ರಾಮದುರ್ಗ: ರೈತರು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿರುವೆ. ಆ ನಿಟ್ಟಿನಲ್ಲಿ ನೀರಾವರಿಯಿಂದ ವಂಚಿತವಾದ ಈ ಭಾಗಕ್ಕೆ ಸುಮಾರು 12 ಕೋಟಿ ಅನುದಾನದಲ್ಲಿ ವೀರಭದ್ರೇಶ್ವರ ಹಾಗೂ ಸಾಲಾಪುರ ಬಸವೇಶ್ವರ ಏತ ನೀರಾವರಿ ಯೋಜನೆ ತರಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಸಾಲಾಪುರದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ವಿನಾಕಾರಣ ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯ ಮಾಡಿರುವೆ. ಈ ಭಾಗಕ್ಕೆ ರಸ್ತೆ, ಸಮುದಾಯ ಭವನ, ಬಸ್ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಶಾಸಕನಾಗಿ ನನ್ನ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ನೋಡಿ ನನಗೆ ಮತ ನೀಡಿ. ಮೇ 12 ರಂದು ಮತದಾನವಿದ್ದು, ಕಾಂಗ್ರೆಸ್‌ಗೆ ಮತ ನೀಡಿ ನನ್ನ ಗೆಲುವಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಬಸವರಾಜ ಹಿರೇರಡ್ಡಿ ಮಾತನಾಡಿ, ಶಾಸಕ ಅಶೋಕ ಪಟ್ಟಣ ಯಾವುದೇ ಭಾಗಕ್ಕೆ ತಾರತಮ್ಯ ಮಾಡದೇ ಅಭಿವೃದ್ಧಿ ಕೈಗೊಂಡಿದ್ದಾರೆ. ಅಂತವರ ಗೆಲುವಿಗೆ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಸೋಮಶೇಖರ ಹಂಪನ್ನವರ, ಜಿಪಂ ಸದಸ್ಯ ಕೃಷ್ಣಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷ ಮಾನಿಂಗಪ್ಪ ಹಂಪಿಹೊಳಿ, ಮುಖಂಡರಾದ ಕಲ್ಲಣ್ಣ ವಜ್ರಮಟ್ಟಿ, ಬಸವರಾಜ ಪ್ಯಾಟಿಗೌಡ್ರ, ಸೋಮು ಲಮಾಣಿ, ನಿಂಗನಗೌಡ ಪಾಟೀಲ, ಜಗದೀಶ ದೇಸಾಯಿ, ಶಿವಪ್ಪ ಸುಣಗದ, ಯಲ್ಲಪ್ಪ ಅವರಾದಿ, ಹನಮಂತ ಬಂಡಿವಡ್ಡರ, ಶಿವಾನಂದ ಲಗಳಿ ಉಪಸ್ಥಿತರಿದ್ದರು. ಓಬಳಾಪುರ ತಾಂಡಾ, ದಾಡಿಬಾಂವಿ ತಾಂಡಾ, ಓಬಳಾಪುರ ಎಸ್.ಎಲ್.ಟಿ, ದಾಡಿಬಾಂವಿ, ಸಾಲಾಪುರ ತಾಂಡಾ, ವೆಂಕಟಾಪುರ, ಸೊಪ್ಪಡ್ಲ, ಓಬಳಾಪುರ, ಓಬಳಾಪುರ ಡಿಎಲ್‌ಡಿ, ಗೊಣ್ಣಾಗರ, ಮಾರಡಗಿ,
ಹುಲಿಗೊಪ್ಪ, ಕೊಳಚಿ, ಘಟಕನೂರ, ಚಿಂಚಖಂಡಿ, ದೊಡಮಂಗಡಿ ಗ್ರಾಮಗಳಲ್ಲಿ ಶಾಸಕರು ಮತಯಾಚನೆ ಮಾಡಿದರು.