Advertisement

ಬೋನಸ್‌ ವಾಪಸು ಕೊಟ್ಟುಬಿಡಿ! ಹೋಂಡಾ ಸಂಸ್ಥೆ

12:02 PM Sep 22, 2022 | Team Udayavani |

ವಾಷಿಂಗ್ಟನ್‌: “ಹೆಚ್ಚು ಬೋನಸ್‌ ಕೊಟ್ಟುಬಿಟ್ಟಿದ್ದೇವೆ, ಈಗ ಅದನ್ನು ವಾಪಸು ಕೊಟ್ಟುಬಿಡಿ’ ಎಂದು ಹೋಂಡಾ ಸಂಸ್ಥೆ ಸಿಬ್ಬಂದಿಯನ್ನು ಕೇಳಿರುವ ವಿಚಿತ್ರ ಘಟನೆ ಅಮೆರಿಕದಲ್ಲಿ ನಡೆದಿದೆ.

Advertisement

ಜಪಾನ್‌ ಮೂಲದ ಹೋಂಡಾ ಸಂಸ್ಥೆ ಇತ್ತೀಚೆಗೆ ಅಮೆರಿಕ ಓಹಿಯೋ ಮತ್ತು ಮರಿಸಿಲ್ವೆ ರಾಜ್ಯಗಳಲ್ಲಿನ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಬೋನಸ್‌ ಕೊಟ್ಟಿದೆ.

ಆ ಖುಷಿಯಲ್ಲಿದ್ದ ಸಿಬ್ಬಂದಿಗೆ ಪ್ರಕಟಣೆ ಮೂಲಕ ಶಾಕ್‌ ಅನ್ನೂ ಕೊಟ್ಟಿದೆ. “ಬೋನಸ್‌ ಹಣವನ್ನು ವಾಪಸು ಕೊಡಿ. ಒಂದು ವೇಳೆ ನೀವು ಇದಕ್ಕೆ ಪ್ರತಿಕ್ರಿಯಿಸದೇ ಹೋದರೆ ನಿಮ್ಮ ಸಂಬಳದಲ್ಲಿ ಆ ಹಣವನ್ನು ಕಡಿತ ಮಾಡಿಕೊಳ್ಳುತ್ತೇವೆ’ ಎಂದು ಸಂಸ್ಥೆ ಹೇಳಿದೆ.

ಈ ವಿಚಾರ ಎಲ್ಲೆಡೆ ಹರಿದಾಡಿದ್ದು, ನೆಟ್ಟಿಗರು ಹೋಂಡಾ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next