ಸುಬ್ರಹ್ಮಣ್ಯ: ಪ್ರತ್ಯೇಕ ರಾಜ್ಯದ ಹೇಳಿಕೆ ನೀಡಿರುವವರು ತಮ್ಮ ಹೇಳಿಕೆಯನ್ನು ಪುನರ್ ಪರಿಶೀಲನೆ ಮಾಡಿಕೊಳ್ಳಲಿ ಎಂದು ಗೃಹ ಸಚಿವ ಆರಗ ಜ್ಣಾನೇಂದ್ರ ಹೇಳಿದರು.
ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದರು.
ಪ್ರತ್ಯೇಕ ರಾಜ್ಯ ರಚನೆ ಹೇಳಿಕೆ ತಪ್ಪು. ಯಾವ ಹಿನ್ನಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಉಮೇಶ್ ಕತ್ತಿಯಾಗಲಿ ಯಾರೆಲ್ಲ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಇದ್ದಾರೋ, ಅವರೆಲ್ಲ ಆ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಗೆ ಅನುದಾನ ಬೊಮ್ಮಾಯಿ ಸರಕಾರದಿಂದಲೂ ತೆಗೆದುಕೊಂಡಿದ್ದಾರೆ. ಹೇಳಿಕೆ ನೀಡಿರುವ ಉಮೇಶ್ ಕತ್ತಿ ಅವರು ತಮ್ಮ ಹೇಳಿಕೆಯನ್ನು ಪುನರ್ ಪರಿಶೀಲನೆ ಮಾಡಬೇಕಾಗಿದೆ ಎಂದರು.
ಪಠ್ಯಪುಸ್ತಕದಲ್ಲಿ ಯಾವುದೇ ತೊಂದರೆಯಾಗಿಲ್ಲ, ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸುವ ಕೆಲಸಗಳಾಗಿದೆ ಎಂದರು.
Related Articles
ಕುಕ್ಕೆಗೆ ನಿನ್ನೆ ರಾತ್ರಿ ಆಗಮಿಸಿದ ಗೃಹ ಸಚಿವರು ಇಂದು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಕುಕ್ಕೆ ದೇವಸ್ತಾನದ ವತಿಯಿಂದ ಸಚಿವರನ್ನು ಗೌರವಿಸಲಾಯಿತು.