Advertisement

ಸರ್ಕಾರೇತರ ಸಂಸ್ಥೆಗಳಿಗೆ ಅಕ್ರಮ ವಿದೇಶಿ ದೇಣಿಗೆ: 14 ಜನರ ಬಂಧನ

10:57 PM May 11, 2022 | Team Udayavani |

ನವದೆಹಲಿ: ದೇಶದ ನಾನಾ ಸರ್ಕಾರೇತರ ಸಂಸ್ಥೆಗಳಿಗೆ (ಎನ್‌.ಜಿ.ಒ) ವಿದೇಶಿ ದೇಣಿಯ ಹರಿವು ಬರುವಂತೆ ಮಾಡುವ ದಂಧೆಯೊಂದನ್ನು ಬಯಲುಗೊಳಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಸಿದಂತೆ 14 ಜನರನ್ನು ಬಂಧಿಸಲಾಗಿದ್ದು, 3.21 ಕೋಟಿ ರೂ. ಮೊತ್ತದ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

Advertisement

ಎನ್‌ಜಿಒಗಳಿಗೆ ವಿದೇಶಿ ದೇಣಿಗೆ ಬರುವಂತೆ ಮಾಡುವ ಅತಿ ದೊಡ್ಡ ಜಾಲ ಇದಾಗಿದ್ದು, ಈ ಜಾಲದಲ್ಲಿ ಹಲವಾರು ಮದ್ಯವರ್ತಿಗಳು, ಸರ್ಕಾರಿ ಅಧಿಕಾರಿಗಳು ಷಾಮೀಲಾಗಿದ್ದಾರೆ.

ಇವರೆಲ್ಲರೂ ಎನ್‌ಜಿಒಗಳಿಗೆ ವಿದೇಶಗಳಿಂದ ದೇಣಿಗೆ ಬರಲು ಅನುಕೂಲ ಕಲ್ಪಿಸುವ, ಕೇಂದ್ರ ಸರ್ಕಾರದಿಂದ ನೀಡಲಾಗುವ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿಯ (ಎಫ್ಸಿಆರ್‌ಎ) ಪ್ರಮಾಣಪತ್ರವನ್ನು ಒದಗಿಸಿಕೊಡುತ್ತಿದ್ದವು. ಈ ಜಾಲವನ್ನು ಭೇದಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಉಬೆರ್‌ ಕಪ್‌: ಕೊರಿಯಾ ವಿರುದ್ಧ ಭಾರತೀಯ ವನಿತಾ ತಂಡಕ್ಕೆ ಸೋಲು

Advertisement

Udayavani is now on Telegram. Click here to join our channel and stay updated with the latest news.

Next