Advertisement

ಖೇಲೋ ಇಂಡಿಯಾಕ್ಕೆ ಗೃಹ ಸಚಿವ ಅಮಿತ್‌ ಶಾ ಚಾಲನೆ

11:23 PM Jun 03, 2022 | Team Udayavani |

ಪಂಚಕುಲ: ಶನಿವಾರ ಪಂಚಕುಲದಲ್ಲಿ ಆರಂಭವಾಗಲಿರುವ “ಖೇಲೋ ಇಂಡಿಯಾ ಯುತ್‌ ಗೇಮ್ಸ್‌’ ಪಂದ್ಯಾವಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉದ್ಘಾಟಿಸಲಿದ್ದಾರೆ.

Advertisement

ಒಂದು ದಿನದ ಮೊದಲಷ್ಟೇ ಈ ಪ್ರಕಟನೆ ಹೊರಬಿದ್ದಿದೆ. ಜೂನ್‌ 13ರ ತನಕ ಈ ಪಂದ್ಯಾವಳಿ ನಡೆಯಲಿದೆ.

ಪಂದ್ಯಾವಳಿಯಲ್ಲಿ ಸುಮಾರು 8,500ರಷ್ಟು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಹರ್ಯಾಣ ಸರಕಾರ ತಿಳಿಸಿದೆ. ಒಟ್ಟು 1,866 ಪದಕಗಳಿಗಾಗಿ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ.

545 ಚಿನ್ನ, 545 ಬೆಳ್ಳಿ ಹಾಗೂ 776 ಕಂಚಿನ ಪದಕಗಳನ್ನು ಇದು ಒಳಗೊಂಡಿದೆ. 5 ತಾಣಗಳಲ್ಲಿ 25 ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಈ ತಾಣಗಳೆಂದರೆ ಪಂಚಕುಲ, ಅಂಬಾಲ, ಶಾಹಾಬಾದ್‌, ಚಂಡೀಗಢ ಮತ್ತು ಹೊಸದಿಲ್ಲಿ.

ಪಂಚಕುಲದ “ತಾವು ದೇವಿಲಾಲ್‌ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌’ ಈ ಕೂಟದ ಪ್ರಧಾನ ಕ್ರೀಡಾಂಗಣವಾಗಿದೆ. ಇದು 7 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿದೆ.

Advertisement

ಮಲ್ಲಕಂಭ, ಯೋಗಾಸನ: 5 ಸಾಂಪ್ರದಾಯಿಕ ಕ್ರೀಡೆಗಳನ್ನು ಮೊದಲ ಸಲ ಆಯೋಜಿಸುವುದು ಈ ಕೂಟದ ವೈಶಿಷ್ಟé. ಇವುಗಳೆಂದರೆ ಗತ್ಕಾ, ಕಳರಿಪಯಟ್ಟು, ಥಾಂಗ್‌ ತಾ, ಮಲ್ಲಕಂಭ ಮತ್ತು ಯೋಗಾಸನ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next