Advertisement

ಹೋಂಡಾ ಮೋಟಾರ್‌ ಸೈಕಲ್‌- ವೋಗೊ ಒಡಂಬಡಿಕೆ‌

12:28 PM Sep 30, 2018 | |

ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ದ್ವಿಚಕ್ರ ವಾಹನಗಳ ತಯಾರಕ ಹೋಂಡಾ ಮೋಟಾರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಪ್ರೈ. ಲಿ., (ಎಚ್‌ಎಂಎಸ್‌ಐ) ಸ್ಕೂಟರ್‌ ಶೇರಿಂಗ್‌ ನೆಟ್‌ವರ್ಕ್‌ ಸಂಸ್ಥೆ ವೋಗೊ ಜತೆ ಒಡಂಬಡಿಕೆ ಮಾಡಿಕೊಂಡಿದೆ.

Advertisement

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೋಂಡಾ ಮೋಟಾರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಮುಖ್ಯಸ್ಥ (ದಕ್ಷಿಣ) ಯೋಗೇಶ್‌ ಮಾಥುರ್‌ ಅವರು ಬೆಂಗಳೂರು ಮತ್ತು ಹೈದರಾಬಾದ್‌ ನಗರದಲ್ಲಿ ಶೇರಿಂಗ್‌ ನೆಟ್‌ವರ್ಕ್‌ನಲ್ಲಿ ರಸ್ತೆಗಿಳಿಯುವ 1000 ಹೊಸ ಸ್ಕೂಟರ್‌ಗಳ ಚಾಲನೆಯ ಸಂಕೇತ‌ವಾಗಿ ಸ್ಕೂಟರ್‌ ಕೀಯನ್ನು ವೋಗೊ ಸಂಸ್ಥಾಪಕ ಪದ್ಮನಾಭನ್‌ ಬಿ. ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎಚ್‌ಎಂಎಸ್‌ಐ ಮಾರಾಟ ಮತ್ತು ಮಾರುಕಟ್ಟೆ ಹಿರಿಯ ಉಪಾಧ್ಯಕ್ಷ ಯದ್ವಿಂದರ್‌ ಸಿಂಗ್‌ ಗುಲೇರಿಯಾ ಮಾತನಾಡಿ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ 100ಕ್ಕೂ ಹೆಚ್ಚು ಪಿಕ್‌ಅಪ್‌ ಪಾಯಿಂಟ್‌ಗಳನ್ನು ಹೊಂದಿರುವ ವೋಗೊ, ಸಾರ್ವಜನಿಕರಿಗೆ ಕನಿಷ್ಠ ದರದಲ್ಲಿ ಸ್ಕೂಟರ್‌ಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ.

ನಮ್ಮ ಕಂಪನಿಯ 1500 ಆಕ್ಟಿವಾ 5ಜಿ ಸ್ಕೂಟರ್‌ಗಳಲ್ಲಿ ಹೈದರಾಬಾದ್‌ನಲ್ಲಿ 200 ಬೆಂಗಳೂರಿನಲ್ಲಿ 300 ವಾಹನಗಳು ಈಗಾಗಲೇ ಸೇವೆಗೆ ಸಜ್ಜಾಗಿವೆ. ವಾಹನ ಶೇರ್‌ ಪದ್ಧತಿಯಿಂದ ಜನರಿಗೆ ಹಾಗೂ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

2014ರಲ್ಲಿ 10 ಶೇರ್‌x ಮೊಬಿಲಿಟಿ ಸಂಸ್ಥೆಗಳೊಡನೆ ಒಪ್ಪಂದ ಮಾಡಿಕೊಂಡು ವಹಿವಾಟು ಆರಂಭಿಸಿದ್ದ ಹೋಂಡಾ, ಪ್ರಸ್ತುತ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌, ಕೊಲ್ಕತ, ಜೈಪುರ, ಕೊಚ್ಚಿ, ಅಹಮದಾಬಾದ್‌, ಗುರುಗ್ರಾಮ, ಗೋವಾ ಸೇರಿ 30ಕ್ಕೂ ಅಧಿಕ ನಗರಗಳಲ್ಲಿ ಸೇವೆ ಆರಂಭಿಸಿದೆ ಎಂದು ತಿಳಿಸಿದರು.

Advertisement

ಶೇರಿಂಗ್‌ ಮೊಬಿಲಿಟಿ: ವೋಗೊ ಸಂಸ್ಥಾಪಕ ಪದ್ಮನಾಭನ್‌ ಬಿ. ಅವರು ಮಾತನಾಡಿ, ದೇಶದ ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸ್ಕೂಟರ್‌ ನೆಟ್‌ವರ್ಕ್‌ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೋಗೊ ಮುಂದಿನ ದಿನಗಳಲ್ಲಿ ತನ್ನ ಸೇವೆ ವಿಸ್ತರಿಸಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next