ಬೆಂಗಳೂರು: ರಮೇಶ ಜಾರಕಿಹೊಳಿಯವರು ಸಿಡಿ ಹಿಂದೆ ಷಡ್ಯಂತ್ರವಿದೆ ಎಂದು ಪತ್ರ ಬರೆದಿದ್ದರು. ಹೀಗಾಗಿ ಎಸ್ ಐಟಿ ತನಿಗೆಗೆ ಕೊಟ್ಟಿದ್ದೇವೆ. ಆದರೆ ಇಷ್ಟೇ ದಿನದಲ್ಲೆ ತನಿಖೆ ಮುಗಿಸಿ ಎಂದು ಸಮಯ ನಿಗದಿ ಮಾಡಲಾಗುವುದಿಲ್ಲ. ಪೊಲೀಸರಿಗೆ ಪೂರ್ಣ ಸ್ವತಂತ್ರ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿ ಎಂದು ಶೀಘ್ರವಾಗಿ ವರದಿ ಕೊಡಿ ಎಂದು ಹೇಳಿದ್ದೇವೆ. ಎಸ್ ಐ ಟಿಯವರು ಸಂಪೂರ್ಣ ತನಿಖೆ ನಡೆಸುತ್ತಾರೆ. ಕಬ್ಬನ್ ಪಾರ್ಕ್ ನಲ್ಲಿ ದೂರು ನೀಡಿದ್ದು, ವಾಪಸ್ ಪಡೆದಿದ್ದು ಎಲ್ಲವನ್ನೂ ಎಸ್ ಐಟಿ ನೋಡುತ್ತದೆ. ಪತ್ರದ ಮೇಲೆ ಪ್ರಾಥಮಿಕ ತನಿಖೆ ನಡೆಯುತ್ತದೆ, ತನಿಖೆಯಲ್ಲಿನ ಬೆಳವಣಿಗೆ ನೋಡಿ ಅವಶ್ಯಕತೆಯಿದ್ದರೆ ಎಫ್ ಐಆರ್ ದಾಖಲಾಗುತ್ತದೆ ಎಂದರು.
ಇದನ್ನೂ ಓದಿ:ಒಳಉಡುಪು, ಸ್ಯಾನಿಟರಿ ಪ್ಯಾಡ್ ಗಳಲ್ಲಿ ಕೋಟಿ ರೂ ಮೌಲ್ಯದ ಅಕ್ರಮ ಚಿನ್ನಸಾಗಾಟ: ಮಹಿಳೆ ವಶಕ್ಕೆ
ಇದು ನಕಲಿ ಸಿಡಿ ಆದ ಮೇಲೆ ತನಿಖೆ ಏಕೆ ಎಂಬ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ನಕಲಿ ಸಿಡಿ ಮಾಡಿದವರು ಯಾರು, ಅದರ ಹಿನ್ನೆಲೆ ಯಾರು, ಎಲ್ಲೆಲ್ಲಿ ಆಗಿದೆ ಎಂದೆಲ್ಲಾ ತನಿಖೆ ಆಗಬೇಕಲ್ಲವೇ ಎಂದರು.
ಶರ್ಟ್, ಪ್ಯಾಂಟ್ ಬಿಚ್ಚೋಕೆ ಕಾಂಗ್ರೆಸ್ ನವರು ಕಾರಣಾನಾ ಎಂಬ ಡಿಕೆಶಿ ಹೇಳಿಕೆಗೆ ಉತ್ತರಿಸಿದ ಅವರು, ಅದೆಲ್ಲಾ ತನಿಖೆಯಲ್ಲಿ ಗೊತ್ತಾಗುತ್ತದೆ, ಎಲ್ಲಾ ಆಯಾಮ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿದ ಎಂಟರ ಹರೆಯದ ಬಾಲಕ ದಾರುಣ ಬಲಿ!