ಬೆಂಗಳೂರು: ಕೋಲಾರ ಉಪತಹಶೀಲ್ದಾರ್‌ಗೆ ಹನಿಟ್ರ್ಯಾಪ್ ಮಾಡಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣ ಬೇಧಿಸಿರುವ ಕೆ.ಆರ್.ಪುರಂ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.
ಕೋಡಿಗೆಹಳ್ಳಿ ನಿವಾಸಿ ಗಣಪತಿ ನಾಯಕ್, ಕಿಶನ್, ಕೇಶವ್ ಬಂಧಿತರು. ಗದಗ ಮೂಲದ ಜ್ಯೋತಿ ವಿಶ್ವನಾಥ್ ತೋಪಗಿ ಎಂಬಾಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿಗಳು ಹೋಸಕೋಟೆ ನಿವಾಸಿ ಕೋಲಾರ ಜಿಲ್ಲೆಯ ಉಪ ತಹಶೀಲ್ದಾರ್ ಗೌತಮ್ (40) ಅವರಿಗೆ ಹನಿಟ್ರ್ಯಾಪ್ ಮಾಡಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
2021 ಜುಲೈನಲ್ಲಿ ಉಪತಹಶೀಲ್ದಾರ್ ಕಾಟಂ ನಲ್ಲರೂ ಕ್ರಾಸ್ ಬಳಿಯ ಹೋಟೆಲ್‌ಗೆ ಊಟಕ್ಕೆ ಹೋಗಿ ದ್ದರು. ಆಗ ಜ್ಯೋತಿ ವಿಶ್ವನಾಥ್ ತೋಪಗಿ ಪರಿಚಯಿಸಿ ಕೊಂಡಿದ್ದು, ಮೊಬೈಲ್ ನಂಬರ್ ಪಡೆದು, ಫೇಸ್‌ಬುಕ್ ನಲ್ಲಿ ಸ್ನೇಹಿತೆಯಾಗಿದ್ದರು. ನಂತರ ಮೊಬೈಲ್ ವಾಟ್ಸ್ ಆ್ಯಪ್‌ನಲ್ಲಿ ನಿರಂತರವಾಗಿ ಸಂದೇಶ ಕಳುಹಿಸಿ ಆತ್ಮೀ ಯತೆ ಬೆಳೆಸಿಕೊಂಡಿದ್ದಳು. ಅನಂತರ ಆಕೆ ಕರೆದ ಕಡೆ ಉಪತಹಶೀಲ್ದಾರ್ ಹೋಗುತ್ತಿದ್ದು, ಕೆಲ ಹೋಟೆಲ್‌ಗಳಲ್ಲಿ ಊಟ ಮಾಡಿದ್ದಾರೆ. ಈ ಮಧ್ಯೆ ಭಟ್ಟರಹಳ್ಳಿಯ ಹೋಟೆಲ್ ವೊಂದಕ್ಕೆ ಗೌತಮ್‌ನನ್ನು ಕರೆಸಿಕೊಂಡ ಜ್ಯೋತಿ, ಅದೇ ಹೋಟೆಲ್ ಕೊಠಡಿಗೆ ಕರೆ ದೊಯ್ದು ಮತ್ತು ಬರುವ ಔಷಧಿ ಹಾಕಿರುವ ಜ್ಯೂಸ್‌ನ್ನು ಕೊಟ್ಟಿದ್ದಳು. ಗೌತಮ್ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು. ಈ ವೇಳೆ ಜ್ಯೋತಿ ಉಪ ತಹಶೀಲ್ದಾರ್ ಜತೆ ಅಶ್ಲೀಲವಾಗಿ ಕಳೆದಿರುವ ಫೋಟೋವನ್ನು ತನ್ನ ಮೊಬೈಲ್‌ಲ್ಲಿ ತೆಗೆದುಕೊಂಡಿದ್ದಾರೆ. ಇತ್ತ ಕೆಲ ಹೊತ್ತಿನ ಬಳಿಕ ಗೌತಮ್‌ಗೆ ಎಚ್ಚರವಾದಾಗ ಅರೆನಗ್ನಾವಸ್ಥೆಯಲ್ಲಿದ್ದರು ಎಂದು ಗೌತಮ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ನಂತರ ಜ್ಯೋತಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ, ನಿಮ್ಮ ವಿಡಿಯೋ ಎಲ್ಲೆಡೆ ಸೋರಿಕೆಯಾಗಿದೆ. ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
25 ಲಕ್ಷ ರೂ.ಗೆ ಬೇಡಿಕೆ : ಫೆ.24ರಂದು ಕೋಲಾರದ ಎ.ಸಿ. ಕಚೇರಿಗೆ ಬಂದು ಗೌತಮ್‌ನ್ನು ಭೇಟಿಯಾದ ಆರೋಪಿಗಳಾದ ಗಣಪತಿ ನಾಯಕ್, ರಮೇಶ್ ಗೌಡ, ಸಂತೋಷ್ ತಮ್ಮನ್ನು ವಕೀಲರು ಎಂದು ಪರಿಚಯಿಸಿಕೊಂಡಿ ದ್ದರು. ನಂತರ ಜ್ಯೋತಿ ಸೆರೆಹಿಡಿದಿದ್ದ ಅಶ್ಲೀಲ ವಿಡಿಯೋ ತೋರಿಸಿ, ನಾವು ಹೇಳಿದ ಸ್ಥಳಕ್ಕೆ ಬಂದರೆ ಸಂಪೂರ್ಣ ವಿಡಿಯೋ ತೋರಿಸುವುದಾಗಿ ಹೇಳಿದ್ದರು. ಫೆ.25ರಂದು ಗೌತಮ್‌ನ್ನು ಕೋಡಿಗೆಹಳ್ಳಿಯ ಹೋಟೆಲ್‌ವೊಂದಕ್ಕೆ ಕರೆಸಿಕೊಂಡು ವಿಡಿಯೋ ತೋರಿಸಿ 25 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದರು. ಅವರ ಬೆದರಿಕೆಗೆ ಗೌತಮ್ ಹೆದರಿದ್ದಾಗ, ಮಾ.10ರಂದು ಆರೋಪಿ ಗಣಪತಿ ನಾಯಕ್ ಮತ್ತೂಮ್ಮೆ ಗೌತಮ್ ಅವರನ್ನು ಕರೆಸಿಕೊಂಡು ಮಾ.17ರೊಳಗೆ 10 ಲಕ್ಷ ರೂ. ಕೊಡುವಂತೆ ಬೆದರಿಸಿದ್ದರು. ಅದರಿಂದ ನೊಂದ ಗೌತಮ್ ಕೆ.ಆರ್ .ಪುರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.