕೆ ಆಗಮಿಸಿದ ಅಶೋಕ್‌ ಕುಮಾರ್‌ ರೈ ಅವರನ್ನು ಸೀತಾರಾಮ ರೈಗಳು ಸಮ್ಮಾನಿಸಿದರು.

Advertisement

ಪ್ರೊ| ಡಾ| ಡಿ.ಎಸ್‌. ಶೇಷಪ್ಪ ಅವರು ಶೀಂಟೂರು ನಾರಾಯಣ ರೈಯವರ ಸಂಸ್ಮರಣೆ ಮಾಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದುಬಾೖಯ ಉದ್ಯಮಿ ಆಶ್ರಫ್ ಶಾ ಮಾಂತೂರು ಮಾತನಾಡಿದರು. ಶಾಸಕ ಅಶೋಕ್‌ ಕುಮಾರ್‌ ರೈಯವರು ಶೀಂಟೂರು ನಾರಾಯಣ ರೈಗಳ ಪ್ರತಿಮೆಗೆ ಮಾಲಾರ್ಪಣೆಗೈದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿ‌ನ್‌ ಎಲ್‌. ಶೆಟ್ಟಿ ಎಸ್‌ಎನ್‌ಆರ್‌ ರೂರಲ್‌ ಎಜುಕೇಶನ್‌ ಟ್ರಸ್ಟ್‌ನ ಟ್ರಸ್ಟಿಗಳಾದ ಸವಣೂರು ಸುಂದರ ರೈ, ರಶ್ಮಿ ಅಶ್ವಿ‌ನ್‌ ಶೆಟ್ಟಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ನಾರಾಯಣ ಮೂರ್ತಿ ಕೆ. ವೇದಿಕೆಯಲ್ಲಿದ್ದರು.

ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು, ನ್ಯಾಯವಾದಿ ಜಯಪ್ರಕಾಶ್‌ ರೈ ಸುಳ್ಯ ವಂದಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ನಿರ್ವಹಿಸಿದರು.

ಶೀಂಟೂರು ಸಮ್ಮಾನ

ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರು ಭಾರತೀಯ ನೌಕಾನೆಲೆಯ ನಿವೃತ್ತ ಅಧಿಕಾರಿ ವಿಕ್ರಂ ದತ್ತ ಅವರಿಗೆ ಶೀಂಟೂರು ಸಮ್ಮಾನವನ್ನು ನೆರವೇರಿಸಿದರು. ಬಳಿಕ ಸದಾಶಿವ ಶೆಟ್ಟಿಯವರು ಮಾತನಾಡಿ, ಸವಣೂರು ಸೀತಾರಾಮ ರೈಯವರು ಪ್ರಕೃತಿಯ ಸೌಂದರ್ಯ ತಾಣವಾಗಿರುವ ಈ ಗ್ರಾಮೀಣ ಭಾಗದಲ್ಲಿ ಬಹುದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ಶ್ಲಾಘಿಸಿದರು.

ಮಾದರಿ ಬದುಕು

ಸಮ್ಮಾನ ಸ್ವೀಕರಿಸಿದ ವಿಕ್ರಂ ದತ್ತ ಮಾತನಾಡಿ, ಸವಣೂರು ಭಾಗದಲ್ಲಿ ಶಿಕ್ಷಣ ಕ್ರಾಂತಿಯ ಜತೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲೂ ಸೀತಾರಾಮ ರೈಗಳು ಸಾಧನೆ ಮಾಡಿದ್ದಾರೆ. ಅವರ ತಂದೆ ಶೀಂಟೂರು ನಾರಾಯಣ ರೈಗಳ ಶಿಸ್ತು, ಸಮಯಪಾಲನೆ ಹಾಗೂ ಬದುಕು ಎಲ್ಲವೂ ಮಾದರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next