Advertisement

ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಗೆ ಅರ್ಜಿ ಆಹ್ವಾನ

12:02 PM Apr 06, 2017 | Team Udayavani |

ಮಣಿಪಾಲ: ಯುವಜನಾಂಗವನ್ನು ಪತ್ರಿಕೋದ್ಯಮದತ್ತ ತೊಡಗಿಸುವ ಮತ್ತು ಉತ್ತಮ ವೃತ್ತಿ ನಿರತ ಪತ್ರಕರ್ತರಾಗಿ ರೂಪಿಸುವ ಉದ್ದೇಶದಿಂದ ಉದಯವಾಣಿ “ವಿದ್ಯಾರ್ಥಿ ಪತ್ರಕರ್ತ ಯೋಜನೆ’ (ಉದಯವಾಣಿ ಸ್ಟೂಡೆಂಟ್‌ ಜರ್ನಲಿಸ್ಟ್‌ ಪ್ರೋಗ್ರಾಂ) ಯನ್ನು ಆರಂಭಿಸಿದೆ.

Advertisement

ಎಂಎಂಎನ್‌ಎಲ್‌ (ಮಣಿಪಾಲ್‌ ಮೀಡಿಯಾ ನೆಟ್‌ ವರ್ಕ್‌ ಲಿಮಿಟೆಡ್‌) ನ ಮಹತ್ವದ ಯೋಜನೆ ಇದಾಗಿದೆ. ಆರಂಭದಲ್ಲಿ ಸುಳ್ಯ-ಪುತ್ತೂರು ವ್ಯಾಪ್ತಿಯಲ್ಲಿ ಇದನ್ನು ಪರಿಚಯಿಸಲಾಗುತ್ತಿದ್ದು, ಶೀಘ್ರವೇ ಉಳಿದ ಭಾಗಗಳಿಗೂ ವಿಸ್ತರಿಸುವ ಯೋಜನೆಯನ್ನು ಹೊಂದಲಾಗಿದೆ. ಆಸಕ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಆರಂಭಿಕ ತರಬೇತಿ ನೀಡಲಾಗುವುದು. ಬಳಿಕ ಪುನರ್‌ ಮನನ ಶಿಬಿರ ನೀಡಿ ವೃತ್ತಿಪರ ಪತ್ರಕರ್ತರನ್ನಾಗಿ ರೂಪಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಸಾಮಾಜಿಕ ಅಭಿವೃದ್ಧಿ ಯೋಜನೆಯಡಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. 

ಪಿಯುಸಿ ಮತ್ತು ಪದವಿಯ ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಪತ್ರಿಕೋದ್ಯಮ ಓದುತ್ತಿರುವವರೇ ಆಗಿರಬೇಕೆಂಬ ನಿರ್ಬಂಧವೇನೂ ಇಲ್ಲ. ಆಸಕ್ತಿ ಇರುವ ಇತರೆ ವಿಷಯಗಳ ವಿದ್ಯಾರ್ಥಿಗಳೂ ಈ ವಿಶಿಷ್ಟ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ತರಬೇತಿಯ ಬಳಿಕ ಪತ್ರಿಕೆಯ ವಿದ್ಯಾರ್ಥಿ ಪತ್ರಕರ್ತರಾಗಿ ಕೆಲಸ ಮಾಡಲು ಅವಕಾಶವಿರಲಿದ್ದು, ಪ್ರಮಾಣಪತ್ರವೂ ಲಭ್ಯವಾಗಲಿದೆ.  

ಆಸಕ್ತರು ತಮ್ಮ ಹೆಸರು, ಓದುತ್ತಿರುವ ಕಾಲೇಜು ಮತ್ತು ವಾಸಿಸುತ್ತಿರುವ ಊರಿನ ಹೆಸರು, ಅಧ್ಯಯನ ಮಾಡುತ್ತಿರುವ ಕೋರ್ಸ್‌ ಮತ್ತು ವರ್ಷ, ಇಮೇಲ್‌ ಐಡಿ ಹಾಗೂ ಸಂಪರ್ಕ ಸಂಖ್ಯೆ (ಮೊಬೈಲ್‌) sjp@udayavani.com ಯನ್ನು ಅಥವಾ ವಾಟ್ಸಪ್‌ ನಂಬರ್‌ 99862 88392 ಗೆ ಎ. 15ರೊಳಗೆ ಕಳಿಸಿ ನೋಂದಾಯಿಸಬಹುದು. ಆನಂತರ ಉಳಿದ ಪ್ರಕ್ರಿಯೆ ಕುರಿತು ವಿವರವಾದ ಮಾಹಿತಿಯನ್ನು ಸಂಸ್ಥೆ ರವಾನಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next