Advertisement

ನಾಲ್ವರ ಹಂತಕ ಪ್ರವೀಣ್‌ ಕುಮಾರ್ ಬಿಡುಗಡೆ ವಿಚಾರ: ಅಧಿಕಾರಿಗಳ ಸಭೆ ಬಳಿಕ ನಿರ್ಧಾರ; ಗೃಹ ಸಚಿವ

12:26 PM Aug 10, 2022 | Team Udayavani |

ಬೆಂಗಳೂರು:  ಬಿಜೆಪಿಯ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಅಧಿಕಾರ ಕಾಂಗ್ರೆಸ್ ಗೆ ಇದ್ದಿದ್ದರೇ ಅವರು ಮಾಡುತ್ತಾರೆ. ಬೊಮ್ಮಾಯಿ ಆಡಳಿತ ನಡೆಸುವ ರೀತಿ ನೋಡಿ ಅವರಿಗೆ ತಲೆಕೆಟ್ಟು ಹೋಗಿದೆ. ಅವರ ಅಭಿವೃದ್ಧಿ ಕೆಲಸ ನೋಡಿ ಕಾಂಗ್ರೆಸಿಗರನ್ನ ಕಂಗೆಡಿಸಿದೆ. ಸುಳ್ಳು ಹೇಳಿ ಇಮೇಜ್ ನ್ನು ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜನ ಅವರನ್ನು ನೋಡಿ ನಗುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಬೆಂಗಳೂರಿನಲ್ಲಿ ಮಾತಾನಾಡಿದ ಅವರು, ಮಂಗಳೂರಿನ ವಾಮಂಜೂರಿನಲ್ಲಿ 1994 ರಲ್ಲಿ ತನ್ನ ನಾಲ್ವರು ಸಂಬಂಧಿಕರನ್ನು ಹತ್ಯೆಗೈದ ಪ್ರವೀಣ್‌ ಕುಮಾರ್‌  ಬಿಡುಗಡೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.

ಪ್ರವೀಣ್ ಗೆ 14 ವರ್ಷದ ಹಿಂದೆ ಶಿಕ್ಷೆ ಆಗಿದೆ. ಮೊದಲು ಗಲ್ಲು ಶಿಕ್ಷೆ ಆಗಿತ್ತು.  ಬಳಿಕ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷಗೆ ಬದಲಾವಣೆ ಮಾಡಿತ್ತು. ರಾಷ್ಟ್ರಪತಿಗಳು ಅದನ್ನು ಎತ್ತಿ ಹಿಡಿದಿದ್ದರು. ಅವರ ಹಿನ್ನೆಲೆ ಈಗ ನಮಗೆ ಗೊತ್ತಾಗುತ್ತಿದೆ ಎಂದರು.

ಇದನ್ನೂ ಓದಿ: ನನ್ನಲ್ಲೂ ದಾಖಲೆಗಳಿವೆ… ನಿಮ್ಮ‌ಕಂಪನಿಗಳ ಕತೆ ಬಿಚ್ಚಿಡಬೇಕೇ? ಅಶ್ವತ್ಥನಾರಾಯಣ ವಿರುದ್ಧ HDK

ಅವರ ಮನೆಯವರು ಬಂದಿದ್ದಾರೆ. ಯಾವುದೇ ಕಾರಣಕ್ಕೂ ಅವರ ಬಿಡಬೇಡಿ ಅಂತಿದ್ದಾರೆ. ಹೊರಗೆ ಬಂದರೆ ಮತ್ತೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಅಂತೆ. ಬೆಳಗಾವಿ ಜೈಲಿನಿಂದ ಕೋರ್ಟ್ ಗೆ ಬರುವಾಗ ಈತ ಹಿಂದೆ ತಪ್ಪಿಸಿಕೊಂಡು ಹೋಗಿದ್ದ. ಗೋವಾದಲ್ಲಿ ಮದುವೆ, ಮಗು ಇತ್ತು ಅಂತ ಕುಟುಂಬವರು ಹೇಳಿದ್ದಾರೆ ಎಂದರು.

Advertisement

ಹಳೆಯ ಸರ್ಕಾರದ ಆದೇಶದಲ್ಲಿ 14 ವರ್ಷ ಈತನಿಗೆ ಸನ್ನಡತೆ ಇದೆ.  ಹೀಗಾಗಿ ಅವನಿಗೆ ಬಿಡುಗಡೆ ಮಾಡುವ ಪ್ರಸ್ತಾಪ ಬಂದಿದೆ. ಇದೊಂದು ವಿಶೇಷ ಕೇಸ್. ಇಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಎರಡು ಕುಟುಂಬಕ್ಕೆ ಭದ್ರತೆ ಕೊಡುತ್ತೇವೆ. ಕಳೆದ ಕ್ಯಾಬಿನೆಟ್ ನಲ್ಲಿ ಕೊಲೆ ಮಾಡಿದವರಿಗೆ, ರೇಪ್ ಮಾಡದವರಿಗೆ ಬಿಡಬಾರದು ಅಂತ ನಿಯಮ ಮಾಡಿದ್ದೇವೆ. ಇನ್ಮುಂದೆ ಇಂತಹ ಕೇಸ್ ನಲ್ಲಿ ಹೊರಗೆ ಬರಲು ಬಿಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next