Advertisement

ಫ್ರಿಡ್ಜ್ ನಲ್ಲಿ ಕಾಲುಗಳು ಪತ್ತೆ…ಆದ್ರೆ ಮುಂಡ ನಾಪತ್ತೆ; ಜನಪ್ರಿಯ ಮಾಡೆಲ್‌ ದುರಂತ ಅಂತ್ಯ

04:18 PM Feb 25, 2023 | Team Udayavani |

ಹಾಂಗ್ ಕಾಂಗ್: ಜನಪ್ರಿಯ ರೂಪದರ್ಶಿ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಖ್ಯಾತಿಯಾಗಿದ್ದ ಅಬ್ಬಿ ಚೋಯ್ (28) ಭೀಕರವಾಗಿ ಅಂತ್ಯ ಕಂಡಿದ್ದು, ಫ್ರಿಡ್ಜ್‌ ನಲ್ಲಿ ಆಕೆಯ ದೇಹದ ಭಾಗಗಳು ಪತ್ತೆಯಾಗಿದೆ.

Advertisement

ಹಾಂಗ್‌ ಕಾಂಗ್‌ ನಲ್ಲಿ ಜನಪ್ರಿಯ ರೂಪದರ್ಶಿಯಾಗಿ, ಸಾಮಾಜಿಕ ಜಾಲತಾಣದಲ್ಲಿ ಖ್ಯಾತನಾಮನಾಗಿದ್ದ ಅಬ್ಬಿ ಚೋಯ್ ಇತ್ತೀಚೆಗೆ ನಾಪತ್ತೆಯಾಗಿದ್ದರು. ನಿಗೂಢವಾಗಿ ನಾಪತ್ತೆಯಾಗಿದ್ದ ಅಬ್ಬಿ ಚೋಯ್ ಅವರ ಕಾಲಿನ ಭಾಗಗಳು ಹಾಂಗ್‌ ಕಾಂಗ್‌ ನ ತೈಪೊದಲ್ಲಿರುವ ಲುಂಗ್ ಮೆಯಿ ಟ್ಸುಯೆನ್ ಗ್ರಾಮದ ಬಾಡಿಗೆ ಮನೆಯೊಂದರ ಫ್ರಿಡ್ಜ್‌ ವೊಂದರಲ್ಲಿ ಪತ್ತೆಯಾಗಿದೆ. ಮುಂಡ ಹಾಗೂ ಕೈಗಳ ಭಾಗಗಳು ಇನ್ನೂ ಪತ್ತೆಯಾಗದ ಕಾರಣ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಹಿಂದೆ ಮದುವೆಯಾಗಿದ್ದ ಪತಿಯಿಂದ ವಿಚ್ಛೇದನ ಪಡೆದು ಜೀವಿಸುತ್ತಿದ್ದ ಅಬ್ಬಿ ಚೋಯ್ ಆಸ್ತಿಯ ವಿಚಾರವಾಗಿ ಆಗಾಗ ಮಾಜಿ ಪತಿ ಹಾಗೂ ಅವರ ಮನೆಯವರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು. ಅಬ್ಬಿ ಚೋಯ್ ಅವರ ಬಳಿ ಇರುವ ಆಸ್ತಿಯ ವಿಚಾರವಾಗಿ ಅನೇಕ ಬಾರಿ ಮಾಜಿ ಪತಿ ಹಾಗೂ ಅವರ ಮನೆಯವರು ಜಗಳಕ್ಕೆ ಬರುತ್ತಿದ್ದರು.

ಇದೇ ವಿಚಾರಕ್ಕೆ ಅಬ್ಬಿ ಚೋಯ್ ಅವರನ್ನು ಮಾಜಿ ಪತಿ ಹಾಗೂ ಅವರ ಮನೆಯವರು ಈ ದುಷ್ಕೃತ್ಯ ಎಸಗಿರಬಹುದು ಎಂದು ಶಂಕಿಸಿ, ಪ್ರಕರಣ ಸಂಬಂಧ ಅಬ್ಬಿ ಚೋಯ್ ಮಾಜಿ ಪತಿ, ಮಾವ ಸೇರಿ ಮೂವರನ್ನು ಬಂಧಿಸಲಾಗಿದೆ.

ಮೂರು ಅಂತಸ್ತಿನ ಬಾಡಿಗೆ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಮಾಂಸ ಕತ್ತರಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ರೈನ್‌ ಕೋಟ್‌, ಗ್ಲೌಸ್‌, ಮಾಸ್ಕ್ ಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ. ಬಾಡಿಗೆ ಮನೆಯನ್ನು ಕಸಾಯಿಖಾನೆಯಂತೆ ಬಳಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಅಬ್ಬಿ ಚೋಯ್ ಅವರ ಮಾಜಿ ಪತಿ ದೇಶ ಬಿಟ್ಟು ಓಡಿ ಹೋಗಲು ಬೋಟ್‌ ಗಾಗಿ ಕಾಯುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಎಲ್’ಆಫೀಶಿಯಲ್ ಮೊನಾಕೊ ಎಂಬ ಮ್ಯಾಗ್‌ ಜಿನ್‌ ನಲ್ಲಿ ಇತ್ತೀಚೆಗೆ ಕವರ್‌ ಫೋಟೋದಲ್ಲಿ ಅಬ್ಬಿ ಚೋಯ್ ಕಾಣಿಸಿಕೊಂಡಿದ್ದರು. 85 ಸಾವಿರಕ್ಕೂ ಅಧಿಕ ಫಾಲೋವರ್ಸ್‌ ಗಳನ್ನು ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next