Advertisement

ಅಡಿಕೆ‌ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಬಾರದು : ಗೃಹ ಸಚಿವ ಆರಗ ಜ್ಞಾನೇಂದ್ರ

12:39 PM Mar 21, 2022 | Team Udayavani |

ಬೆಂಗಳೂರು :ಯಾರೂ ಅಡಿಕೆ‌ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಬಾರದು, ಇದರಿಂದ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಡಿಕೆ‌ ಬ್ಯಾನ್ ಮಾಡುವ ವದಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ದೆಹಲಿಗೆ ರಾಜ್ಯದಿಂದ ನಿಯೋಗ ತೆರಳಿತ್ತು. ಕೇಂದ್ರ‌ ಸಚಿವರನ್ನ ಭೇಟಿಯಾಗಿ ಮಾತುಕತೆ‌ ನಡೆಸಲಾಗಿತ್ತು. ಸರ್ಕಾರದಿಂದ ವಿಶೇಷವಾಗಿ ಹೋರಾಟ ಮಾಡಿ‌ ರೈತರ ಹಿತ ಕಾಯುತ್ತೇವೆ ಎಂದರು.

ವದಂತಿಗಳಿಂದ ಅಡಿಕೆ‌ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಾಗಲಿದೆ, ಇದರಿಂದ ಅಡಿಕೆ‌ ಬೆಳೆಗಾರರು ಸಂಕಷ್ಟಕ್ಕೆ‌ ಸಿಲುಕಲಿದ್ದಾರೆ. ಬೆಳೆಗಾರರ ಹಿತ ಕಾಯಲು ಸರ್ಕಾರ‌ ಬದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next