Advertisement

ದೇಶ ರಕ್ಷಣೆಯಲ್ಲಿ ನಿರತರಾಗಿರುವ ವೀರ ಯೋಧರ ಹಾಗೂ ಅವಲಂಬಿತರ ಪುನರ್ವಸತಿಗೆ ಸರಕಾರ ಬದ್ಧ: ಆರಗ ಜ್ಞಾನೇಂದ್ರ

12:55 PM Dec 07, 2022 | Team Udayavani |

ಬೆಂಗಳೂರು: ಗಡಿಗಳಲ್ಲಿ, ಗಾಳಿ, ಮಳೆ ಚಳಿ ಎನ್ನದೆ, ನಮ್ಮ ದೇಶದ ಸಾರ್ವಭೌಮತೆ ಹಾಗೂ ನಾಗರಿಕರ ಆಸ್ತಿ ಪಾಸ್ತಿ, ಪ್ರಾಣ ರಕ್ಷಣೆಗೆ, ತಮ್ಮ ಜೀವವನ್ನೇ ತ್ಯಾಗ ಮಾಡುವ, ಸೈನಿಕರ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರ ಪುನರ್ವಸತಿ,  ಹಾಗೂ ಅಭಿವೃದ್ದಿಗೆ,  ಶ್ರಮಿಸುವುದು, ಎಲ್ಲಾ ನಾಗರಿಕರ ಕರ್ತವ್ಯವಾಗಿದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಹೇಳಿದರು.

Advertisement

ಸಚಿವರು, ಇಂದು,  ರಾಜ ಭವನ ದಲ್ಲಿ ಆಯೋಜಿಸಲಾಗಿದ್ದ,  ಸಶಸ್ತ್ರ ಪಡೆಗಳ ದಿನಾಚರಣೆ ಸಮಾರಂಭದಲ್ಲಿ, ಮಾಜಿ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರನ್ನು ಉದೇಶಿಸಿ, ಮಾತನಾಡಿದರು.

ಸಶಸ್ತ್ರ ಪಡೆಗಳ ಯೋಧರು, ಗಡಿಗಳಲ್ಲಿ ಅನನ್ಯ ಸೇವೆಯನ್ನು ಮಾಡುತ್ತಾ, ಅಗತ್ಯ ಸಂದರ್ಭದಲ್ಲಿ, ದೇಶದ ಆಂತರಿಕ ಭದ್ರತೆ ಹಾಗೂ ನೈಸರ್ಗಿಕ ಪ್ರಕೋಪ ಸಂದರ್ಭ ಗಳಲ್ಲಿಯೂ, ನಾಗರಿಕರ ರಕ್ಷಣೆಗೆ ಧಾವಿಸುತ್ತಾರೆ.

ಕರ್ನಾಟಕ ಸರಕಾರವು, ಯೋಧರ ಹಾಗೂ ಅವರ ಕುಟುಂಬ ಸದಸ್ಯರ ನೆರವಿಗೆ, ಯಾವಾಗಲೂ ಸಿದ್ಧವಿದೆ, ಎಂದೂ ಭರವಸೆ ನೀಡಿದರು.

ಇದೇ ಸಂಧರ್ಬದಲ್ಲಿ, ಸಚಿವರು ಹಾಗೂ ಮಾನ್ಯ ರಾಜ್ಯಪಾಲ ರಾದ ಶ್ರೀ ತಾವಾರ್ ಚಂದ್ ಗೆಹ್ಲೋಟ್ ಅವರು, ದೇಶದ ರಕ್ಷಣಾ ಕಾರ್ಯದಲ್ಲಿ, ವೀರ ಮರಣ ಹೊಂದಿದ ಕುಟುಂಬ ಸದಸ್ಯರಿಗೆ, ಪರಿಹಾರದ ಚೆಕ್ಕನ್ನು ವಿತರಿಸಿದರು.

Advertisement

ಇದೇ ಸಂಧರ್ಬದಲ್ಲಿ, ಆರ್ಮ್ಸ್ ಫ್ಲ್ಯಾಗ್ ಫಂಡ್ ಗಾಗಿ, ತಮ್ಮ ಕಾಣಿಕೆ ನೀಡಿದರು.

ರಾಜ್ಯಪಾಲ ಶ್ರೀ ತಾವರ್ ಚಂದ್ ಗೆಹ್ಲೋಟ್ ಹಾಗೂ ಸಚಿವರು, ಫ್ಲ್ಯಾಗ್ ಡೇ ಫಂಡ್ ಗಾಗಿ ಅತ್ಯಂತ ಹೆಚ್ಚು ಕಾಣಿಕೆ ಸಂಗ್ರಹಿಸಿದ ವರಿಗೆ, ಪ್ರೋತಹಕ ಪಾರಿತೋಷಕ ವನ್ನು ವಿತರಿಸಿದರು.

ಕಳೆದ ವರ್ಷದಲ್ಲಿ ಸಶಸ್ತ್ರ ಸೇನಪಡೆಗಳ ದ್ವಜ ನಿಧಿಗೆ ಒಟ್ಟು ದಾಖಲೆಯ ಒಂದು ಕೋಟಿ ಎಂಬತ್ತೇಳು ಲಕ್ಷರೂಪಯಿಗಳ, ಸಂಗ್ರಹವಾಗಿದೆ, ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next