Advertisement

ಅಕ್ರಮ ವಲಸಿಗರಿಗೆ ದಾಖಲೆ ಕೊಡಿಸುವ ಜಾಲವೇ ಇದೆ: ಗೃಹ ಸಚಿವ ಆರಗ ಜ್ಞಾನೇಂದ್ರ

02:20 PM Nov 26, 2021 | Team Udayavani |

ಬೆಂಗಳೂರು: ಸಿಸಿಬಿ ಪೊಲೀಸರು ಇವತ್ತು ಐದು ಜನ ಬಾಂಗ್ಲಾ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ವಲಸಿಗರ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಿದೆ. ಅಕ್ರಮ ವಲಸಿಗರ ಪಟ್ಟಿ ಮಾಡಲು ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲಾಗಿದೆ. ಅವರ ಪಟ್ಟಿ ಮಾಡಿ ಅವರನ್ನು ಡಿಟೆಂಷನ್ ಸೆಂಟರ್ ತಂದು ಹಾಕಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯಕಾರಿ. ಅವರು ಹೇಗೆ ಬಂದಿದ್ದಾರೆ, ಯಾರು ಕಳೆದುಕೊಂಡು ಬಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅಕ್ರಮ ವಲಸಿಗರು ಕಟ್ಟಡ ಕೆಲಸ ,‌ಕಾಫಿ ಎಸ್ಟೇಟ್ ಕೆಲಸಕ್ಕೆ  ಬಂದಿದ್ದಾರೆ. ಅವರನ್ನು ಯಾರು ಕರೆದುಕೊಂಡು ಬರುತ್ತಾರೆ ಎನ್ನುವುದನ್ನು ಮೂಲಕ್ಕೆ ಕೈಹಾಕಿ ತನಿಖೆ ನಡೆಸುತ್ತೇವೆ. ಅವರನ್ನು ವಶಕ್ಕೆ ಪಡೆದು ಬಾಯಿ ಬಿಡಿಸುವ ಕೆಲಸ ಆಗಲಿದೆ ಎಂದರು.

ಇದನ್ನೂ ಓದಿ:ಟೆಂಡರ್ ಗಳಲ್ಲಿ ಪರ್ಸೆಂಟೇಜ್ ಜಾಸ್ತಿಯಾಗಿದ್ದು ಕಾಂಗ್ರೆಸ್ ಕಾಲದಲ್ಲಿ: ಸಿಎಂ

ಅಸ್ಸಾಂ ಭಾಗದಲ್ಲಿ ಅಕ್ರಮ ವಲಸಿಗರಿಗೆ ದಾಖಲೆ ಕೊಡಿಸುವ ಜಾಲವೇ ಇದೆ. ಕೇಂದ್ರಕ್ಕೆ ಹಾಗೂ ಆಯಾ ರಾಜ್ಯಕ್ಕೆ ಈ ಬಗ್ಗೆ ತಿಳಿಸಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next