Advertisement

ಹಿರಿಯ ಮಹಿಳಾ ವಕೀಲರಿಗೆ ಸನ್ಮಾನ

12:24 PM Mar 09, 2018 | Team Udayavani |

ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಹಿಳಾ ವಕೀಲರನ್ನು ಸನ್ಮಾನಿಸಲಾಯಿತು.

Advertisement

ಲಾ ಗೈಡ್‌ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು, ಹಿರಿಯ ಮಹಿಳಾ ವಕೀಲರಾದ ಗಾಯತ್ರಿ, ಸುಕನ್ಯಾ, ಸಿ.ಎನ್‌.ಕಮಲಮ್ಮ, ಗ್ರೇಸಿ ಎನ್‌.ಸಿಂಗ್‌, ಶ್ರೀದೇವಿ, ಆರ್‌.ಸರಸ್ವತಿ ಅವರನ್ನು ಸನ್ಮಾನಿಸಿದರು.

ನಂತರ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಉತ್ತಮ ಸ್ಥಾನ ನೀಡಲಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಲು ಸಿದ್ಧರಿದ್ದು, ಅವರ ಸಾಧನೆಗೆ ಪೋ›ತ್ಸಾಹ ನೀಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಲಾ ಗೈಡ್‌ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಿ.ಬನುಮಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಮತ್ತು ಹಿರಿಯ ವಕೀಲ ಎಸ್‌.ಜೆ.ಲಕ್ಷ್ಮೇಗೌಡ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಹಿರಿಯ ವಕೀಲ ಎಂ.ಡಿ.ಹರೀಶ್‌ ಕುಮಾರ್‌ ಹೆಗ್ಡೆ, ಹಿರಿಯ ವಕೀಲರಾದ ಎಚ್‌.ಎನ್‌.ವೆಂಕಟೇಶ್‌, ಎಸ್‌.ಲೋಕೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next