ಶಿವಮೊಗ್ಗ : ವ್ಯಕ್ತಿ ಆತ್ಮಹತ್ಯೆಗೆ ಯಾರೇ ಕಾರಣವಾಗಿದ್ದರೂ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಗೃಹ ಸಚಿವರು ಅರವಿಂದ ಲಿಂಬಾವಳಿ ಮತ್ತು ಇತರೇ ಆರು ಜನರ ಹೆಸರು ಬರೆದು ವ್ಯಕ್ತಿ ತನ್ನನ್ನು ತಾನು ಶೂಟ್ ಮಾಡಿಕೊಂಡಿದ್ದಾನೆ. ಈ ಬಗ್ಗೆ ಈಗಾಗಲೇ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ನವರು ಅಭಿಯಾನ ಮಾಡ್ತಾರೆ ಎಂದು ನಮ್ ಪೋಲಿಸರು ಯಾರನ್ನೂ ಉದ್ದೇಶ ಪೂರ್ವಕವಾಗಿ ಅರೆಸ್ಟ್ ಮಾಡುವುದಿಲ್ಲ, ಕಾನೂನು, ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿ ತಪ್ಪಿತಸ್ಥರಿಗೆ ಕ್ರಮವಾಗುತ್ತೆ, ಕಾಯ್ದೆ ಪ್ರಕಾರ ಅಪರಾಧಿಯಾದರೆ ಯಾರೇ ಆಗಲಿ ಅವರನ್ನು ಅರೆಸ್ಟ್ ಮಾಡುವ ಹಕ್ಕು ಪೊಲೀಸರಿಗಿದೆ ಎಂದು ಹೇಳಿದರು.
ಈಗಾಗಲೇ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಈ ಹಂತದಲ್ಲಿ ನಾನು ಮಾತನಾಡುವುದು ಸರಿಯಲ್ಲ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡುತ್ತಾರೆ ಎಂದರು.
ಅರವಿಂದ ಲಿಂಬಾವಳಿ ಬಗ್ಗೆ ಎಫ್ ಐ ಆರ್ ನಲ್ಲಿ ಏನೇ ಇರಲಿ, ಅವರು ಶಾಸಕರಾಗಿರಲಿ, ಮಂತ್ರಿಯಾಗಲಿ, ಸಾಮಾನ್ಯ ವ್ಯಕ್ತಿಯಾಗಿರಲಿ. ಯಾರೋ ಬರೆದಿಟ್ಟಿದ್ದಾರೆ ಅಂತಾ ಏಕಾಏಕಿ ಅರೆಸ್ಟ್ ಮಾಡೋಕೆ ಆಗಲ್ಲ.. ಅದರ ಬಗ್ಗೆ ನಿಖರವಾಗಿ ತನಿಖೆ ನಡೆಯಬೇಕು ಆಮೇಲೆ ತಪ್ಪಿತಸ್ಥರಿಗೆ ಶಿಕ್ಷೆ ಎಂದರು.
ಔರಾಧ್ಕರ್ ವರದಿ – ಹಿರಿಯ ಅಧಿಕಾರಿಗಳ ಸಂಬಳದಲ್ಲಿ ವ್ಯತ್ಯಾಸ ವಿಚಾರ:
Related Articles
ಔರಾದ್ಕರ್ ವರದಿ ಪ್ರಕಾರ ವ್ಯತ್ಯಾಸ ಇರೋದು ಸಹಜ. ಔರಾದ್ಕರ್ ವರದಿಯಿಂದ ಶೇ.೮೦ ಪೊಲೀಸ್ ಸಿಬ್ಬಂದಿಗೆ ಲಾಭ ಸಿಕ್ಕಿದೆ. ಅನ್ಯಾಯ ಆದವರಿಗೆ ಭತ್ಯೆಯಲ್ಲಿ ಸರಿಪಡಿಸುವ ಕೆಲಸ ಆಗ್ತಿದೆ ಎಂದು ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ಜೈಲು ಮಂಜೂರು :
ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ಜೈಲು ಮಂಜೂರಾಗಿದ್ದು, ಶಿವಮೊಗ್ಗಕ್ಕೆ ನೀಡಲಾಗಿದೆ, ಶಿವಮೊಗ್ಗದ ಸೋಗಾನೆ ಜೈಲಿನ ಆವರಣದೊಳಗೆ ಅದು ನಿರ್ಮಾಣವಾಗಲಿದೆ, ಹೈಟೆಕ್ ಆರೋಪಿಗಳಿಗಾಗಿ ಈ ವಿಶೇಷ ಜೈಲು ಇರಲಿದೆ ಎಂದು ಹೇಳಿದರು.
ಇದನ್ನೂ ಓದಿ: ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ದುರ್ಬಳಕೆ; ನೀರಿನ ಹಣ ನುಂಗಿದ 13 ನೌಕರರ ಅಮಾನತು