Advertisement

ಮಹತ್ವದ ಆಸಿಯಾನ್‌ ಸಮ್ಮೇಳನ ಇಂದು

08:54 AM Jan 25, 2018 | Team Udayavani |

ಹೊಸದಿಲ್ಲಿ: ದಕ್ಷಿಣ ಏಷ್ಯಾ ವ್ಯಾಪ್ತಿಯಲ್ಲಿ ಸರ್ವ ರೀತಿಯಲ್ಲಿ ಶಕ್ತಿ ವರ್ಧಿಸುತ್ತಿರುವ ಚೀನಗೆ ಸವಾಲು ಹಾಕುವ ನಿಟ್ಟಿನಲ್ಲಿಯೇ ಗುರುವಾರ ಹೊಸದಿಲ್ಲಿಯಲ್ಲಿ ಆಸಿಯಾನ್‌ -ಭಾರತ ರಾಷ್ಟ್ರಗಳ ಸಮಾವೇಶ ನಡೆಯಲಿದೆ. ಅದಕ್ಕಾಗಿ ಹತ್ತು ರಾಷ್ಟ್ರಗಳ ಮುಖ್ಯಸ್ಥರು ಹೊಸದಿಲ್ಲಿಗೆ ಆಗಮಿಸಲಾರಂಭಿಸಿದ್ದಾರೆ. ಗಮನಾರ್ಹ ವಿಚಾರವೆಂದರೆ ಆಸಿಯಾನ್‌-ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದು 25 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಮಹತ್ವ ಪಡೆದಿದೆ. ಅವರು ಶುಕ್ರವಾರ ನಡೆಯುವ ಗಣ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿಯೂ ಭಾಗವಹಿ ಸಲಿದ್ದಾರೆ. ಆಸಿಯಾನ್‌ ದೇಶಗಳೊಂದಿಗೆ ಭಾರತದ ಸಹಭಾಗಿತ್ವಕ್ಕೆ 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

Advertisement

ವ್ಯಾಪಾರ ಮತ್ತು ವಹಿವಾಟು ಒಪ್ಪಂದಗಳು ಮತ್ತು ಚರ್ಚೆಗಳು ಈ ಸಮ್ಮೇಳನದಲ್ಲಿ ಪ್ರಮುಖವಾಗಿರಲಿದೆ. ಪ್ರತಿ ವರ್ಷ ಆಸಿಯಾನ್‌ ದೇಶಗಳೊಂದಿಗೆ ಆರ್ಥಿಕ ಹಾಗೂ ರಾಜಕೀಯ ವಿಚಾರಗಳನ್ನು ಚರ್ಚಿಸಲು ದಿಲ್ಲಿ ಡೈಲಾಗ್‌ ಎಂಬ ಕಾರ್ಯಕ್ರಮನ್ನು ನಡಸಲಾಗುತ್ತದೆ. ಈ ಮಧ್ಯೆ ಹತ್ತು ದೇಶಗಳ ಗಣ್ಯರು ಆಗಮಿಸಿದ್ದರಿಂದ ದಿಲ್ಲಿಯಲ್ಲಿ ಹಲವು ರಸ್ತೆಗಳನ್ನು ಭದ್ರತಾ ಕ್ರಮವಾಗಿ ಮುಚ್ಚಲಾಗಿದೆ. ಇದರಿಂದಾಗಿ ದಿಲ್ಲಿಯಲ್ಲಿ ಸಾರ್ವಜನಿಕ ಸಂಚಾರ ದುಸ್ತರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next