Advertisement

ಕೆರೆಬೇಟೆ ಗಲಾಟೆ ಪ್ರಕರಣ: ರೈತರ ಹಿತ ಕಾಯ್ದ ಗೃಹ ಸಚಿವರಿಗೆ ಅಭಿನಂದನೆ

06:51 PM Jul 31, 2022 | Vishnudas Patil |

ಸೊರಬ: ಕಾನುಗೋಡು ಕೆರೆಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ರೈತರ ಹಿತ ಕಾಯ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತೀರ್ಥಹಳ್ಳಿಯಲ್ಲಿ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

Advertisement

ಇದೇ ಸಂದರ್ಭದಲ್ಲಿ ಕಾನುಗೋಡು ಕೆರೆಬೇಟೆ ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಲಾಯಿತು. ಸ್ಪಂದಿಸಿದ ಗೃಹ ಸಚಿವರು ತಕ್ಷಣವೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕಾರವಾರ ಜಿಲ್ಲಾವರಿಷ್ಠಾಧಿಕಾರಿ ಅವರಿಗೆ ದೂರವಾಣಿ ಕರೆ ಮೂಲಕ ಸೂಚನೆ ನೀಡಿದರು. ಮಹಾಭಲೇಶ್ ತಡಗಳಲೆ ಸೇರಿದಂತೆ ತಾಲೂಕಿನ ಅನೇಕ ರೈತರು ಉಪಸ್ಥಿತರಿದ್ದರು.

ಸಿದ್ದಾಪುರ ತಾಲೂಕಿನ ಕೆರೆಬೇಟೆ ವೇಳೆ ಕೆರೆಯಲ್ಲಿ ಮೀನು ಸಿಗಲಿಲ್ಲ ಎಂಬ ಕಾರಣಕ್ಕೆ ಗಲಾಟೆ ನಡೆದಿತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಸೊರಬ ತಾಲೂಕು ಸೇರಿದಂತೆ ನೆರೆಯ ತಾಲೂಕಿನ ಅಮಾಯಕ ರೈತರನ್ನು ರಾತ್ರೋ ರಾತ್ರಿ ಬಂಧಿಸಲಾಗಿತ್ತು. ಇದನ್ನು ಗೃಹಸಚಿವರ ಗಮನಕ್ಕೆ ಹುಲ್ತಿಕೊಪ್ಪ ಶ್ರೀಧರ್ ನೇತೃತ್ವದಲ್ಲಿ ತರಲಾಗಿತ್ತು. ಅಂದು ಗೃಹ ಸಚಿವರು ಅಮಾಯಕ ರೈತರ ಬಂಧನ ನಿಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಹಾಗೂ ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಿದ್ದರು. ಈ ಮೂಲಕ ಸಾವಿರಾರು ರೈತರ ಬಂಧನ ತಪ್ಪಿಸಿ, ಹಿತ ಕಾಯ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next