Advertisement

ಗೃಹ ಉಳಿತಾಯ ಪ್ರಮಾಣ ಏರಿಕೆ

08:30 AM Dec 22, 2017 | Team Udayavani |

ಮುಂಬಯಿ: ನೋಟು ಅಮಾನ್ಯ ಮಾಡಿದ್ದರಿಂದಲಾಗಿ ಮನೆಗಳಲ್ಲಿ ಉಳಿತಾಯವಾಗುತ್ತಿದ್ದ ಮೊತ್ತವೂ ಈಗ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಸೇರ್ಪಡೆಯಾಗಿದೆ. ಅದರ ಪ್ರಮಾಣ ಹಾಲಿ ಹಣಕಾಸು ವರ್ಷದಲ್ಲಿ ಶೇ.2ರಷ್ಟು ಏರಿಕೆಯಾಗಿದೆ. ಈ ಬಗ್ಗೆ ಆರ್‌ಬಿಐಯ ವಾರ್ಷಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ. ನೋಟು ಅಮಾನ್ಯಕ್ಕಿಂತ ಮೊದಲು ಅದರ ಪ್ರಮಾಣ ಶೇ.61.5ರಷ್ಟು ಇತ್ತು. ನಿರ್ಧಾರದ ಬಳಿಕ ಅದು ಶೇ.63.2ಕ್ಕೆ ಏರಿಕೆಯಾಗಿದೆ.  ಒಟ್ಟಾರೆಯಾಗಿ ಹೇಳುವು ದಿದ್ದರೆ ಮನೆಗಳಲ್ಲಿ ಸಂಗ್ರಹವಾಗುತ್ತಿದ್ದ ಹಣ ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಸಂಗ್ರಹವಾಗುವ ಪ್ರಮಾಣ ಶೇ.14.14ಕ್ಕೆ ಏರಿಕೆಯಾಗಿದೆ. ಈ ಹಿಂದೆ ಅದರ ಪ್ರಮಾಣ ಶೇ.11.20ರಷ್ಟಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next