Advertisement

ತೊಡೆ ತಟ್ಟೋದು ಜನ ನೋಡ್ತಾ ಇದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ

12:50 PM Jan 08, 2022 | Team Udayavani |

ಬೆಂಗಳೂರು: ತೊಡೆ ತಟ್ಟೋದು, ಸವಾಲು ಹಾಕೋದನ್ನು ಜನ ನೋಡ್ತಿದ್ದಾರೆ. ಕಾಯ್ದೆ ಬಿಜೆಪಿಗೆ ಬೇರೆ, ಕಾಂಗ್ರೆಸ್​ಗೆ ಬೇರೆ, ಜೆಡಿಎಸ್​ಗೆ ಬೇರೆ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಕೊರೊನಾ ಎಫೆಕ್ಟ್ ಏನಾಗುತ್ತಿದೆ ಅಂತಾ ತಾಳ್ಮೆಯಿಂದ ಯೋಚನೆ ಮಾಡಲಿ. ನಾನು ಬೀದಿಯಲ್ಲಿ ಹೋಗಿ ಅವರ ಜತೆ ಕುಸ್ತಿ ಮಾಡಲು ಆಗಲ್ಲ ಎಂದು ಡಿ.ಕೆ.ಶಿವಕುಮಾರ್ ಸವಾಲ್​ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರು ತಮ್ಮ ಹಠ ತೊರೆದು, ಕರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಸರಕಾರದ ಜೊತೆಗೆ ಸಹಕರಿಸಬೇಕು, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಇಂದು ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾಂಕ್ರಾಮಿಕವಾಗಿ ಉಲ್ಬಣ ವಾಗುತ್ತಿರುವ ಈ ಸಂದರ್ಬದಲ್ಲಿ ಮುಂಜಾಗರೂಕತಾ ಕ್ರಮವಾಗಿ ತೆಗೆದುಕೊಂಡ ನಿರ್ಭಂಧ ಗಳನ್ನು ಬೆಂಬಲಿಸಿ, ಸಹಕರಿಸಬೇಕು, ಎಂದರು.

ಮೇಕೆದಾಟು ಯೋಜನೆ ಸಂಬಂಧ ಇರುವ ವಿವಾದ ಅತ್ಯುಚ್ಛ ನ್ಯಾಯಾಲಯದ ಅಂಗಳದಲ್ಲಿದೆ. ಕಾಂಗ್ರೆಸ್ ನವರು ಸರಕಾರ ನಡೆಸಿದವರು, ಜವಾಬ್ದಾರಿಯಿಂದ ವರ್ತಿಸಬೇಕು, ಎಂದು ಅಭಿಪ್ರಾಯ ಪಟ್ಟರು.

Advertisement

ಅನಾರೋಗ್ಯ ಬಂದ ಮೇಲೆ, ಸಮಸ್ಯೆ ಎದುರಿಸುವುದಕ್ಕಿಂತ, ಬಾರದಂತೆ ತಡೆಯುವುದು ಅತ್ಯುತ್ತಮ ಪ್ರಯತ್ನ, ಎಂದ ಸಚಿವರು, ‘ ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಗೆ ಪೊಲೀಸರು ಅತ್ಯಂತ ಸಹನೆಯಿಂದ ವರ್ತಿಸಬೇಕು, ಸಾರ್ವಜನಿಕರೂ ಸರಕಾರದ ಜತೆ ಸಹಕರಿಸಬೇಕು, ಎಂದು ತಿಳಿಸಿದರು. ಕಾನೂನನ್ನು ಉಲ್ಲಂಘಿಸಿ ದವರ ವಿರುಧ್ದ ಪ್ರಕೃತಿ ವಿಕೋಪ ತಡೆ ಕಾಯ್ದೆ ಯಂತೆ ಕ್ರಮ ತೆಗೆದುಕೊಳ್ಳಲಾಗುವುದು, ಎಂದು ಸಚಿವರು ಎಚ್ಚರಿಕೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next