Advertisement
ರವಿವಾರ ಇಲ್ಲಿನ ಜಿಲ್ಲಾ ಗೃಹರಕ್ಷಕ ದಳ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಗೃಹರಕ್ಷಕರದಿನಾಚರಣೆಯನ್ನು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಗೃಹರಕ್ಷಕ ದಳದವರಿಗೆ ನೀಡಲಾಗುವ ಗೌರವಧನ ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಇಲ್ಲಿನ ಗೃಹರಕ್ಷಕ ದಳಕ್ಕೆ ಬೇಕಾಗುವ ಎಲ್ಲ ರೀತಿಯ ನೆರವನ್ನು ಪೊಲೀಸ್ ಇಲಾಖೆಯಿಂದ ನೀಡಲಾಗುವುದು
ಎಂದು ಅಭಯ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಗೃಹರಕ್ಷಕ ದಳದ ಸಮಾದೇಷ್ಠರಾದ ಸಂತೋಷಕುಮಾರ ಪಾಟೀಲ ಮಾತನಾಡಿ, 1967ರಲ್ಲಿ ಇಲ್ಲಿ ಗೃಹರಕ್ಷಕ ದಳಪಿಸಿಲಾಗಿದೆ. 50 ವರ್ಷಗಳನ್ನು ಸೇವೆಯಲ್ಲಿ ಪೂರೈಸುವ ಮೂಲಕ ಗೃಹರಕ್ಷಕ ದಳವು ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದರು.
Related Articles
Advertisement
ಗೃಹರಕ್ಷಕ ದಳದ ಉಪ ಸಮಾದೇಷ್ಠರಾದ ಮಲ್ಲಪ್ಪ ಪ್ರಸಕ್ತ ಸಾಲಿನ ಗೃಹರಕ್ಷಕ ದಳದ ಸಾಧನೆ ಬಿಂಬಿಸುವ ವಾರ್ಷಿಕ ವರದಿ ಮಂಡಿಸಿದರು. ರಾಮಣ್ಣಗೌಡ ಸ್ವಾಗತಿಸಿದರು. ಸಿದ್ರಾಮ ರಾಜಮಾನೆ ನಿರೂಪಿಸಿದರು.
ಇದಕ್ಕೂ ಮುನ್ನ ಕಮಾಂಡೆಂಟ್ ವಿಜಯಕುಮಾರ ಗೋಡಬೋಲೆ ನೇತ್ಥತ್ವದಲ್ಲಿ ನಡೆದ ಪಥಸಂಚಲನದಲ್ಲಿಮಹಿಳಾ ತುಕಡಿ ಸೇರಿದಂತೆ ನಾಲ್ಕು ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ ಜಿಲ್ಲಾ ಪೊಲೀಸ್ ರಿಷ್ಠಾಧಿಕಾರಿಗಳು ನಂತರ ಗೃಹ ರಕ್ಷಕ ದಳದ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚಿನ ಸಂಖ್ಯೆಯ ಗೃಹರಕ್ಷಕ ದಳದ ಸಿಬ್ಬಂದಿ, ಸಾರ್ವಜನಿಕರು ಭಾವಹಿಸಿದ್ದರು.