Advertisement
ಮನೆಯ ವಸ್ತುಗಳಿಗೆ ಪೇಪರ್ ಕವರ್ಇತ್ತೀಚೆಗೆ ಗೂಡು ದೀಪ, ನಕ್ಷತ್ರಗಳೆಲ್ಲ ಪ್ಲಾಸ್ಟಿಕ್‌ನಿಂದ ಪೇಪರ್‌ನತ್ತ ವಾಲುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದನ್ನೇ ಮನೆ ಅಲಂಕಾರದಲ್ಲೂ ಬಳಸಬಹುದು. ಬಣ್ಣದ ಕಾಗದಗಳಲ್ಲಿ ಇಂತಹ ನಕ್ಷತ್ರಗಳನ್ನು ತಯಾರಿಸಿ ಮನೆಯ ಎದುರು ನೇತಾಡಿಸಬಹುದು. ಮನೆಯ ಬಲ್ಬ್ಗಳು ಕಣ್ಣಿಗೆ ಕುಕ್ಕುವಂತಿದ್ದರೆ ಅದಕ್ಕೆ ಕಾಗದಗಳ ಕವರ್ ಮಾಡಿ ಬೆಳಕನ್ನು ಮಂದವಾಗಿಸಬಹುದು. ಮಲಗುವ ಕೋಣೆ, ಡೈನಿಂಗ್ ಹಾಲ್‌ಗಳಿಗೆ ಈ ಐಡಿಯಾವನ್ನು ಬಳಸಬಹುದು.
ಸ್ಟಿಕ್ಕರ್ ಎಂಬ ಕಾನ್ಸೆಪ್ಟ್ ತೀರಾ ಇತ್ತೀಚಿಗಿನದಾದರೂ ಅದು ಎಲ್ಲರ ಮನೆಗಳನ್ನು ಆಕ್ರಮಿಸಿಕೊಂಡಿದೆ. ಖಾಲಿ ಇರುವ ಗೋಡೆ ಅಥವಾ ಮನೆಯ ಖಾಲಿ ಇರುವ ಜಾಗಗಳಿಗೆ ಈ ಸ್ಟಿಕ್ಕರ್‌ಗಳನ್ನು ಹಾಕುವುದರಿಂದ ಖಾಲಿ ಜಾಗ ಕಾಣಿಸುವುದಿಲ್ಲ ಎಂದು ಮಾತ್ರವಲ್ಲ ಮನೆಯೂ ಅಂದವಾಗುತ್ತದೆ. ಟಿವಿ ಕಪಾಟಿನಲ್ಲಿ ಡಿಸೈನ್ಸ್, ಗೋಡೆಯಲ್ಲಿ ಗಿಟಾರ್, ಬಾಗಿಲಿನಲ್ಲಿ ಶಂಖ, ಮಲಗುವ ಕೋಣೆಯ ಇಂಟೀರಿಯರ್‌ಗೆ ನಕ್ಷತ್ರ, ಚಂದ್ರನ ಸ್ಟಿಕ್ಕರ್‌ಗಳನ್ನು ಹಾಕಿ ಅಲಂಕರಿಸಬಹುದು. ಇವುಗಳಲ್ಲಿ ಭಿನ್ನ ಭಿನ್ನ ಸ್ಟಿಕ್ಕರ್‌ಗಳು ಲಭ್ಯವಾಗುತ್ತವೆೆ. ಕೆಲವೊಂದು ಬಿಳಿ ಗೋಡೆಯಲ್ಲಿ ಹೊಳೆಯುತ್ತಿದ್ದರೆ ಇನ್ನು ಕೆಲವು ಸ್ಟಿಕ್ಕರ್‌ಗಳು ರಾತ್ರಿ ಹೊಳೆಯುವಂಥವುಗಳು. ಆಯ್ಕೆ ಅವರವರ ಇಷ್ಟದಂತಿರುತ್ತದೆ,
Related Articles
Advertisement
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು