Advertisement

ಸಮುದಾಯ ಒಡೆಯುವ ಬದಲು ಸಾಮರಸ್ಯ ಬೆಳೆಸುವ ಕೆಲಸ ಮಾಡಿ : ಗೃಹ ಸಚಿವ ಆರಗ ಜ್ಞಾನೇಂದ್ರ

01:22 PM Aug 23, 2022 | Team Udayavani |

ಕೋಲಾರ : ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಕೊಡಗು ಜಿಲ್ಲಾಡಾಳಿತ ನಿಷೇಧಾಜ್ಞೆ ತೀರ್ಮಾನ ತೆಗೆದುಕೊಂಡಿದ್ದು ಎಲ್ಲರೂ ಈ ವಿಷಯದಲ್ಲಿ ಸಹಕರಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Advertisement

ಕೆಜಿಎಫ್ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಜಿಲ್ಲೆಯಲ್ಲಿ, ನಡೆಸಲು ಅವಕಾಶ ನೀಡುವುದಿಲ್ಲ, ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಮುಂಬರುವ ದಿನಗಳಲ್ಲಿ ಬರುವ, ಗಣೇಶೋತ್ಸವ ಕಾರ್ಯಕ್ರಮವನ್ನು, ಶಾಂತಿಯುತವಾಗಿ ಆಚರಿಸಲು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೈದಾನದಲ್ಲಿ, ಗಣೇಶೋತ್ಸವ ಆಚರಣೆ ಸಂಬಂಧ ಅವಕಾಶ ಮಾಡಿಕೊಡುವ ಬಗ್ಗೆ, ಸ್ಥಳೀಯ ಆಡಳಿತ ನಿರ್ಧಾರ ತೆಗೆದುಕೊಳ್ಳುತ್ತದೆ, ಎಂದು ಸಚಿವರು ತಿಳಿಸಿದರು.

ನಂತರ ಸಚಿವರು, ಕೆಜಿಎಫ್ ನಗರದಲ್ಲಿ, ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಿಂದ ನೂತನವಾಗಿ ನಿರ್ಮಿಸಲಾಗಿರುವ ಡಿಎಆರ್ ಆಡಳಿತ ಕಚೇರಿ, ಶಸ್ತ್ರಾಗಾರ ಹಾಗೂ ಶ್ವಾನದಳ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದರು.

Advertisement

ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕೆಜಿಎಫ್ ನಗರದಲ್ಲಿ ಇರುವ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಮುಚ್ಚುವುದಿಲ್ಲ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಕಾಂಗ್ರೆಸ್ ಮಡಿಕೇರಿ ಚಲೋ ಪಾದಯಾತ್ರೆ ರದ್ದು: ಸಿದ್ದರಾಮಯ್ಯ ಘೋಷಣೆ

ಇಡೀ ದಕ್ಷಿಣ ಭಾರತದಲ್ಲಿ, ಪ್ರಪ್ರಥಮ ಬಾರಿಗೆ, ಕರ್ನಾಟಕದಲ್ಲಿ ವಿಧಿ ವಿಜ್ಞಾನ ಶಾಸ್ತ್ರ ವಿಶ್ವ ವಿದ್ಯಾಲಯದ ಪೀಠವೊಂದನ್ನು ಸ್ಥಾಪಿಸಲು, ಕೇಂದ್ರ ಸರಕಾರದ ಒಪ್ಪಿಗೆ ಪಡೆಯಲಾಗುತ್ತಿದೆ, ಎಂದು ಸಚಿವರು, ಹೇಳಿದರು.

ಗೌರವಾನ್ವಿತ ಸ್ವಾತಂತ್ರ್ಯ ವೀರ ಯೋಧ ಸಾವರ್ಕರ್ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಅವಹೇಳನ ಮಾಡುವವರ ಬಗ್ಗೆ ಎಚ್ಚರದಿಂದಿರಬೇಕು, ಎಂದು ಸಚಿವರು ಹೇಳಿದರು.

ಒಂದೊಂದು ಸಮುದಾಯವನ್ನು ಒಡೆಯುವ ಮಾತನ್ನು ಯಾವ ರಾಜಕೀಯ ನಾಯಕರೂ ಮಾತನಾಡದೆ, ಎಲ್ಲರನ್ನೂ ಜೋಡಿಸುವ ನುಡಿಗಳು ಕೇಳುವಂತಾಗಬೇಕು. ಒಂದು ಏರಿಯಾದಲ್ಲಿ ಯಾಕೆ ಸಾವರ್ಕರ್ ಭಾವಚಿತ್ರ ಹಾಕಬೇಕಿತ್ತು, ಎಂಬಂಥ ಮಾತುಗಳಿಂದ, ಸಮುದಾಯಗಳ ನಡುವೆ ಸಾಮರಸ್ಯ ಸಾಧಿಸಲು ಆಗುವುದಿಲ್ಲ ಎಂದು ಸಚಿವರು ತಿಳಿಸಿದರು.

ಈ ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಹಾಗೂ ಶಾಂತಿಯುತವಾಗಿ ನೆಲಸಲು ಅನುಕೂಲವಾಗುವಂತಹ ವಾತಾವರಣ ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next