ಮಂಗಳೂರು: ಭಾರತೀಯ ಶಾಸ್ತ್ರ ಪರಂಪರೆಯನ್ನು ವಿದೇಶಿಗರೂ ಪಾಲಿಸುತ್ತಿದ್ದಾರೆ. ಶ್ರೇಷ್ಠ ಸಂಸ್ಕೃತಿ, ಸಂಸ್ಕಾರ ಹೊಂದಿರುವ ದೇಶ ನಮ್ಮದು ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿ ಆಸ್ರಣ್ಣ ನುಡಿದರು.
ಗುರುಪುರ ಶ್ರೀ ಸತ್ಯದೇವತಾ ಧರ್ಮ ದೇವತಾ ಮಹೋತ್ಸವ ಸಮಿತಿ ಆಶ್ರಯ
ದಲ್ಲಿ ಎ. 28ರವರೆಗೆ ನಡೆಯುತ್ತಿರುವ ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿರದ ಪುನಃ ಪ್ರತಿಷ್ಠಾ ರಜತ ಮಹೋತ್ಸವದ ಎರಡನೇ ದಿನವಾದ
ಗುರುವಾರ ನಡೆದ ಸಭಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಶಾಸ್ತ್ರ ಪರಂಪರೆಯನ್ನು ವಿದೇಶಿಗರೂ ಗೌರವದಿಂದ ಕಾಣು ತ್ತಾರೆ. ಹಾಗಿರುವಾಗ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆ ಲ್ಲರ ಜವಾಬ್ದಾರಿ ಎಂದದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಕೆನರಾ ಪ.ಪೂ. ಕಾಲೇಜು ಪ್ರಾಂಶುಪಾಲೆ ಡಾ| ಹುಂಡಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ರಾಣಿ ಅಬ್ಬಕ್ಕ ಪ್ರಶಸ್ತಿ ವಿಜೇತೆ ಊರ್ಮಿಳಾ ರಮೇಶ್‌ಕುಮಾರ್, ವೈದ್ಯ ಡಾ| ಡಿ. ನರಸಿಂಹ ಪೈ, ಬಿಲ್ಡರ್ ದಾಮೋದರ ಶೆಣೈ, ಉದ್ಯಮಿ ದೇವಾನಂದ ಪೈ, ವಾಮದಪದವು ಯಜಮಾನ ಇಂಡಸ್ಟ್ರೀಸ್‌ನ ವರದರಾಜ ಪೈ, ಲೆಕ್ಕ ಪರಿಶೋಧಕ ಬಿ.ಬಿ. ಶಾನುಭಾಗ್, ಡಾ| ವಿಶ್ವಾಸ್ ಪೈ ಮುಖ್ಯ ಅತಿಥಿಗಳಾಗಿದ್ದರು. ವೇದಮೂರ್ತಿ ಜಿ. ಅಶೋಕ್ ಜನಾರ್ದನ ಭಟ್, ವೇದಮೂರ್ತಿ ಜಿ. ಚಂದ್ರಕಾಂತ್ ಜನಾರ್ದನ ಭಟ್ ಉಪಸ್ಥಿತರಿದ್ದರು. ಗಣ್ಯರನ್ನು ಈ ವೇಳೆ ಸಮ್ಮಾನಿಸಲಾಯಿತು.
ಮಧುರಾಜ್ ಕಾರ್ಯಕ್ರಮ ನಿರ್ವಹಿಸಿದರು.