ಮಂಗಳೂರು : ನಗರದ ಅತ್ತಾವರದ ಬಿಗ್ ಬಜಾರ್ ಬಳಿ ಸಿಕ್ಕ ಪರ್ಸ್ ಒಂದನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕರೊಬ್ಬರಿಗೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಪ್ರಶಂಸಿಸಿ ಸನ್ಮಾನ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಮಹಮದ್ ಹನೀಫ್ ಅವರು ಪ್ರಾಮಾಣಿಕತೆ ಮೆರೆದ ಆಟೋ ಚಾಲಕರಾಗಿದ್ದು, ಕಳೆದ ೧೫ ವರ್ಷಗಳಿಂದ ಇವರು ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದುಷ್ಯಂತ್ ಎನ್ನುವ ವಿದ್ಯಾರ್ಥಿ ಪರ್ಸ್ ಕಳೆದುಕೊಂಡಿದ್ದು, ಅದರಲ್ಲಿ 10,200 ರೂಪಾಯಿ ಹಣ ಸೇರಿದಂತೆ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ಸೇರಿ ಕೆಲವು ಅಗತ್ಯ ಕಾರ್ಡ್ ಗಳಿದ್ದವು.
ತಮಗೆ ಸಿಕ್ಕಿದ ಪರ್ಸನ್ನು ಆಯುಕ್ತರ ಕಚೇರಿಗೆ ತಂದು ಕೊಡುವ ಮೂಲಕ ಹನೀಫ್ ಅವರು ಮಾದರಿಯಾಗಿದ್ದಾರೆ. ಜನರು ಆಟೋ ಚಾಲಕರ ಕುರಿತಾಗಿ ಆರೋಪ ಮಾಡುವ ವೇಳೆ ಇವರು ಮಾಡಿದ ಕೆಲಸ ಎಲ್ಲರೂ ಮೆಚ್ಚುವಂತಹದ್ದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅಭಿನಂದಿಸಿದ್ದಾರೆ.