ಬೆಂಗಳೂರು: ಪಾದಯಾತ್ರೆ ತಡೆಯುವಲ್ಲಿ ಯಾವುದೇ ಷಡ್ಯಂತ್ರವಿಲ್ಲ. ಅವರ ವೈಪಲ್ಯಕ್ಕೆ ಅವರು ಏನು ಬೇಕಾದ್ರೂ ಮಾತನಾಡಬಹುದು. ಅವರು ಪಾದಯಾತ್ರೆ ಮಾಡಿದ್ದೇ ತಪ್ಪು. ರಾಜಕೀಯದ ಲಾಭ ಪಡೆಯಲು ಪಾದಯಾತ್ರೆ ಮಾಡಲು ಹೊರಟರೂ, ಆದರೆ ಅವರಿಗೆ ರಾಜಕೀಯ ಲಾಭಕ್ಕಿಂತ ನಷ್ಟ ಆಯ್ತು. ಬೇರೆ ಏನೂ ಆಗಲಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ನಾಡಿನಲ್ಲಿ ಯಾರದ್ದು ವಿರೋಧವಿದೆ ಹೇಳಿ? ಯಾವ ಪಕ್ಷದ ವಿರೋಧ ಇದೆ? ಇವರು ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಾರೆ. ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಾಗದೆ ಈಗ ಪಾದಯಾತ್ರೆ ಮಾಡಿ ಅದರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜನಕ್ಕೆ ಮೇಕೆದಾಟು ಯೋಜನೆಯ ಲಾಭ ಕೊಡಿಸಬೇಕು ಅದು ಬಿಟ್ಟು ಅದರ ಹೆಸರಿನಲ್ಲಿ ತಮ್ಮ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ, ಇದು ಖಂಡಿತ ನಾಚಿಕೆಗೇಡು ಎಂದರು.
ಇದನ್ನೂ ಓದಿ:ಗೋವಿನ ಸೆಗಣಿಯಿಂದ ಕಟ್ಟಡ ಪೇಂಟ್ ತಯಾರಿ; ಗೋ ಆಧಾರಿತ ಬಣ್ಣದಲ್ಲೇನೇನಿದೆ?
ಹಿಂದಿನ ಸಾರಿ ಇವರು ಪಾದಯಾತ್ರೆ ಮಾಡಿದ್ದರು, ಕೃಷ್ಣೆ ಕಡೆಗೆ ಮಕರ ಸಂಕ್ರಾಂತಿ ದಿನ ಕೂಡಲಸಂಗಮಕ್ಕೆ ಹೋಗಿ. ಅದರ ನೀರನ್ನು ಹಿಡಿದು ವರ್ಷಕ್ಕೆ 10 ಸಾವಿರ ಕೋಟಿ ಕೊಡುತ್ತೇನೆಂದು ಶಪಥ ಮಾಡಿದರು. ಆದರೆ ಅದೇನಾಯ್ತು, ಇಡೀ 5 ವರ್ಷ 7500 ಸಾವಿರ ಕೋಟಿ ಖರ್ಚು ಮಾಡಿದರು. ವರ್ಷಕ್ಕೆ ಹತ್ತು ಸಾವಿರ ಕೋಟಿ ಕೊಡಲಿಲ್ಲ. ಹಾಗೇ ನೀರಾವರಿ ಯೋಜನೆ ಬಗ್ಗೆ ಬದ್ಧತೆ ಕಾಂಗ್ರೆಸ್ ಗೆ ಇಲ್ಲ. ಈ ಯೋಜನೆಯನ್ನ ಜಾರಿಗೆ ತರುತ್ತೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.