ವಿಜಯಪುರ: ಗುಜರಾತ್‍ನಿಂದ ಬಂದಿರುವ ಕೋವಿಡ್-19 ಹೋಂ ಕ್ವಾರೈಂಟನ್ ವ್ಯಕ್ತಿಯೊಬ್ಬರು ತಮ್ಮ ಕೈ ಮೇಲೆ ಸ್ಟ್ಯಾಂಪಿಂಗ್ ಹಾಕಿಸಿಕೊಳ್ಳಲು ಕಿರಿಕ್ ಮಾಡಿ, ಸ್ಥಳಕ್ಕೆ ತೆರಳಿದ ತಹಸೀಲ್ದಾರರೊಂದಿಗೆ ತಗಾದೆ ತೆಗೆದಿದ್ದಾನೆ. ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ ಬಳಿಕ ಸ್ಟ್ಯಾಂಪಿಂಗ್ ಹಾಕಿಸಿಕೊಳ್ಳಲು ಮುಂದಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ವಂದಾಲ ಗ್ರಾಮಕ್ಕೆ ಗುಜರಾತ್ ನಿಂದ ಬಂದಿದ್ದ ವ್ಯಕ್ತಿಗೆ ಮನೆಯಲ್ಲೇ ನಿಗಾದಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದ್ದರು. ಇದೀಗ ಜಿಲ್ಲಾಡಳಿತ ವಿದೇಶದಿಂದ ಮಾತ್ರವಲ್ಲ ಹೊರ ರಾಜ್ಯ ಹಾಗೂ ಜಿಲ್ಲೆಗಳ ವ್ಯಕ್ತಿಳಿಗೂ ಕೋವಿಡ್-19 ಹೋಂ ಕ್ವಾರೈಂಟನ್ ಸ್ಟ್ಯಾಂಪಿಂಗ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಇದರಿಂದಾಗಿ ನಿಡಗುಂದಿ ತಹಸೀಲ್ದಾರ ತಹಶೀಲ್ದಾರ್ ಪ್ರಭು ವಾಲಿ ತಮ್ಮ ಸಿಬ್ಬಂದಿಯೊಂದಿಗೆ ಮಂಗಳವಾರ ಗುಜರಾತ್‍ನಿಂದ ಬಂದಿರುವ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಸ್ಟ್ಯಾಂಪಿಂಗ್ ಹಾಕಲು ಮನೆಗೆ ಹೋದಾಗ ತಗಾದೆ ತೆಗೆದಿದ್ದಾರೆ. ನಾನು ಮನೆಯಲ್ಲಿ ಇರುತ್ತೇನೆ, ಸ್ಟ್ಯಾಂಪಿಂಗ್ ಮಾತ್ರ ಬೇಡ. ನಾನು ಗ್ರಾಮಕ್ಕೆ ಮರಳಿ 10 ದಿನ ಕಳೆದಿದ್ದು, ಇನ್ನು 4 ದಿನದಲ್ಲಿ ನನ್ನ ಹೋಂ ಕ್ವಾರಂಟೈನ್ ಕೊನೆಗೊಳ್ಳಲಿದೆ ಹೀಗಾಗಿ ನನಗೆ ಸ್ಟ್ಯಾಂಪಿಂಗ್ ಬೇಡ ಎಂದು ತಗಾದೆ ತೆಗೆದಿದ್ದಾನೆ.
ಇದಕ್ಕೆ ಸಮಾಜಯಿಷಿ ನೀಡಿದ ತಹಸೀಲ್ದಾರ ಪ್ರಭು ಅವರು, ಏಪ್ರೀಲ್ 14 ಕ್ಕೆ ಲಾಕ್ ಡೌನ್ ಕೊನೆ ಗೊಳ್ಳಲಿದೆ. ಅಲ್ಲಿಯ ವರೆಗೆ ಸರ್ಕಾರದ ಸೂಚನೆಯಂತೆ ಯಾರೂ ಮನೆಯಿಂದ ಹೊರ ಬರದೇ ಮನೆಯಲ್ಲೇ ಇರಬೇಕು. ಇದೀಗ ಹೊರ ಜಿಲ್ಲೆ-ರಾಜ್ಯಗಳಿಂದ ಬಂದವರಿಗೂ ಸ್ಟ್ಯಾಂಪಿಂಗ್ ಹಾಕಲೇಬೇಕು ಎಂದು ಅಧಿಕಾರಿಗಳು ಹೇಳಿದರೂ ವ್ಯಕ್ತಿ ಸ್ಟ್ಯಾಂಪಿಂಗ್‍ಗೆ ಒಪ್ಪಿಕೊಳ್ಳಲಿಲ್ಲ.
ಅಂತಿಮವಾಗಿ ತಹಸೀಲ್ದಾರ್ ಪ್ರಭು ವಾಲಿ ಅವರು ನಿಮ್ಮನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಸಿದಾಗ ಈತನು ಸೇರಿದಂತೆ ಕುಟುಂಬದ ಮೂವರಿಗೆ ಸ್ಟ್ಯಾಂಪಿಂಗ್ ಮಾಡಲಾಯಿತು. ಈ ಹಂತದಲ್ಲಿ ಮತ್ತೆ ತಗಾದೆ ತೆಗೆದ ವ್ಯಕ್ತಿ, ನೀವು ಹಾಕಿದ ಸೀಲ್ ಅಳಸಿಹೋಗದಿದ್ದರೆ ಲಾಕ್‍ಡೌನ್ ಬಳಿಕವೂ ನಾನು ಹೊರಗೆ ತಿರುಗುವುದು ದುಸ್ತರವಾಗಲಿದೆ. ಹೀಗಾಗಿ 4 ದಿನದ ಬಳಿಕ ನೀವೇ ಮನೆಗೆ ಬಂದು ಹಾಕಿದ ಸೀಲ್ ಅಳಸಿ ಹಾಕಿ ಎಂದು ವಾಗ್ವಾದ ಮಾಡಿದ್ದಾನೆ.