Advertisement

ಒಕುಹಾರ, ಸನ್‌ ವಾನ್‌ ಹೊ ಚಾಂಪಿಯನ್ಸ್‌

10:56 AM Nov 19, 2018 | Team Udayavani |

ಹಾಂಕಾಂಗ್‌: ಜಪಾನಿನ ನೊಜೊಮಿ ಒಕುಹಾರ ಹಾಗೂ ಕೊರಿಯಾದ ಸನ್‌ ವಾನ್‌ ಹೊ “ಹಾಂಕಾಂಗ್‌ ಓಪನ್‌’ ಬ್ಯಾಡ್ಮಿಂಟನ್‌ ಟೂರ್ನಿಯ ವನಿತಾ ಹಾಗೂ ಪುರುಷರ ಸಿಂಗಲ್ಸ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಜಪಾನ್‌ ಒಟ್ಟು 3 ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿತು.

Advertisement

ರವಿವಾರ ನಡೆದ ವನಿತಾ ಸಿಂಗಲ್ಸ್‌ ಫೈನಲ್‌ನಲ್ಲಿ ಒಕುಹಾರ ಥಾಯ್ಲೆಂಡ್‌ನ‌ ರಚನೋಕ್‌ ಇಂತಾನನ್‌ ವಿರುದ್ಧ 21-19, 24-22 ಗೇಮ್‌ಗಳಿಂದ ಜಯಿಸಿದರು. 

ವನಿತಾ ಡಬಲ್ಸ್‌ ವಿಭಾಗದಲ್ಲಿ ಜಪಾನ್‌ ಅಗ್ರ ಶ್ರೇಯಾಂಕಿತ ಯುಕಿ ಫ‌ುಕುಶಿಮಾ-ಸಯಕಾ ಹಿರೊಟಾ ಕೊರಿಯಾದ ಲೀ ಸೊ ಹೀ-ಶಿನ್‌ ಸೆಯುಗ್‌ ಚಾನ್‌ ಅವರನ್ನು 21-18, 21-17 ಗೇಮ್‌ಗಳಿಂದ ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

ಸನ್‌ ವಾನ್‌ ಹೊ ಚಾಂಪಿಯನ್‌
ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸನ್‌ ವಾನ್‌ ಹೊ ಜಪಾನಿನ ಕೆಂಟ ನಿಶಿಮೊಟಾ ಅವರನ್ನು 14-21, 21-17, 21-13 ಗೇಮ್‌ಗಳಿಂದ ಸೋಲಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಪುರುಷರ ಡಬಲ್ಸ್‌ ವಿಭಾಗದಲ್ಲಿ ಇಂಡೋನೇಶ್ಯದ ಮಾರ್ಕಸ್‌ ಫೆರ್ನಾಲ್‌ಡಿ ಗಿಡೊನ್‌-ಕೆವಿನ್‌ ಸಂಜಯ ಸುಕಮುಲೊ 21-13, 21-12 ಗೇಮ್‌ಗಳಿಂದ ಜಪಾನ್‌ನ ತಕೆಶಿ ಕಮುರ-ಕೈಗೊ ಸನೊಡ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಜಪಾನಿನ ಯುಟಾ ವಟಾನಾಬೆ-ಎರಿಸಾ ಹಿಗಾಶಿನೊ ಚೀನದ ವಾಂಗ್‌ ಯಿಲು-ಹೌಂಗ್‌ ಡಾಂಗ್‌ಪಿಂಗ್‌ ವಿರುದ್ಧ 21-18, 21-14ರಿಂದ ಜಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next