Advertisement

ಹನಿಟ್ರ್ಯಾಪ್‌ ಪ್ರಕರಣ: ಐವರ ಬಂಧನ

09:53 AM Oct 27, 2017 | |

ವಿಟ್ಲ: ಜಿಲ್ಲೆಯಾದ್ಯಂತ ಭೀತಿಯನ್ನು ಹುಟ್ಟಿಸಿದ್ದ  ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಟ್ಲ ಪೊಲೀಸರ ತಂಡ ಮಾಣಿ ಜಂಕ್ಷನ್‌ನಲ್ಲಿ ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

Advertisement

ವಿಟ್ಲ ಠಾಣೆ ವ್ಯಾಪ್ತಿಗೆ ಸೇರಿದ ಕುಡ್ತಮುಗೇರಿನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಹನಿಟ್ರ್ಯಾಪ್‌ ತಂಡ ಕಾರು, ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿರುವ ಘಟನೆ ಭಾರೀ ಕುತೂಹಲ ಕೆರಳಿಸಿತ್ತು ಮತ್ತು ಈ ತಂಡವನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಬಲೆ ಬೀಸಿದ್ದರು.

ತೊಕ್ಕೋಟು ಕೆ.ಸಿ. ರೋಡ್‌ ಕೋಮರಂಗಲ ಕ್ವಾರ್ಟರ್ಸ್‌ ನಿವಾಸಿ ಅಶ್ರಫ್‌ ಸಂಶೀರ (27), ಫರಂಗಿಪೇಟೆ ಅಮ್ಮೆಮ್ಮಾರ್‌ ಸಂದ ಬಳಿ ನಿವಾಸಿ ಝೈನುದ್ದೀನ್‌ (21), ತೊಕ್ಕೊಟ್ಟು ಉಳ್ಳಾಲ ಮಾರ್ಗತಳಿ ನಿವಾಸಿ ಮಹಮ್ಮದ್‌ ಇಕ್ಬಾಲ್‌ (27), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಉಬೈದುಲ್ಲಾ  (32), ಸಕಲೇಶಪುರ ಅರೇಹಳ್ಳಿ  ಸಂತೋಷ ನಗರ ಮೂಲದ ಅಶ್ರಫ್‌ ಸಂಶೀರನ ಪತ್ನಿ ಫಝಾì ಯಾನೆ ಫಝಾìನಾ ಸುಮೈಯ್ನಾ (26) ಬಂಧಿತ ಆರೋಪಿಗಳು. 

ಇವರಿಂದ ಒಂದು ಪಾಸ್‌ಪೋರ್ಟ್‌, 6 ಮೊಬೈಲ್‌, 2 ಕಾರು, 8 ಗ್ರಾಂ ಚಿನ್ನ, 7.5 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಟ್ಲಪಟ್ನೂರು ಗ್ರಾಮದ ಪರ್ತಿಪ್ಪಾಡಿ ನಿವಾಸಿ ಮಹಮ್ಮದ್‌ ಹನೀಫ್‌ ಫೇಸ್‌ಬುಕ್‌ ಮೂಲಕ ಪರಿಚಯವಾದ ಯುವತಿ ಜತೆಗೆ ಚಾಟ್‌ ಮಾಡಿ, ಕ್ರಮೇಣ ಫೋನ್‌ ಮೂಲಕ ಕೆಲವು ತಿಂಗಳ ಹಿಂದೆ ಪರಿಚಯವಾಗಿತ್ತು. ತಾಯಿಗೆ ಆರೋಗ್ಯ ಸರಿ ಇಲ್ಲ ಎಂದು ಹಣ ಕೇಳಿ ಮನೆಗೆ ಬರ ಹೇಳಿದ ಯುವತಿ ಗೆಳತಿ ಜತೆ ಮುಡಿಪುವಿನಲ್ಲಿ ಹನೀಫ್‌ರನ್ನು ಭೇಟಿಯಾಗಲು ತಿಳಿಸಿದ್ದಳು. ತನ್ನ ಜತೆ ಬಂದಿದ್ದ ಗೆಳತಿಯನ್ನು  ಕುಡ್ತಮುಗೇರು ಮನೆಗೆ ಕರೆದು ಕೊಂಡು ಹೋಗುವಂತೆ ಹೇಳಿ, ಬಳಿಕ ರಾತ್ರಿ ತಂಡದೊಂದಿಗೆ  ಮನೆ ಮೇಲೆ ದಾಳಿ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next