Advertisement

ಗೃಹ, ವಾಹನ ಸಾಲ ಇದೀಗ ಭಾರೀ ಅಗ್ಗ; SBI ಬಡ್ಡಿದರ ಶೇ.0.90ರಷ್ಟು ಇಳಿಕೆ

12:11 PM Jan 02, 2017 | |

ನವದೆಹಲಿ: ಹೊಸ ವರ್ಷಾರಂಭದ ದಿನವೇ ಬಡ್ಡಿದರ ಇಳಿಕೆಯ ಸಿಹಿಯನ್ನು ಬ್ಯಾಂಕ್‌ಗಳು ಜನರಿಗೆ ಉಣ
ಬಡಿಸಲು ಆರಂಭಿಸಿವೆ. ಎಸ್‌ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.90ರಷ್ಟು ಭಾರಿ ಪ್ರಮಾಣದಲ್ಲಿ
ಇಳಿಸಿದೆ. ಇದರ ಬೆನ್ನಲ್ಲೇ ಇತರ ಬ್ಯಾಂಕ್‌ಗಳೂ ಬಡ್ಡಿ ದರ ಇಳಿಸಿವೆ.

Advertisement

ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಶೇ.0.65ರಷ್ಟು, ಐಡಿಬಿಐ ಶೇ.0.40ರಷ್ಟು ಬಡ್ಡಿದರ ಇಳಿಸಿವೆ. ಇದರಿಂದಾಗಿ ಗೃಹ, ವಾಹನ, ಇತರೆ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ.

2008ರಲ್ಲಿ ವಿಶ್ವದಾದ್ಯಂತ ಕಂಡುಬಂದಿದ್ದ ಮಹಾ ಆರ್ಥಿಕ ಕುಸಿತದ ವೇಳೆ ದೇಶದಲ್ಲೂ ಬಡ್ಡಿದರ ಇಳಿಕೆ ಯಾಗಿತ್ತು. ಅದರ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಡ್ಡಿ ದರ ಇಳಿಕೆಯಾಗುತ್ತಿರುವುದು ಇದೇ  ಮೊದಲು. ಬಡ್ಡಿದರ ಇಳಿಕೆಯಿಂದಾಗಿ ಎಸ್‌ಬಿಐ ಬಡ್ಡಿಯು ಇನ್ನು ಶೇ.7.75ರಿಂದ 8.65ರ ಮಧ್ಯೆ ಇರಲಿದೆ. ಒಂದು ವರ್ಷದ ಸಾಲದ ಬಡ್ಡಿದರ ಶೇ.8.90ರ ಬದಲು ಶೇ.8 ಆಗಲಿವೆ. 2 ವರ್ಷದ ಸಾಲದ ಬಡ್ಡಿ ಶೇ.8.10 ಹಾಗೂ 3 ವರ್ಷದ ಬಡ್ಡಿ
ಶೇ.8.15 ಆಗಲಿದೆ.

ಯೂನಿಯನ್‌ ಬ್ಯಾಂಕ್‌ ಬಡ್ಡಿ ದರ ಶೇ.8.65ಕ್ಕೆ ಇಳಿಯಲಿದೆ. ಐಡಿಬಿಐ ಬ್ಯಾಂಕ್‌ನ 3 ವರ್ಷದ ಸಾಲದ ಬಡ್ಡಿ ದರ ಶೇ.9.30 ಆಗಲಿದೆ. ಪಿಎನ್‌ಬಿ ತನ್ನ ಒಂದು ವರ್ಷದ ಸಾಲದ ಮೇಲಿನ ಬಡ್ಡಿದರವನ್ನು ಶೇ.0.7ರಷ್ಟು ಇಳಿಸಿದೆ. ಅಂದರೆ ಹಾಲಿ ಶೇ.9.15ರಷ್ಟಿದ್ದ ಬಡ್ಡಿದರ ಇನ್ನು ಶೇ.8.45ಕ್ಕೆ ಇಳಿಯಲಿದೆ. 

ಅದೇ ರೀತಿ 3 ಮತ್ತು 5 ವರ್ಷಗಳ ಮೇಲಿನ ಸಾಲದ ಬಡ್ಡಿದರ ಕೂಡ ಕ್ರಮವಾಗಿ ಶೇ.8.60 ಮತ್ತು ಶೇ.8.75ಕ್ಕೆ ಇಳಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಡವರು ಮತ್ತು ಮಧ್ಯಮ ವರ್ಗದವರತ್ತ ಕರುಣೆ ತೋರಿ ಎಂದು ಬ್ಯಾಂಕ್‌ ಗಳಿಗೆ ಹೊಸ ವರ್ಷದ ಮುನ್ನಾ ದಿನದ ಭಾಷಣದಲ್ಲಿ ಹೇಳಿದ್ದರು. ಅದು ಈಗ ಕಾರ್ಯರೂಪಕ್ಕೆ ಬರುತ್ತಿದೆ.

Advertisement

2008ರ ನಂತರ ಇಷ್ಟೊಂದುಬಡ್ಡಿ ದರ ಕಡಿತ 

2008ರಲ್ಲಿ ವಿಶ್ವದಾದ್ಯಂತ ಕಂಡುಬಂದಿದ್ದ ಮಹಾ ಆರ್ಥಿಕ ಕುಸಿತದ ವೇಳೆ ದೇಶದಲ್ಲೂ ಬಡ್ಡಿದರ ಇಳಿಕೆಯಾಗಿತ್ತು. ಅದರ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಡ್ಡಿ ದರ ಇಳಿಕೆಯಾಗುತ್ತಿರುವುದು ಇದೇ ಮೊದಲು.
 

Advertisement

Udayavani is now on Telegram. Click here to join our channel and stay updated with the latest news.

Next