Advertisement

ಕುರುಬ ಸಮಾಜದ ಏಳ್ಗೆಗೆ ಪ್ರಾಮಾಣಿಕ ಪ್ರಯತ್ನ: ನಾಯ್ಕ

07:20 PM Nov 08, 2017 | |

ಹಗರಿಬೊಮ್ಮನಹಳ್ಳಿ: ಹಾಲುಮತ ಸಮಾಜ ಸಾಂಪ್ರದಾಯಿಕ ಉದ್ಯೋಗದ ಜೊತೆಗೆ ಶೈಕ್ಷಣಿಕ ಪ್ರಗತಿ ಸಾಧಿಸಬೇಕಿದೆ ಎಂದು ಶಾಸಕ ಭೀಮಾನಾಯ್ಕ ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ಹಾಲುಮತ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಮಾಜದ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಹೊಸ ಪದಾಧಿಕಾರಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ, ಪಕ್ಷಾತೀತವಾಗಿ ತೊಡಗಿಸಿಕೊಳ್ಳಬೇಕಿದೆ. ತಾಲೂಕಿನಲ್ಲಿ ನ.26ರಂದು ಹಾಲುಮತ ಸಮಾಜದಿಂದ ನಡೆಯುವ ಕನಕದಾಸರ ಜಯಂತಿಯಂದು ಸಮಾಜದ ಕಾಗಿನೆಲೆ ಪೀಠ ಮತ್ತು ತಿಂತಣಿಬ್ರಿಡ್ಜ್ ಪೀಠದ ಗುರುಗಳ ತುಲಾಭಾರ ಮಾಡಲಾಗುವುದು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕ್ಷೇತ್ರದ ಹಾಲುಮತ ಸಮಾಜದವರು ಹಾಲಿನಂತಹ ಮನಸ್ಸು ಉಳ್ಳವರು. ಇವರನ್ನು ಎಂದು ರಾಜಕೀಯ ಲಾಭಕ್ಕೆ ಬಳಸಿಕೊಳ್ಳವುದಿಲ್ಲ ಎಂದರು.

ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಕನಕ ಭವನದ ಮೇಲ್ಮಡಿ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಒದಗಿಸಬೇಕು. ಹಾಲುಮತ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಶಾಸಕರು ಸಿಎಂ ಗಮನ ಸೆಳೆಯಬೇಕು. ಕ್ಷೇತ್ರದಲ್ಲಿ 35 ಸಾವಿರಕ್ಕೂ ಹೆಚ್ಚು ಕುರುಬ ಸಮಾಜದ ಮತದಾರರಿದ್ದು, ನಿರ್ಲಕ್ಷ ಮಾಡಿದರೆ ಹಾಲುಮತ ಸಮಾಜದವರು ತಕ್ಕಪಾಠ
ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಸುಭಾಷ್‌ ತಳಕಲ್‌, ಕಿತೂ°ರು ಮಾರುತಿ, ಶಿವಶಂಕರ್‌, ಕೋಗಳಿ ಹನುಮಂತಪ್ಪ, ಚಿಲಗೋಡು ರವಿ, ಪರಶುರಾಮ ಸೇರಿದಂತೆ ಸಮಾಜದ 26 ನಿರ್ದೇಶಕರನ್ನು ಸನ್ಮಾನಿಸಲಾಯಿತು. ಕಡಲಬಾಳು ಗವಿಮಠದ ಶಾಖಾಮಠದ ಸೋಮಶೇಖರ್‌ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯ ಮೈನಳ್ಳಿ ಪ್ರಭಾಕರ್‌, ಬಿಇಒ ಪಾರಿ ಬಸವರಾಜ, ಸಿಪಿಐ ಕಾಶಿನಾಥ, ಡಾ| ದೇವಗಿರಿ, ನೌಕರರ ಘಟಕದ ಅಧ್ಯಕ್ಷ ದೇವಪ್ಪ, ಮುಖಂಡರಾದ ಮೈಲಾರಪ್ಪ, ವರದಾಪುರ ಕುಮಾರ್‌, ಕಡ್ಲಬಾಳು ವೆಂಕಟೇಶ, ಉಮೇಶ, ಕೊಚಾಲಿ ಮಂಜುನಾಥ್‌, ದೊಡ್ಡಬಸಪ್ಪ, ಹುಲುಗಪ್ಪ ಇತರರಿದ್ದರು. ಮುಖಂಡರಾದ ನೇತ್ರಾನಂದಪ್ಪ ರಾಮಲಿಂಗಪ್ಪ, ಹೇಮಣ್ಣ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next