Advertisement

ಎಂಡೋ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಯತ್ನ: ಸಚಿವ

08:08 PM Mar 08, 2020 | Team Udayavani |

ಕಾಸರಗೋಡು: ಎಂಡೋಸಲ್ಫಾನ್‌ ಸಂತ್ರಸ್ತರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರಕಾರ ಅನುಕಂಪ ಸಹಿತ ಪ್ರಾಮಾಣಿಕ ಯತ್ನ ನಡೆಸುತ್ತಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್‌ ಜಿಲ್ಲಾ ಮಟ್ಟದ ಘಟಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲವು ಟ್ರಸ್ಟ್‌ಗಳು ನಡೆಸುತ್ತಿರುವ ದುರಂತ ನಿವಾರಣೆ ಚಟುವಟಿಕೆಗಳಿಗೆ, ಪುನರ್ವಸತಿ ಕಾರ್ಯಗಳಿಗೆ ರಾಜ್ಯ ಸರಕಾರ ಪೂರ್ಣರೂಪದಲ್ಲಿ ಬೆಂಬಲ ನೀಡಲಿದೆ. ಎಂಡೋಸಲಾ #ನ್‌ ಸಂತ್ರಸ್ತರಿಗೆ ಕೆಲವು ಸಂಘಟನೆಗಳು ನೀಡುತ್ತಿರುವ ಸಹಾಯಗಳಿಗೆ ಸರಕಾರ ಬೆಂಬಲ ನೀಡಿರುವುದು ಇದಕ್ಕೆ ನಿರ್ದಶನವಾಗಿದೆ. ಆದರೆ ಕೆಲವೆಡೆ ನಡೆಸಲಾಗುತ್ತಿರುವ ಚಟುವಟಿಕೆಗಳು ಅರ್ಧದಲ್ಲೇ ಮೊಟಕುಗೊಂಡಿರುವ ಬಗ್ಗೆ ವರದಿಗಳಿವೆ. ಕೆಲವೆಡೆ ಸಂತ್ರಸ್ತರಿಗೆ ಜಾಗ ಹಸ್ತಾಂತರ ನಡೆಸಿದರೂ ವಸತಿ ನಿರ್ಮಾಣ ಇತ್ಯಾದಿ ನಡೆಯದೇ ಉಳಿದಿದೆ ಎಂಬ ಮಾಹಿತಿಗಳು ಲಭಿಸಿವೆ. ಈ ಬಗ್ಗೆ ಸಕಾರಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ನುಡಿದರು.

ಸಂತ್ರಸ್ತರಲ್ಲಿ ವಸತಿ ಯೋಜನೆ ಪ್ರಕಾರ ಹೊಸದುರ್ಗ ತಾಲೂಕಿನಲ್ಲಿ 9, ಮಂಜೇಶ್ವರದ ಎಣ್ಮಕಜೆ ಗ್ರಾಮದಲ್ಲಿ 36 ಸಹಿತ ಒಟ್ಟು 45 ಪ್ಲಾಟ್‌ಗಳು ಅರ್ಹ ಫಲಾನುಭವಿಗಳಿಗಾಗಿ ಪತ್ತೆ ಮಾಡಲಾಗಿದೆ. ಹೆಚ್ಚುವರಿ ಮಂದಿಗಳಿದ್ದರೆ ಚೀಟಿ ಎತ್ತುವ ಮೂಲಕ ಪತ್ತೆಮಾಡಲಾಗುವುದು.

ಎಣ್ಮಕಜೆ ಗ್ರಾಮದಲ್ಲಿ ಸತ್ಯಸಾಯಿ ಟ್ರಸ್ಟ್‌ ವತಿಯಿಂದ 36 ಮನೆಗಳನ್ನು ನಿರ್ಮಿಸಿ ನೀಡಲಾಗುತ್ತಿದ್ದು, ಈ ಪ್ರದೇಶಕ್ಕೆ ರಸ್ತೆ ನಿರ್ಮಾಣಕ್ಕೆ ಕ್ರಮ ತ್ವರಿತಗೊಳಿಸ ಲಾಗುವುದು ಎಂದು ಜಿಲ್ಲಾಧಿ ಕಾರಿ ಡಾ| ಡಿ. ಸಜಿತ್‌ ಬಾಬು ಸಭೆಯಲ್ಲಿ ತಿಳಿಸಿದರು. ಇದಕ್ಕಾಗಿ ಮಂಜೇಶ್ವರ ತಹಶೀಲ್ದಾರ್‌ ಅವರ ನೇತೃತ್ವದಲ್ಲಿ ಜಾಗ ಅಳತೆ ನಡೆಸಿ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಕ್ಯಾಷ್‌ ಕೌಂಟರ್‌ಲೆಸ್‌ ಆಸ್ಪತ್ರೆಗಳು, ವಸತಿ ನಿರ್ಮಾಣ ಯೋಜನೆ ಸಂಬಂಧ ಟ್ರಸ್ಟ್‌ಗಳು ನಡೆಸುತ್ತಿರುವ ಚಟುವಟಿಕೆಗಳಿಗೆ ಸಂಬಂಧಿ ಸಿ ಪ್ರಗತಿ ವರದಿ ಮಾ.20ರ ಮುಂಚಿತವಾಗಿ ಲಿಖೀತರೂಪದಲ್ಲಿ ನೀಡುವಂತೆ ಆದೇಶ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಸಭೆಯಲ್ಲಿ ತಿಳಿಸಿದರು.

ಉಕ್ಕಿನಡ್ಕದಲ್ಲಿ ಆರಂಭಿಸಲಾಗುವ ಕಾಸರಗೋಡು ಮೆಡಿಕಲ್‌ ಕಾಲೇಜಿನಲ್ಲಿ ಜನರಲ್‌ ಅಲ್ಲದೆ ವಾರಕ್ಕೊಮ್ಮೆ ವಿಶೇಷ ವಿಭಾಗದ ಒ.ಪಿ.ಯು. ಸಿದ್ಧಪಡಿಸಲಾಗುವುದು ಎಂದು ಎನ್‌.ಎಚ್‌.ಎಂ. ಜಿಲ್ಲಾ ಕಾರ್ಯಕ್ರಮ ಅ ಧಿಕಾರಿ ಡಾ| ರಾಮನ್‌ ಸವಾತಿ ವಾಮನ್‌ ತಿಳಿಸಿದರು. ಇದಕ್ಕಾಗಿ ಇತರ ಜಿಲ್ಲೆಗಳ ಮೆಡಿಕಲ್‌ ಕಾಲೇಜುಗಳ ಪರಿಣತರು ಇಲ್ಲಿಗೆ ಆಗಮಿಸುವರು. ಈ ಚಟುವಟಿಕೆಗಳ ಪ್ರಗತಿ ನೋಡಿಕೊಂಡು ಶೀಘ್ರದಲ್ಲೇ ಶಾಶ್ವತ ಸೌಲಭ್ಯ ಏರ್ಪಡಿಸಲಾಗುವುದು ಎಂದರು.

ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉಚಿತ ಸೇವೆ ನೀಡುವ ಹಾಗೂ ಬಸ್‌ ಸೌಲಭ್ಯ ನಡೆಸುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ. ಇದಕ್ಕೆ ಸ್ವಯಂ ಸೇವ ಸಂಘಟನೆಗಳ ಸಹಕಾರ ಅಗತ್ಯವಿದೆ ಎಂದು ಜಿಲ್ಲಾ ಧಿಕಾರಿ ತಿಳಿಸಿದರು.

ಸಭೆಯಲ್ಲಿ ಶಾಸಕ ಎಂ. ರಾಜ ಗೋಪಾಲ್‌, ಮಾಜಿ ಶಾಸಕ ಎಂ. ಕುಮಾರನ್‌, ಎಂಡೋಸಲಾ #ನ್‌ ವಿಭಾಗ ಸಹಾಯಕ ಜಿಲ್ಲಾ ಧಿಕಾರಿ ವಿ.ಎಂ. ಕೃಷ್ಣದಾಸ್‌, ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಎಂ. ಗೌರಿ, ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌, ಕಯ್ಯೂರು- ಚೀಮೇನಿ ಗ್ರಾ. ಪಂ. ಅಧ್ಯಕ್ಷೆ ಕೆ. ಶಕುಂತಲಾ, ಕಳ್ಳಾರ್‌ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಟಿ.ಕೆ. ನಾರಾಯಣನ್‌, ಕೋಡೋಂ-ಬೇಳೂರು ಗ್ರಾ. ಪಂ. ಅಧ್ಯಕ್ಷೆ ಪಿ.ಎನ್‌. ಉಷಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳಾದ ಗೋವಿಂದನ್‌ ಪಳ್ಳಿಕಾಪಿಲ್‌, ಜೋಸೆಫ್‌ ವಡಗರ, ವಿ.ಕೆ. ರಮೇಶನ್‌, ಪ್ರಮೀಳಾ ಸಿ. ನಾೖಕ್‌, ಸಾಮಾಜಿಕ ಕಾರ್ಯಕರ್ತರಾದ ನಾರಾಯಣನ್‌ ಪೆರಿಯ, ಮುನೀಸಾ ಅಂಬಲತ್ತರ, ಕೆ. ಬಾಲಕೃಷ್ಣನ್‌ ಮೊದಲಾದವರು ಉಪಸ್ಥಿತರಿದ್ದರು.

ಆರ್ಥಿಕ ಸಹಾಯ ಯಾವುದಕ್ಕೆ ಎಷ್ಟು?
ಆರ್ಥಿಕ ಸಹಾಯ ರೂಪದಲ್ಲಿ 171.10 ಕೋಟಿ ರೂ., ಚಿಕಿತ್ಸೆಗಾಗಿ 15.03 ಕೋಟಿ ರೂ., 2019-20 ನವೆಂಬರ್‌ ತಿಂಗಳ ವರೆಗಿನ ಪಿಂಚಣಿ, ಆಶಾವಾಸ ಕಿರಣಂ ಯೋಜನೆ, ವಿದ್ಯಾರ್ಥಿವೇತನ ಇತ್ಯಾದಿಗಳಿಗಾಗಿ 88.39 ಕೋಟಿ ರೂ., ಸಾಲ ಮನ್ನಾ ವಿಭಾಗದಲ್ಲಿ 6.82 ಕೋಟಿ ರೂ. ವೆಚ್ಚಮಾಡಿದೆ.

ಈ ಹಿನ್ನೆಲೆಯಲ್ಲಿ ಮುಂಗಡಪತ್ರದಲ್ಲಿ 50ಕೋಟಿ ರೂ. ಮಂಜೂರು ಮಾಡಲಾಗಿದೆ. ಸುಪ್ರೀಂ ಕೋರ್ಟ್‌ 2019 ಜುಲೈಯ ತೀರ್ಪು ಜಾರಿಗೊಳಿಸುವ ನಿಟ್ಟಿನಲ್ಲಿ 217.06 ಕೋಟಿ ರೂ. ಅಗತ್ಯವಿದೆ ಎಂದು ಸಚಿವರು ತಿಳಿಸಿದರು. 6,728 ಸಂತ್ರಸ್ತರು ಎಂಡೋಸಲ್ಫಾ ನ್‌ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಹಾಸುಗೆ ಹಿಡಿದವರು 371, ಬೌದ್ಧಿಕ ಬೆಳವಣಿಗೆ ಯಿಲ್ಲದವರು 1,499, ವಿಶೇಷ ಚೇತನರು 1,189, ಕ್ಯಾನ್ಸರ್‌ ರೋಗಿಗಳು 699, ಇತರ ರೋಗಿಗಳು 2,870 ಮಂದಿ ಇದ್ದಾರೆ.

ದುಬಾರಿ ಶುಲ್ಕ ತಡೆ ಯತ್ನ
ಪರಿಣತ ಚಿಕಿತ್ಸೆಗಾಗಿ ಜಿಲ್ಲೆಯಿಂದ ತೆರಳುವ ಎಂಡೋಸಲಾ #ನ್‌ ಸಂತ್ರಸ್ತರಿಂದ ಮಂಗಳೂರಿನ ಸಹಿತ ವಿವಿಧೆಡೆಗಳ ಕೆಲವು ಆಸ್ಪತ್ರೆಗಳು ದುಬಾರಿ ಶುಲ್ಕ ಪಡೆಯುತ್ತಿರುವುದಾಗಿ ಸಭೆಯಲ್ಲಿ ದೂರುಗಳು ಕೇಳಿಬಂದುವು. ಈ ಆಸ್ಪತ್ರೆಗಳ ಅಧಿ ಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವ ಚಂದ್ರಶೇಖರನ್‌ ಈ ವೇಳೆ ಭರವಸೆ ನೀಡಿದರು. ಜೊತೆಗೆ ಜಿಲ್ಲೆಯಲ್ಲೇ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ಮೂಲಕ ಈ ನಿಟ್ಟಿನಲ್ಲಿ ಪರಿಹಾರವನ್ನೂ ಕಂಡುಕೊಳ್ಳುವ ಯತ್ನ ನಡೆಸಲಾಗುವುದು.ಎಂಡೋಸಲಾ #ನ್‌ ಸಂತ್ರಸ್ತರ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ವರೆಗೆ 281.36 ಕೋಟಿ ರೂ. (281,36,58,033 ರೂ.)ವೆಚ್ಚ ಮಾಡಿದೆ.
-ಇ. ಚಂದ್ರಶೇಖರನ್‌

Advertisement

Udayavani is now on Telegram. Click here to join our channel and stay updated with the latest news.

Next