Advertisement

Honeytrap: ಯುವಕನ ಹಣ, ಚಿನ್ನ ಎಗರಿಸಿದ ಪ್ರಕರಣ; ಮಹಿಳೆಯ ಸೆರೆ

08:10 PM Jul 27, 2024 | Team Udayavani |

ಕಾಸರಗೋಡು: ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡು ಹನಿಟ್ರಾಪ್‌ನಲ್ಲಿ ಸಿಲುಕಿಸಿ ಯುವಕನಿಂದ ಚಿನ್ನ ಮತ್ತು ಹಣ ಎಗರಿಸಿದ ಪ್ರಕರಣದ ಆರೋಪಿಯಾಗಿದ್ದು, ಬಳಿಕ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಮೇಲ್ಪರಂಬ ಪೊಲೀಸರು ಉಡುಪಿಯ ವಸತಿಗೃಹವೊಂದರಿಂದ ಬಂಧಿಸಿದ್ದಾರೆ.

Advertisement

ಚೆಮ್ನಾಡು ಕೊಂಬನಡ್ಕದ ಶ್ರುತಿ ಚಂದ್ರಶೇಖರನ್‌ (35)ಳನ್ನು ಬಂಧಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಪೊಯಿನಾಚಿಯ 30 ವರ್ಷದ ಯುವಕನೋರ್ವನನ್ನು ಪರಿಚಯ ಮಾಡಿಕೊಂಡು ಬಳಿಕ ಆತನನ್ನು ಹನಿಟ್ರಾಪ್‌ನಲ್ಲಿ ಸಿಲುಕಿಸಿ ಆತನಿಂದ ಒಂದು ಲಕ್ಷ ರೂ. ನಗದು ಹಾಗು ಒಂದು ಪವನ್‌ ಚಿನ್ನದ ಸರವನ್ನು ಎಗರಿಸಿದ ಬಗ್ಗೆ ದೂರು ನೀಡಿದ್ದನು. ಅದರಂತೆ ಶ್ರುತಿ ಚಂದ್ರಶೇಖರನ್‌ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ತಾನು ಐಎಸ್‌ಆರ್‌ಒ ಅಧಿಕಾರಿಯೆಂದು ನಂಬಿಸಿ ಅದರ ಸೋಗಿನಲ್ಲಿ ಆಕೆ ಪೊಯಿನಾಚಿಯ ಯುವಕನನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದಳು. ನಕಲಿ ಗುರುತು ಪತ್ರ ತಯಾರಿಸಿದ ಬಗ್ಗೆಯೂ ಈಕೆಯ ವಿರುದ್ಧ ಕೇಸು ದಾಖಲಿಸಲಾಗಿದೆ. ಈಕೆಯ ವಿರುದ್ಧ ಕಾಸರಗೋಡು, ಅಂಬಲತ್ತರ, ಕಣ್ಣೂರು ಮತ್ತು ಕೊçಯಿಲಾಂಡಿ ಪೊಲೀಸ್‌ ಠಾಣೆಗಳಲ್ಲಿ ಹಲವು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next