Advertisement

ಪಶ್ಚಿಮ ಬಂಗಾಳ : ಬಿಜೆಪಿ ಚುನಾವಣಾ ಯಾತ್ರೆಗೆ ಇಂದು ಅಮಿತ್ ಶಾ ಚಾಲನೆ

01:14 PM Mar 15, 2021 | Team Udayavani |

ಗುವಾಹಟಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ (ಮಾರ್ಚ್ 15) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ಅಭಿಯಾನದ ಅಂಗವಾಗಿ ಭಗವಾನ್ ಬಿರ್ಸಾ ಮುಂಡಾ ಸಿಡೋ-ಕನ್ಹು ಸಮ್ಮಾನ್ ಯಾತ್ರೆಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.

Advertisement

ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ನೀಡಿದ ಕೊಡುಗೆಯನ್ನು ತಿಳಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶವೆಂದು ಪಕ್ಷ ಈ ಹಿಂದ ಬಹಿರಂಗಗೊಳಿಸಿತ್ತು.

ಓದಿ : ಕೋವಿಡ್: 24 ಗಂಟೆಯಲ್ಲಿ 26 ಸಾವಿರ ಸೋಂಕಿತರು, ಮಹಾರಾಷ್ಟ್ರದಲ್ಲಿ ಮುಂದುವರಿದ ಆತಂಕ

ಯಾತ್ರೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಜಾರ್ಗ್ರಾಮ್ ನಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಚಾಲನೆಗೊಳ್ಳಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಏತನ್ಮಧ್ಯೆ, ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆಯ ಕಾವು ಏರಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ನಿರಂತರವಾಗಿ ಚುನಾವಣಾ ಮತ ಪ್ರಚಾರವನ್ನು ನಡೆಸುತ್ತಿವೆ.

Advertisement

ಇನ್ನು, ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಎಂಟು ಹಂತಗಳಲ್ಲಿ ನಡೆಯಲಿದೆ. 30 ಕ್ಷೇತ್ರಗಳಿಗೆ 1 ನೇ ಹಂತದ ಮತದಾನ ಮಾರ್ಚ್ 27 ರಂದು ನಡೆಯಲಿದ್ದು, 30 ಕ್ಷೇತ್ರಗಳಿಗೆ 2 ನೇ ಹಂತದ ಮತದಾನ ಏಪ್ರಿಲ್ 1 ರಂದು ನಡೆಯಲಿದೆ.

31 ಸ್ಥಾನಗಳಿಗೆ 3 ನೇ ಹಂತದ ಮತದಾನ ಏಪ್ರಿಲ್ 6 ರಂದು, 44 ಕ್ಷೇತ್ರಗಳಿಗೆ 4 ನೇ ಹಂತದ ಮತದಾನ, ಏಪ್ರಿಲ್ 17 ರಂದು 45 ಕ್ಷೇತ್ರಗಳಿಗೆ 5 ನೇ ಹಂತದ ಚುನಾವಣೆ, ಏಪ್ರಿಲ್ 22 ರಂದು 43 ಕ್ಷೇತ್ರಗಳಿಗೆ 6 ನೇ ಹಂತದ ಮತದಾನ, 7 ನೇ ಹಂತಕ್ಕೆ 36 ಕ್ಷೇತ್ರಗಳ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ಮತ್ತು ಏಪ್ರಿಲ್ 29 ರಂದು 35 ಕ್ಷೇತ್ರಗಳಿಗೆ 8 ನೇ ಹಂತದಲ್ಲಿ ನಡೆಯಲಿದೆ.

ಓದಿ : ಟೋಲ್ ಸಮಸ್ಯೆ: ಪಡುಬಿದ್ರಿ- ಹೆಜಮಾಡಿಯ ಸರ್ವಿಸ್ ಬಸ್ ಗಳ ಅನಿರ್ಧಿಷ್ಟಾವಧಿ ಮುಷ್ಕರ

Advertisement

Udayavani is now on Telegram. Click here to join our channel and stay updated with the latest news.

Next