Advertisement

ಹೋಂ ಮೇಡ್‌ ಟಾಫಿ, ಕೇಕ್‌!

04:25 AM Jun 10, 2020 | Lakshmi GovindaRaj |

ಮಳೆಗಾಲ ಅಂದರೆ ಎರಡು ಹೊಟ್ಟೆ. ಅಂದರೆ ಹಸಿವು, ಬಾಯಿ ಚಪಲ ಜಾಸ್ತಿ ಅಂತರ್ಥ. ಮನೆಯಲ್ಲಿ ಮಕ್ಕಳಿದ್ದರಂತೂ, ಏನು ಅಡುಗೆ ಮಾಡಿದರೂ ಅವರ ಬಾಯಿ ರುಚಿ ತಣಿಯದು. ಈ ಸಂದರ್ಭಕ್ಕೆ, ಮನೆಯಲ್ಲಿಯೇ  ಮಾಡಬಹುದಾದ ಕಡಿಮೆ ಖರ್ಚಿನಲ್ಲಿ ತಯಾರಾಗುವ ತಿನಿಸುಗಳ ವಿವರ ಮತ್ತು ಅದರ ರೆಸಿಪಿ ಇಲ್ಲಿವೆ…

Advertisement

ರವೆ ಕೇಕ್‌
ಬೇಕಾಗುವ ಸಾಮಗ್ರಿ: ರವೆ- ಒಂದೂವರೆ ಕಪ್‌, ಮೈದಾ ಹಿಟ್ಟು  – ಅರ್ಧ ಕಪ್‌, ಹಾಲು- ಮುಕ್ಕಾಲು ಕಪ್‌, ಮೊಸರು- ಕಾಲು ಕಪ್‌, ಸಕ್ಕರೆ- ಮುಕ್ಕಾಲು ಕಪ್‌, ಬೆಣ್ಣೆ- ಅರ್ಧ ಕಪ್‌, ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಅಡುಗೆ  ಸೋಡಾ- 1 ಚಮಚ.

ಮಾಡುವ ವಿಧಾನ: ಮೊಸರಿನಲ್ಲಿ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಆಮೇಲೆ ಅದಕ್ಕೆ, ಹಾಲು, ರವೆ, ಮೈದಾ, ಏಲಕ್ಕಿ ಪುಡಿ, ದ್ರಾಕ್ಷಿ, ಸ್ವಲ್ಪ ಉಪ್ಪು, ತುಪ್ಪ, ಚಿಟಿಕೆ ಸೋಡಾ ಹಾಕಿ ಕಲಸಿ. ಆ ಮಿಶ್ರಣವನ್ನು ಒಂದು ಗಂಟೆ ಕಾಲ ಹಾಗೇ ಬಿಡಿ. ನಂತರ, ಅಗಲವಾದ ಪಾತ್ರೆಗೆ ತುಪ್ಪ ಸವರಿ, ಮಿಶ್ರಣವನ್ನು ಸುರಿದು ಓವನ್‌ ಅಲ್ಲಿಟ್ಟು ಬೇಯಿಸಿ.

ಟಾಫಿ 
ಬೇಕಾಗುವ ಸಾಮಗ್ರಿ: ತೆಂಗಿನ ತುರಿ – 1 ಬಟ್ಟಲು, ಸಕ್ಕರೆ – 1 ಬಟ್ಟಲು, ಹಾಲು – 2 ಬಟ್ಟಲು

ಮಾಡುವ ವಿಧಾನ: ತೆಂಗಿನ ತುರಿಗೆ ನೀರು ಹಾಕದೇ ರುಬ್ಬಿ, ಹಾಲು ತೆಗೆದುಕೊಳ್ಳಿ. ಹಾಲು, ಸಕ್ಕರೆ ಮತ್ತು ಸಾದಾ ಹಾಲನ್ನು ಒಟ್ಟಿಗೆ ಸೇರಿಸಿ ಕುದಿಯಲು ಬಿಡಿ. ನಂತರ ಅದಕ್ಕೆ ಕಾಯಿ ತುರಿ ಬೆರೆಸಿ, ಪಾಕ ತಳ ಬಿಡುವವರೆಗೆ ಚೆನ್ನಾಗಿ ಮಗುಚಿ. ತುಪ್ಪ ಸವರಿದ ತಟ್ಟೆಗೆ ಮಗುಚಿದ ಮಿಶ್ರಣ ತೆಗೆದು, ಸಣ್ಣದಾಗಿ ಕತ್ತರಿಸಿ.

Advertisement

ಗೋಡಂಬಿ ಬಿಸ್ಕತ್‌
ಬೇಕಾಗುವ ಸಾಮಗ್ರಿ: ಮೈದಾ- 1 ಬಟ್ಟಲು, ಸಕ್ಕರೆ ಪುಡಿ- 1 ಬಟ್ಟಲು, ಹಾಲು- ಅರ್ಧ ಬಟ್ಟಲು, ಗೋಡಂಬಿ ಪುಡಿ – 1 ಬಟ್ಟಲು, ತುಪ್ಪ-8 ಚಮಚ, 1 ಚಮಚ ಅಡುಗೆ ಸೋಡಾ

ಮಾಡುವ ವಿಧಾನ: ಗೋಡಂಬಿ ಪುಡಿ, ಮೈದಾ ಹಿಟ್ಟು, ಸಕ್ಕರೆ ಪುಡಿ ಮತ್ತು ಅಡುಗೆ ಸೋಡಾವನ್ನು ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣವು ಬೋಂಡಾ ಹಿಟ್ಟಿನ ಹದಕ್ಕೆ ಬರುವಷ್ಟು ಹಾಲು ಬೆರೆಸಿ ಕಲಸಿ. ಆಮೇಲೆ ತುಪ್ಪ ಸವರಿದ ತಟ್ಟೆಗೆ  ಮಿಶ್ರಣವನ್ನು ಹಾಕಿ,  ಬೇಕಾದ ಆಕಾರಕ್ಕೆ ಗುರುತು ಮಾಡಿ ಓವನ್‌ನಲ್ಲಿಟ್ಟು ಬೇಯಿಸಿ.

Advertisement

Udayavani is now on Telegram. Click here to join our channel and stay updated with the latest news.

Next