Advertisement

ಸಾಗರ: ಮನೆ ಕಳ್ಳತನ ಆರೋಪಿಗಳನ್ನು ಬಂಧಿಸಿದ ಪೊಲೀಸರು

11:06 AM Aug 07, 2022 | Suhan S |

ಸಾಗರ: ಜುಲೈ 14 ರಂದು ನಗರದ ಶ್ರೀಧರ ನಗರದ ಮನೆಯೊಂದರಲ್ಲಿ ನಡೆದ ಬೆಳ್ಳಿ, ಬಂಗಾರ ಹಾಗೂ ಬಂಗಾರದ ಕಳ್ಳತನದ ಪ್ರಕರಣವನ್ನು ಬೇಧಿಸಿರುವ ಸಾಗರ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

Advertisement

ಆರೋಪಿಗಳಾದ ಶ್ರೀಧರ ನಗರದ ಶಿವರಾಜ್ ಹಾಗೂ ಸೂರನಗದ್ದೆಯ ದೊರೆರಾಜ್‌ನಿಂದ ೩.೩೦ ಲಕ್ಷ ರೂ. ಮೌಲ್ಯದ ಸುಮಾರು 74 ಗ್ರಾಂ ಬಂಗಾರ, 8 ಸಾವಿರ ರೂ. ಮೌಲ್ಯದ ಬೆಳ್ಳಿ ಹಾಗೂ ೪ ಸಾವಿರ ರೂ. ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಬಿ.ಸೀತಾರಾಮ್ ಹಾಗೂ ಕಾರ್ಗಲ್ ಠಾಣೆ ವೃತ್ತ ನಿರೀಕ್ಷಕ ಕೃಷ್ಣಪ್ಪ ನೇತೃತ್ವದಲ್ಲಿ ಸಾಗರದ ಪಿಎಸ್‌ಐ ಟಿ.ಡಿ.ಸಾಗರ್‌ಕರ್, ಕಾರ್ಗಲ್ ಪಿಎಸ್‌ಐ ತಿರುಮಲೇಶ್, ಸಿಬ್ಬಂದಿಗಳಾದ ರತ್ನಾಕರ್, ಸದಾನಂದ, ನಾಗರಾಜ ನಾಯ್ಕ, ಮೈಲಾರಿ, ವಿಶ್ವನಾಥ, ಲೋಕೇಶ್‌ರನ್ನು ಒಳಗೊಂಡ ತಂಡ ಶನಿವಾರ ಆರೋಪಿಗಳನ್ನು ವಶಪಡಿಸಿಕೊಂಡು ನ್ಯಾಯಾಂಗದ ವಶಕ್ಕೆ ಒಪ್ಪಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next