Advertisement

ಮೇಲುಸ್ತುವಾರಿಯೇ  ಮನೆಯಲ್ಲಿ  ಕಳವು ಗೈದು ಸೆರೆಯಾದ

09:44 AM Dec 08, 2017 | Team Udayavani |

ಮೂಡಬಿದಿರೆ: ಪುತ್ತಿಗೆ ಗ್ರಾಮದ ಕಾಯರ್‌ಪುಂಡುವಿನಲ್ಲಿ ಮನೆ ಮತ್ತು ತೋಟದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾತನೇ ಆ ಮನೆಯ ಹಂಚು ತೆಗೆದು ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ವರದಿಯಾಗಿದೆ. ಆರೋಪಿ ಅಶ್ವತ್ಥಪುರ ಗುಂಡೆಬೆಟ್ಟು ನಿವಾಸಿ ಅಶೋಕ್‌(42)ನನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.

Advertisement

ಸಂಪಿಗೆಯ ರಿಕ್ಷಾ ಚಾಲಕ ಅಶೋಕ್‌ ತನ್ನ ವೃತ್ತಿಯ ಜತೆಗೆ ರತ್ನಾ  ಅವರಿಗೆ ಸೇರಿದ  ಮನೆ ಮತ್ತು ತೋಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ. ನ. 25ರಂದು ರತ್ನಾ  ಅವರ ಮನೆಯಲ್ಲಿ ಯಾರೂ  ಇಲ್ಲದ ವೇಳೆ ಮನೆಯ ಹಂಚು ತೆಗೆದು ಚಿನ್ನಾಭರಣ ಕಳವು ಮಾಡಿ ಮೂಡಬಿದಿರೆಯ ಸಹಕಾರಿ ಬ್ಯಾಂಕ್‌ ಒಂದರಲ್ಲಿ ಅಡವಿಟ್ಟಿದ್ದ ಎನ್ನಲಾಗಿದೆ.

ಕಳ್ಳತನದ ಬಗ್ಗೆ  ರತ್ನಾ ಅವರು ನೀಡಿದ ದೂರಿನನ್ವಯ  ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಸ್‌.ಐ. ಶಂಕರ್‌ ನಾಯರಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಗುರುವಾರ ಆರೋಪಿಯನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next